ಹಾಸನ(ಸೆ.09): ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಮತ್ತೊಂದೆಡೆ ಜನಪರ ಆಡಳಿತ ನಡೆಯುತ್ತಿದ್ದರೂ ಬಿಜೆಪಿ ನಾಯಕರ ಅಧಿಕಾರದ ಆಸೆಯಿಂದ ಕುಮಾರಣ್ಣನ ಸರ್ಕಾರ ಪಥನಗೊಂಡಿದೆ. ಆದರೂ ಭಯ ಪಡುವ ಅಗತ್ಯವಿಲ್ಲ ಮತ್ತೊಮ್ಮೆ ಜೆಡಿಎಸ್‌ನ್ನು ಭದ್ರವಾಗಿ ಕಟ್ಟಿಬೆಳೆಸುವ ಮೂಲಕ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಕಾರ್ಯಕರ್ತರಿಗೆ ಕರೆ ನೀಡಿದರು.

ಅರಸೀಕೆರೆ ನಗರದ ಹೊರ ವಲಯದಲ್ಲಿರುವ ಕಸ್ತೂರ ಬಾ ಗಾಂಧಿ ಶಿಬಿರದ ಆಡಿಟೋರಿಯಂನಲ್ಲಿ ಭಾನುವಾರ ತಾಲೂಕು ಜೆಡಿಎಸ್‌ನಿಂದ ಆಯೋಜಿಸಿದ್ದ ಕೃತಜ್ಞತಾ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರಪರ ಚಿಂತಕರಾಗಿದ್ದ ಕುಮಾರಣ್ಣ ರಾಜ್ಯದ ರೈತರಿಗೆ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಬಳಿಕ ರೈತರ ಸಾಲಮನ್ನಾ ಮಾಡಿದ್ದಾರೆ ಎಂದರು.

'ಸರ್ಕಾರ ಯಾವುದೇ ಇರಲಿ, ನಾವು ನಿಮ್ಮ ಜೊತೆಗಿದ್ದೇವೆ':

ಸರ್ಕಾರ ಯಾವುದೇ ಇರಲಿ ಕಾರ್ಯಕರ್ತರಲ್ಲಿ ಅಂಜಿಕೆ ಬೇಡ. ನಿಮ್ಮೊಟ್ಟಿಗೆ ಪಕ್ಷದ ಎಲ್ಲ ನಾಯಕರು ಇದ್ದಾರೆ. ಅದೇ ರೀತಿ ಪಕ್ಷದ ನಾಯಕರಿಗೆ ಕಾರ್ಯಕರ್ತರೇ ಶಕ್ತಿ ಪರಸ್ಪರ ನಾವು ನೀವು ಅರಿತು ರಾಜ್ಯದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಕುಮಾರಸ್ವಾಮಿ ಸರ್ಕಾರದ ಸಾಧನೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.

ಎಚ್.ಡಿ.ರೇವಣ್ಣಗೂ ಬಂದಿತ್ತಾ BJP ಆಫರ್‌ ?

ಮಾಜಿ ಸಚಿವ ರೇವಣ್ಣ ಮಾತನಾಡಿ, ರಾಜ್ಯದ 12 ಜಿಲ್ಲೆಗಳಲ್ಲಿ ಪ್ರವಾಹದಿಂದ ಜನರು ಬೀದಿಗೆ ಬಿದ್ದು ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಥಳಕ್ಕೆ ಭೇಟಿ ನೀಡಿದರೂ ಈ ವರೆಗೆ 1 ಪೈಸೆನ್ನೂ ಪರಿಹಾರ ನೀಡಿಲ್ಲ. ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರಿಗೆ ಸೂಕ್ತ ಪರಾರ‍ಯಯ ವ್ಯವಸ್ಥೆ ಮಾಡಬೇಕಿದ್ದ ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಬಂದರೂ ತಿರುಗಿಯೂ ನೋಡದೆ ಹೋಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು.

ಎರಡೇ ತಿಂಗಳಲ್ಲಿ ಸರ್ಕಾರದ ಅಧಿಕಾರ ಹೋಗುತ್ತೆ:

ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ವಾಮಾ ಮಾರ್ಗದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರ ಇನ್ನೇರಡು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಇವರನ್ನು ನಂಬಿ ರಾಜೀನಾಮೆ ನೀಡಿದ್ದ 17 ಮಂದಿ ಅನರ್ಹ ಶಾಸಕರು ಅನರ್ಹರರಾಗೇ ಉಳಿಯಲಿದ್ದಾರೆ ಎಂದು ಭವಿಷ್ಯ ನುಡಿದರು.

'ಬಿಜೆಪಿ ಸಾಧನೆ ಚಿಕ್ಕದು ಬಾಯಿ ದೊಡ್ಡದು'..!

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ ಕುಮಾರಸ್ವಾಮಿ, ಶಾಸಕ ಲಿಂಗೇಶ್‌, ನಗರಸಭೆ ಮಾಜಿ ಅಧ್ಯಕ್ಷ ಎಂ.ಸಮೀವುಲ್ಲಾ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅರುಣ್‌ ಕುಮಾರ್‌, ಜಿಪಂ ಸದಸ್ಯರಾದ ಬಿಳಿ ಚೌಡಯ್ಯ, ಲೀಲಾ ಧರ್ಮಶೇಖರ್‌, ತಾಪಂ ಅಧ್ಯಕ್ಷೆ ರೂಪಗುರು ಮೂರ್ತಿ, ಉಪಾಧ್ಯಕ್ಷೆ ಪ್ರೇಮಾ ಧರ್ಮಣ್ಣ, ಜೆಡಿಎಸ್‌ ಮುಖಂಡರಾದ ಹನುಮಪ್ಪ, ಪದ್ಮ, ಜಿ.ಟಿ. ಗಣೇಶ್‌, ಶಿವಮೂರ್ತಿ, ಹುಚ್ಚೇಗೌಡ ಇತರರು ಇದ್ದರು.