ಸಾಯಲೆಂದು ಬಾವಿಗೆ ಬಿದ್ದ ಮಹಿಳೆ ಕಾಪಾಡಿದ ಕಾಲೇಜು ವಿದ್ಯಾರ್ಥಿಗಳು: ರಕ್ಷಣಾ ಕಾರ್ಯದ ಝಲಕ್ ನೋಡಿ...
ಕೌಟುಂಬಿಕ ಮನಸ್ತಾಪದಿಂದ ಬಾವಿಗೆ ಬಿದ್ದು ಸಾಯಲೆತ್ನಿಸಿದ ಮಹಿಳೆಯನ್ನು ವಿದ್ಯಾರ್ಥಿಗಳು ರಕ್ಷಣೆ ಮಾಡಿದ ಕಾರ್ಯ ತುಮಕೂರಿನ ಮಧುಗಿರಿಯಲ್ಲಿ ನಡೆದಿದೆ.
ತುಮಕೂರು (ಆ.13): ಇತ್ತೀಚೆಗೆ ಕೌಟುಂಬಿಕ ಕಲಹದ ಹಾಗೂ ಇತರೆ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ತುಮಕೂರಿನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಬಾವಿಗೆ ಹಾರಿದ ಮಹಿಳೆಯನ್ನು ಕಾಲೇಜು ವಿದ್ಯಾರ್ಥಿಗಳು ಬಾವಿಗೆ ಹಾರಿ ರಕ್ಷಣೆ ಮಾನವೀಯತೆ ಮೆರೆದಿದ್ದಾರೆ.
ಹೌದು, ನೀರಿಗೆ ಬಿದ್ದು ಕಾಪಾಡಿ, ಕಾಪಾಡಿ ಎನ್ನುವವರನ್ನು ಕಾಪಾಡುವುದು ಎಷ್ಟು ಕಷ್ಟದ ಕೆಲಸ ಎನ್ನುವುದು ನಿಮಗೆ ಗೊತ್ತು. ನೀರಲ್ಲಿ ಮುಳುಗಿದವರಿಗೆ ಆಸರೆ ಆಗೋಣ ಎಂದು ನಾವು ನೀರಿಗಿಳಿದರೆ ಸಾವು ಕಾಣುವುದು ಖಚಿತವೇ ಸರಿ. ಆದರೆ, ಆತ್ಮಹತ್ಯೆಗೆ ಯತ್ನಿಸಿ ಬಾವಿಗೆ ಹಾರಿದ ಮಹಿಳೆಯನ್ನು ತಮ್ಮ ಪ್ರಾಣ ಪಣಕ್ಕಿಟ್ಟು ಬಾವಿಗೆ ಹಾರಿ ರಕ್ಷಣೆ ಮಾಡಿದ ವಿದ್ಯಾರ್ಥಿಗಳ ಸಾಹಸಕ್ಕೆ ಮೆಚ್ಚಲೇಬೇಕು. ಈಜು ಬರುವ ಮೂವರು ವಿದ್ಯಾರ್ಥಿಗಳು ಬಾವಿಗೆ ಹಾರಿದ್ದಾರೆ. ಕೂಡಲೇ ಮೇಲಿದ್ದ ವಿದ್ಯಾರ್ಥಿಗಳು ಬಾವಿಗೆ ಹಗ್ಗವನ್ನು ಎಸೆದಿದ್ದಾರೆ. ಅದರಲ್ಲಿ ಒಬ್ಬ ವಿದ್ಯಾರ್ಥಿ ಹಗ್ಗ ಕಟ್ಟಿಕೊಂಡು ಮಹಿಳೆಯನ್ನು ರಕ್ಷಣೆ ಮಾಡಿ ದಡಕ್ಕೆ ಎಳೆದು ತಂದಿದ್ದಾನೆ. ನಂತರ, ಬಾವಿಗಿಳಿದ ಮೂವರೂ ಸೇರಿ ಮಹಿಳೆಯನ್ನು ಮೇಲಕ್ಕೆ ತಂದಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ವಿದ್ಯಾರ್ಥಿಗಳ ಸಾಹಸ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
'ಊರು ಎಂದ್ಮೇಲೆ ಹೊಲೆಗೇರಿ ಇರುತ್ತೆ' ಹೇಳಿಕೆಗೆ ಆಕ್ರೋಶ: ಕ್ಷಮೆ ಕೇಳಿದ ಬುದ್ಧಿವಂತ ಉಪೇಂದ್ರ
ಮಗಳ ಮದುವೆ ಆಗದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನ: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಓಬಳಮ್ಮ ಎಂದು ಗುರುತಿಸಲಾಗಿದೆ. ಈ ಮಹಿಳೆಯನ್ನು ಮಧುಗಿರಿ ಸರ್ಕಾರಿ ಡಿಗ್ರಿ ಕಾಲೇಜು ವಿದ್ಯಾರ್ಥಿಗಳು ರಕ್ಷಣೆ ಮಾಡಿದ್ದಾರೆ. ಇನ್ನು ಓಬಳಮ್ಮ ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮದ ನಿವಾಸಿಯಾಗಿದ್ದಾರೆ. ಈಕೆಯ ಮಗಳನ್ನು ಮದುವೆ ಆಗಲು ನಿರಾಕರಿಸಿದ ಸಹೋದರ ನಿರಾಕರಿಸಿದ್ದಾನೆಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಓಬಳಮ್ಮ ಬಾವಿಗೆ ಬಿದ್ದದ್ದನ್ನು ನೋಡಿದ ಒಬ್ಬ ವೃದ್ಧ ಈಕೆಯನ್ನು ರಕ್ಷಣೆ ಮಾಡುವಂತೆ ಕೂಗಿಕೊಂಡಿದ್ದಾನೆ.
ವಿದ್ಯಾರ್ಥಿಗಳಿಂದ ಸಮಯೋಚಿತ ಜಾಣ್ಮೆ: ಇನ್ನು ಬಾವಿಯ ಪಕ್ಕದಲ್ಲಿಯೇ ಇದ್ದ ರಸ್ತೆಯಲ್ಲಿದ್ದ ವಿದ್ಯಾರ್ಥಿಗಳು ಕೂಡಲೇ ಸಮಯೋಚಿತ ಜಾಣ್ಮೆಯನ್ನು ತೋರಿ ಮಹಿಳೆಯನನು ರಕ್ಷಣೆ ಮಾಡಿದ್ದಾರೆ. ಬಾವಿಯ ನೀರಿನಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಓಬಳಮ್ಮನನ್ನು ವಿದ್ಯಾರ್ಥಿಗಳ ಗುಂಪು ರಕ್ಷಣೆ ಮಾಡಿದೆ. ಇದರಿಂದ ಕಾಲೇಜು ಸಿಬ್ಬಂದಿ ಹಾಗೂ ಗ್ರಾಮಸ್ಥರಿಂದ ವಿದ್ಯಾರ್ಥಿಗಳಿಗೆ ಶ್ಲಾಘನೆ ವ್ಯಕ್ತವಾಗಿದೆ. ಜೊತೆಗೆ, ಎಂಥಹ ಕಷ್ಟಗಳಿದ್ದರೂ ಜೀವನದಲ್ಲಿ ಎಲ್ಲವನ್ನೂ ಎದುರಿಸಿ ನಡೆಯಬೇಕು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕಾಲೇಜಿನ ಉಪನ್ಯಾಸಕರು ಮತ್ತು ಗ್ರಾಮದ ಹಿರಿಯ ಮುಖಂಡರು ಬುದ್ಧಿ ಹೇಳಿದ್ದಾರೆ.
ಪತಿ ತೀರಿಕೊಂಡ ದಿನವೇ, ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ಮಹಿಳೆ
ಪ್ರಾಣಪಣಕ್ಕಿಟ್ಟು ಮಹಿಳೆ ರಕ್ಷಿಸಿದ ವಿದ್ಯಾರ್ಥಿಗಳಿಗೆ ಶ್ಲಾಘನೆ: ಮಹಿಳೆಯನ್ನು ರಕ್ಷಣೆ ಮಾಡಿದ ವಿದ್ಯಾರ್ಥಿಗಳು ಅನಿಲ್, ಪುನಿತ್ ಮತ್ತು ರೇಖಾ ಮಂಜುನಾಥ್ ಆಗಿದದಾರೆ. ಸರ್ಕಾರ ಪ್ರಥಮ ದರ್ಜೆ ಕಾಲೇಜು ವತಿಯಿಂದ ಎನ್.ಎಸ್.ಎಸ್ ಶಿಬಿರ ಆಯೋಜನೆ ಮಾಡಲಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಬಾವಿಯ ಅನತಿ ದೂರದಲ್ಲಿದ್ದ ಸ್ಥಳದಲ್ಲೇ ಹಗ್ಗ, ಹಾರೆ, ಸಲಿಕೆ, ಪರಕೆ ಹಾಗೂ ಇನ್ನಿತರ ಸಾಮಗ್ರಿಗಳನ್ನು ಹಿಡಿದು ಶ್ರಮದಾನ ಮಾಡುತ್ತಿದ್ದರು. ಈ ವೇಳೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಮಹಿಳೆ ಪ್ರಾಣ ರಕ್ಷಿಸಿದ್ದಾರೆ. ವಿದ್ಯಾರ್ಥಿಗಳ ಸಾಹಸಕ್ಕೆ ಸಾರ್ವಜನಿಕರ ಶ್ಲಾಘನೆ ವ್ಯಕ್ತವಾಗಿದೆ. ಈ ಘಟನೆ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.