ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ ಎಚ್ಚರಿಕೆ : ಯೆಲ್ಲೋ ಅಲರ್ಟ್
- ರಾಜ್ಯದಲ್ಲಿ ಅ.24ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಹೆಚ್ಚು ಮಳೆ
- ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ
ಬೆಂಗಳೂರು (ಅ.24): ರಾಜ್ಯದಲ್ಲಿ ಅ.24ರಂದು ಕರಾವಳಿ (Coastal) ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಹೆಚ್ಚು ಮಳೆಯಾಗಲಿದ್ದು (Rain), ಹವಾಮಾನ ಇಲಾಖೆ (Weather Department) ಯೆಲ್ಲೋ ಅಲರ್ಟ್ (Yellow Alert) ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ (Dakshina kannada), ಉಡುಪಿ (Udupi), ಉತ್ತರ ಕನ್ನಡ, ಶಿವಮೊಗ್ಗ (Shivamogga), ಚಿಕ್ಕಮಗಳೂರು (Chikkamagaluru), ಹಾಸನ, ಕೊಡಗು, ಮೈಸೂರು, ತುಮಕೂರು ಜಿಲ್ಲೆಯ ಕೆಲವು ಭಾಗದಲ್ಲಿ ಹೆಚ್ಚು ಮಳೆ ಬೀಳಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಅರಬ್ಬಿ ಸಮುದ್ರದ ಲಕ್ಷದ್ವೀಪ ಭಾಗದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ಮುಂಗಾರು (Monsoon) ಮಾರುತದ ಇರುವಿಕೆ ರಾಜ್ಯ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಗೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆ (weather Department) ತಿಳಿಸಿದೆ.
ಈಗ ಸಿಕ್ಕಿಂಗೂ ಜಲಗಂಡಾಂತರ: ಹಿಮಾಲಯ ತಪ್ಪಲಿಗೆ ತಲ್ಲಣ!
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರದ ತಾವರೆಕೆರೆಯಲ್ಲಿ 9.2 ಸೆಂಮೀ, ಚಿಕ್ಕಬಳ್ಳಾಪುರದ (Chikkaballapura) ಮುರುಗಮಲ್ಲ 8.7 ಸೆಂಮೀ, ಬೆಂಗಳೂರು (Bengaluru) ಗ್ರಾಮಾಂತರದ ತ್ಯಾಮಗೊಂಡ್ಲು 8 ಸೆಂಮೀ, ಹಾಸನದ ಕಟ್ಯಾದಲ್ಲಿ 7 ಸೆಂಮೀ ಮಳೆಯಾಗಿದೆ.
26ರಿಂದ ಹಿಂಗಾರು: ರಾಜ್ಯಕ್ಕೆ ಅಕ್ಟೋಬರ್ 26ರಿಂದ ಈಶಾನ್ಯ ಮಾರುತಗಳು ಪ್ರವೇಶವಾಗಲಿದ್ದು, ಹಿಂಗಾರು ಮಳೆ ಸುರಿಯಲಿದೆ. ಹಿಂಗಾರು ಮಾರುತಗಳು ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಮಳೆಗೆ ಕಾರಣವಾಗಲಿವೆ. ಕರಾವಳಿಯಲ್ಲಿ ಸಾಧಾರಣ ಮಳೆ ಸುರಿಸುತ್ತವೆ. ಉತ್ತರ ಒಳನಾಡಿನ ಜಿಲ್ಲೆಗಳ ಮೇಲೆ ಅಷ್ಟೊಂದು ಪ್ರಭಾವ ಬೀರುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.
ಹಲವೆಡೆ ಸುರಿದ ಭಾರೀ ಮಳೆ
ರಾಜ್ಯ ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರ ಉತ್ತಮವಾಗಿ ಮಳೆ(Rain) ಸುರಿದಿದ್ದು ಸಿಡಿಲಿಗೆ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿರುವ(Death) ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಹಳೇ ಮೈಸೂರಿನ(Mysuru) ಕೆಲ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಕೃಷಿಗೂ ಅಪಾರ ನಷ್ಟವಾಗಿದೆ.
ಕೊಪ್ಪಳ(Koppal) ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದ ರೈತ ಲಾಡೆನ್ಸಾಬ್(29), ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸಿದ್ದಪ್ಪ(40), ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮೀಸೆತಿಮ್ಮನಹಳ್ಳಿಯ ಲೋಕೇಶ್ ನಾಯಕ (47)ಯಲ್ಲಾಪುರ ತಾಲೂಕಿನ ಕಿರವತ್ತಿಯ ಖಾರೇವಾಡದ ಜನಾಬಾಯಿ ಕಾನು ಶೆಳಕೆ (40) ಮೃತಪಟ್ಟವರು. ಇನ್ನು ಐವರು ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು(Lightning Strikes) ಬಡಿದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಗುಡುಗು ಸಿಡಿಲಿನನೊಂದಿಗೆ ಭರ್ಜರಿ ಮಳೆಯಾಗಿದ್ದು ಡಂಬಳ ಹೋಬಳಿ ವ್ಯಾಪ್ತಿಯ ಡೋಣಿ ತಾಂಡಾದ ಹೊರವಲಯದಲ್ಲಿ ಸಿಡಿಲಿಗೆ 11 ಕುರಿಗಳು(Sheeps) ಮೃತಪಟ್ಟಿವೆ.
ಕೊಪ್ಪಳ: ನೇಪಾಳ ಗಡಿಯಲ್ಲಿ ಮಳೆಗೆ ಸಿಲುಕಿದ ಗಂಗಾವತಿಯ ಏಳು ಜನ
ಚಾಮರಾಜನಗರ ಜಿಲ್ಲೆ ಹನೂರಿನ ತೋಮಿಯರ್ ಪಾಳ್ಯ ಮತ್ತು ಹಾಸನ ಜಿಲ್ಲೆ ಬೇಲೂರಿನ ಮಲ್ಲಿಕಾರ್ಜುನಪುರ ಗ್ರಾಮಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮನೆ ಕುಸಿದ ವೇಳೆ ಮನೆಯಲ್ಲಿದ್ದವರು ಹೊರಗೋಡಿ ಬಂದಿದ್ದರಿಂದ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.