Asianet Suvarna News Asianet Suvarna News

ಕೊಪ್ಪಳ: ನೇಪಾಳ ಗಡಿಯಲ್ಲಿ ಮಳೆಗೆ ಸಿಲುಕಿದ ಗಂಗಾವತಿಯ ಏಳು ಜನ

*  ಗಂಗಾವತಿಯಿಂದ ಚಾರಣಕ್ಕೆ ತೆರಳಿದ್ದ ತಂಡ
*  ಟುಗ್ಲಿಂಗ್‌ ಮತ್ತು ಕಾಲಾಪೋಕಿ ಎಂಬ ಅತಿ ಎತ್ತರದ ಶಿಖರ ಹತ್ತಲು ಯತ್ನ
*  ದಿಢೀರ್‌ ಬದಲಾದ ವಾತಾವರಣದಿಂದ ಹಿಮಪಾತ 
 

7 People from Gangavati Faces Problems due to Heavy Rain in Nepal Border grg
Author
Bengaluru, First Published Oct 23, 2021, 3:22 PM IST

ಗಂಗಾವತಿ(ಅ.23): ನೇಪಾಳ(Nepal) ಗಡಿಯಲ್ಲಿ ಕುಂಭ ದ್ರೋಣ ಮಳೆಗೆ ಕೊಪ್ಪಳ(Koppal) ಜಿಲ್ಲೆಯ ಗಂಗಾವತಿಯ ಚಾರಣ ತಂಡದ ಏಳು ಜನರು ಸಿಕ್ಕಿ ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.

ಗಂಗಾವತಿ(Gangavati) ವಾಣಿಜ್ಯೋದ್ಯಮಿ ಬಸವರಾಜ್‌, ರವಿ ಚೈತನ್ಯ, ಶಾಮ್‌, ಯೋಗೇಶ ಮಹೋತಾ ಮತ್ತು ನಗರದ ಶಿಕ್ಷಣ ಕ್ಷೇತ್ರದಲ್ಲಿನ ಉದ್ಯಮಿ ರವಿಚೈತನ್ಯ ರೆಡ್ಡಿ, ಅಕ್ಕಿ ವ್ಯಾಪಾರಿಗಳಾದ ಬಸವರಾಜ, ನಿರಂಜನ ಅವರು ಮಳೆಗೆ(Rain) ಸಿಕ್ಕಿ ಹಾಕಿಕೊಂಡು ಅಪಾಯದಿಂದ ಪಾರಾಗಿದ್ದಾರೆ.

ಗಂಗಾವತಿ: ಕೊಪ್ಪಳ ಡಿಸಿ ಕುದುರೆ ಸವಾರಿ..!

ನೇಪಾಳದಲ್ಲಿ ಎತ್ತರದ ಗಿರಿಶಿಖರಗಳನ್ನು(Mountain) ಹತ್ತಬೇಕೆಂಬ ನಿರ್ಧಾರದಿಂದ ಕಳೆದ ಒಂದು ವಾರದ ಹಿಂದೆ ಗಂಗಾವತಿಯಿಂದ ಪಶ್ಚಿಮ ಬಂಗಾಳದ(West Bengal) ಮೂಲಕ ಸಿಲಿಗುರಿಯ ಮಾನೆ ಭಾಗ್‌ ಎಂಬ ಬೆಟ್ಟದ ಪ್ರದೇಶ ಚಾರಣ ಕೈಗೊಂಡಿದ್ದಾರೆ. ಬಳಿಕ ನೇಪಾಳ ಮತ್ತು ಭಾರತ(India) ಗಡಿ ಪ್ರದೇಶವಾದ ಡಾರ್ಜಿಲಿಂಗ್‌(Darjeeling) ಪ್ರವಾಸಕ್ಕೆ(Tour) ತೆರಳಿದ್ದಾರೆ. ಬಳಿಕ ನೇಪಾಳದ ಗಡಿಯಲ್ಲಿ ಬರುವ ಟುಗ್ಲಿಂಗ್‌ ಮತ್ತು ಕಾಲಾಪೋಕಿ ಎಂಬ ಅತಿ ಎತ್ತರದ ಶಿಖರವನ್ನು ಹತ್ತಲು ಯತ್ನಿಸಿದ್ದಾರೆ.

ನೇಪಾಳ ಹಾಗೂ ಭಾರತದ ಗಡಿಯಲ್ಲಿನ ಅತಿ ಎತ್ತರದ ಶಿಖರ ಪರ್ವತ ಕಾಲಾಪೋಕಿಯಲ್ಲಿನ ಬೆಟ್ಟ ಎತ್ತರದ ಗಿರಿಶಿಖರ ಕಾಂಚನಚುಂಗ್‌ ಚಾರಣ ಕೈಗೊಳ್ಳಲು ನಿರ್ಧರಿಸಿದ್ದರು. ಆದರೆ ಪರ್ವತಾರೋಹಣ ಸಂದರ್ಭದಲ್ಲಿ ದಿಢೀರ್‌ ಬದಲಾದ ವಾತಾವರಣದಿಂದ ಹಿಮಪಾತ(Snowfall) ಬೀಳಲಾರಂಭಿಸಿದೆ. ಅಪಾಯವಾಗುತ್ತದೆ ಎಂದು ಮನಗಂಡು ಚಾರಣ ಮೊಟಕುಗೊಳಿಸಿ ಸ್ಥಳೀಯರ ಸಹಾಯದಿಂದ ವಾಪಾಸ್ಸಾಗಿದ್ದಾರೆ. ಆದರೆ ಉತ್ತರ ಭಾರತದಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಈಗಾಗಲೇ ಉತ್ತರಾಖಂಡ್‌ ಸಂಪೂರ್ಣ ಜಲಾವೃತಗೊಂಡಿದ್ದು ಸಾವು ನೋವುಗಳು ಅಧಿಕವಾಗಿವೆ. ಹೀಗಾಗಿ ಗಂಗಾವತಿಯ ಯುವಕರು ಸೇಫ್‌ ಆಗಿರುವುದಾಗಿ ನಿರಂಜನ ತಿಳಿಸಿದ್ದಾರೆ.
 

Follow Us:
Download App:
  • android
  • ios