Asianet Suvarna News Asianet Suvarna News

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಹೇಗಿರಲಿದೆ‌ ಟ್ರಾಫಿಕ್ ರೂಲ್ಸ್?

ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸುರಕ್ಷಿತೆಯ ದೃಷ್ಟಿಯಿಂದ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

What Will Be the Traffic Rules for New Year Celebrations in Bengaluru grg
Author
First Published Dec 31, 2022, 8:20 AM IST

ಬೆಂಗಳೂರು(ಡಿ.31):  ಹೊಸ ವರ್ಷವನ್ನ ಬರಮಾಡಿಕೊಳ್ಳಲು ಸಿಲಿಕಾನ್‌ ಸಿಟಿ ಸಂಪೂರ್ಣ ಸಿದ್ಧವಾಗಿದೆ. ಕೊರೋನಾ ವೈರಸ್‌ ಕಾಟದಿಂದಾಗಿ 2021 ಹಾಗೂ 2022ರ ಹೊಸವರ್ಷ ಸ್ವಾಗತ ಸಂಭ್ರಮಾಚರಣೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಒಂದಿಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಹೊಸವರ್ಷ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಶನಿವಾರ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತಿಸಲು ಜನರು, ತಮ್ಮ ಅಭಿರುಚಿಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸುರಕ್ಷಿತೆಯ ದೃಷ್ಟಿಯಿಂದ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಎಲ್ಲೆಲ್ಲಿ ಸಂಚಾರ ಮಾಡಬಹುದು..?. ಎಲ್ಲೆಲ್ಲಿ ಸಂಚಾರ ಮಾಡಬಾರದು ‌ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. 

* ಎಂಜಿ ರಸ್ತೆ, ಬ್ರಿಡೇಗ್ ರಸ್ತೆ, ಚರ್ಚ್ ಸ್ಟ್ರೀಟ್, ಸೆಂಟ್ ಮಾರ್ಕ್ಸ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಮತ್ತು ರೆಸಿಡೆನ್ಸಿ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆ ನಿರ್ಬಂಧ. ಡಿ. 31 ರಿಂದ ಜ. 1 ರ ರಾತ್ರಿವರೆಗೂ ನಿರ್ಬಂಧ
* ಡಿ. 31 ರಾತ್ರಿ 8 ಗಂಟೆಯಿಂದ ಜ. 1 ರ ರಾತ್ರಿ ಒಂದು ಗಂಟೆಯವರೆಗೆ ಈ ಕಳೆಕಂಡ ರಸ್ತೆಗಳಲ್ಲಿ ವಾಹನ ಪ್ರವೇಶ ನಿರ್ಬಂಧ
* ಎಂಜಿ ರಸ್ತೆ 
* ಅನಿಲ್ ಕುಂಬ್ಲೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆಯ ಜಂಕ್ಷನ್ ವರೆಗೆ
* ಬ್ರಿಗೇಡ್ ರಸ್ತೆ 
* ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾ ಜಂಕ್ಷನ್ ವರೆಗೆ
* ಚರ್ಜ್ ಸ್ಟ್ರೀಟ್
* ಬ್ರಿಗೇಡ್ ರಸ್ತೆಯ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆಯ ಜಂಕ್ಷನ್ ವರೆಗೆ
* ಮ್ಯೂಸಿಯಂ ರಸ್ತೆ 
* ಎಂಜಿ ರಸ್ತೆಯ ಜಂಕ್ಷನ್ ನಿಂದ ಎಸ್ಬಿಐ ವೃತ್ತದವರೆಗೆ
* ರೆಸ್ಟ್ ಹೌಸ್ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆಯ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ
* ರೆಸಿಡೆನ್ಸಿ ಕ್ರಾಸ್ ರಸ್ತೆ
* ರೆಸಿಡೆನ್ಸಿ ಜಂಕ್ಷನ್ ರಸ್ತೆಯಿಂದ ಎಂಜಿ ರಸ್ತೆ ಜಂಕ್ಷನ್ ವರೆಗೆ
* ಡಿ.31ರ ಸಂಜೆ 4 ಗಂಟೆಯ ನಂತರ ಜ.1ರ ರಾತ್ರಿ 3 ಗಂಟೆಯವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ
* ಎಂಜಿ ರಸ್ತೆಯಲ್ಲಿ - ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದ‌ವರೆಗೆ
* ಬ್ರಿಗೇಡ್ ರಸ್ತೆಯಲ್ಲಿ - ಆರ್ಟ್ ಕ್ರ್ಯಾಫ್ಟ್ ಜಂಕ್ಷನ್ ನಿಂದ ಅಪೇರಾ ಜಂಕ್ಷನ್ ವರೆಗೆ
* ಚರ್ಚ್ ಸ್ರ್ಟೀಟ್ ರಸ್ತೆಯಿಂದ - ಬ್ರಿಗೇಡ್ ರಸ್ತೆಯಿಂದ ಸೆಂಟ್ ಮಾರ್ಕ್ಸ್ ಜಂಕ್ಷನ್ ವರೆಗೆ
* ರೆಸ್ಟ್ ಹೌಸ್ ರಸ್ತೆಯಲ್ಲಿ - ಬ್ರಿಗೇಡ್‌ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆಯ ಜಂಕ್ಷನ್ ವರೆಗೆ
* ಮ್ಯೂಸಿಯಂ ರಸ್ತೆಯಲ್ಲಿ - ಎಂಜಿ ರಸ್ತೆ ಜಂಕ್ಷನ್ ನಿಂದ ಎಸ್.ಬಿ.ಐ ವೃತ್ತದವರೆಗೆ

New Year 2023: ಹೊಸ ವರ್ಷ ಅದ್ಧೂರಿ ಸ್ವಾಗತಕ್ಕೆ ಬೆಂಗ್ಳೂರು ಸಜ್ಜು..!

ಈ ರಸ್ತೆಗಳಲ್ಲಿ  ಡಿ.31 ರಂದು ಸಂಜೆ 4 ಗಂಟೆಯ ಒಳಗಾಗಿ ವಾಹನ ತೆರವುಗೊಳಿಸುವಂತಿಲ್ಲ. ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು.

ವಾಹನ ಸವಾರರು ಸಂಚಾರ ಮಾಡಬೇಕಾದ ಬದಲಿ ಮಾರ್ಗ

ಡಿ. 31 ರಂದು ರಾತ್ರಿ ಎರಡು ಗಂಟೆಯ ನಂತರ ಎಂಜಿ ರಸ್ತೆಯಿಂದ ಹಲಸೂರು ಕಡೆ ಹೋಗುವವರು- ಅನಿಲ್ ಕುಂಬ್ಳೆ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸೆಂಟ್ರಲ್ ಸ್ಟ್ರೀಟ್ - ಬಿ.ಆರ್.ವಿ ಜಂಕ್ಷನ್ ಬಲ‌ ತಿರುವು ಪಡೆದು ಕಬ್ಬನ್ ರಸ್ತೆಯ ಮೂಲಕವಾಗಿ ವೆಬ್ಸ್ ಜಂಕ್ಷನ್ ಬಳಿಯಿಂದ ಸಾಗಬೇಕು. ಹಲಸೂರು ಕಡೆಯಿಂದ ಕಂಟೋನ್ ಮೆಂಟ್‌ ಕಡೆ ಸಾಗುವವರು. ಟ್ರಿನಿಟಿ ವೃತ್ತದಲ್ಲಿ ಬಲ‌ ತಿರುವು ಪಡೆದು- ಹಲಸೂರು ರಸ್ತ- ಡಿಕಂನ್ಸ್ ನ್ ರಸ್ತೆಯ ಮಾರ್ಗವಾಗಿ - ಕಬ್ಬನ್ ರಸ್ತೆ ಮೂಲಕ‌ ಸಂಚಾರ ಮಾಡಬೇಕು. 

ಕಾಮರಾಜ‌ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್ ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೂ ವಾಹನಗಳ ನಿಲುಗಡೆಗೆ‌ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ. ಪಾದಚಾರಿಗಳು ಬ್ರಿಗೇಡ್‌ ರಸ್ತೆಯಲ್ಲಿ ಎಂಜಿ ರಸ್ತೆ ಜಂಕ್ಷನ್ ನಿಂದ - ಅಪೇರಾ ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ಈ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ (ಒನ್ ವೇನಲ್ಲಿ) ನಡೆದುಕೊಂಡು ಹೋಗುವುದಕ್ಕೂ ಸಹ‌ ನಿಷೇಧ ಹೇರಲಾಗಿದೆ. ಪುನಃ ಎಂಜಿ‌ ರಸ್ತೆಗೆ ಬರಬೇಕಾದ್ರೆ ರೆಸಿಡೆನ್ಸಿ ರಸ್ತೆ ಕ್ರಾಸ್ ಮಾರ್ಗವಾಗಿ ಬರಲು ಅವಕಾಶ ಕಲ್ಪಿಸಲಾಗಿದೆ. 

ಡಿ. 31 ರಂದು ರಾತ್ರಿ 9 ಗಂಟೆಯಿಂದ ಜ.1 ರ ಬೆಳಿಗ್ಗೆ 6 ಗಂಟೆಯ‌ವರೆಗೂ  ಫ್ಲೈ ಓವರ್ ಮೇಲೆ ವಾಹನಗಳ‌ ನಿಷೇಧ ವಿಧಿಸಲಾಗಿದೆ. ಕುಡಿದು ವಾಹನ ಚಲಾವಣೆ ಮಾಡಿದ್ರೆ‌ ಕೇಸ್‌ ಬೀಳಲಿದೆ. ವೀಲ್ಹಿಂಗ್ ಡ್ರ್ಯಾಗ್ ರೇಸ್ ನಲ್ಲಿ ಬಾಗಿಯಾದ್ರೆ ‌ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. 

Follow Us:
Download App:
  • android
  • ios