ಬೆಂಗಳೂರು (ಆ.27): ರಾಜ್ಯದ ಕೆಲವು ಕಡೆಗಳಲ್ಲಿ ಆ.28ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆ.30ರಂದು ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ನಿರೀಕ್ಷೆ ಇದೆ.

ಮಹಾಮಳೆಗೆ ತತ್ತರಿಸಿದೆ ಭಾರತ, 3 ರಾಜ್ಯಗಳಿಗೆ ಕಂಟಕ, 5 ರಾಜ್ಯಗಳಿಗೆ ಅಪಾಯ!...

ಆ.26ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ 13.6 ಸೆಂ.ಮಿ, ಯಾದಗಿರಿಯ ಕೆಂಭಾವಿ 18.8, ಆಗುಂಬೆ 8, ಬಳ್ಳಾರಿಯ ಕುಡುತಿನಿ ಹಾಗೂ ದಾವಣಗೆರೆಯ ಸಂತೆಬೆನ್ನೂರಿನಲ್ಲಿ 2 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಂದು ಪರಿಹಾರಕ್ಕಾಗಿ ಜಗಳವಾಡಿದ್ದ ತಲಕಾವೇರಿ ಅರ್ಚಕರ ಮಕ್ಕಳ ಮತಾಂತರದ ವಿಷ್ಯ ರಟ್ಟು

ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನೆರೆ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಜನರನ್ನು ಸುರಕ್ಷತೆ ದೃಷ್ಟಿಯಿಂದ ಇವಿಧ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿ ಆಶ್ರಯ ನೀಡಲಾಗಿತ್ತು. ಕಳೆದ ವರ್ಷವೂ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗು ಭಾರೀ ಅನಾಹುತ ಎದುರಿಸಿದ್ದು, ಈ ವರ್ಷ ಮುನ್ನೆಚ್ಚರಿಕೆಯಾಗಿ ರಕ್ಷಣಾ ತಂಡಗಳು ಆಗಮಿಸಿ ಎಲ್ಲಾ ರೀತಿಯ ಪೂರ್ವ ಮುನ್ನೆಚ್ಚರಿಕಾ ಕ್ರಮಗಳನ್ನು ಕೆಐಗೊಂಡಿದ್ದವು.