Chamarajanagar: ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಬೇಕು: ನ್ಯಾ.ಬಿ.ಎಸ್.ಭಾರತಿ
ಯಾವುದೇ ಒಂದು ನೀತಿ ಜಾರಿಗೊಳಿಸುವಾಗ ಇಡೀ ರಾಷ್ಟ್ರದ ಹಿತವನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾಗುತ್ತದೆ. ಅದರಲ್ಲಿ ಕೆಲ ಸಣ್ಣಪುಟ್ಟತ ಪ್ಪುಗಳಿರುತ್ತದೆ, ಅವುಗಳನ್ನೇ ದೊಡ್ಡದು ಮಾಡಿ, ಗಂಟೆಗಟ್ಟಲೆ, ದಿನಗಟ್ಟಲೇ ಚರ್ಚೆ ಮಾಡುವುದನ್ನು ಬಿಟ್ಟು ಅದರಲ್ಲಿನ ಒಳ್ಳೆಯ ಮೌಲ್ಯಗಳ ಚಿಂತನೆ ನಡೆಸಬೇಕು.
ಚಾಮರಾಜನಗರ (ಸೆ.17): ಯಾವುದೇ ಒಂದು ನೀತಿ ಜಾರಿಗೊಳಿಸುವಾಗ ಇಡೀ ರಾಷ್ಟ್ರದ ಹಿತವನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾಗುತ್ತದೆ. ಅದರಲ್ಲಿ ಕೆಲ ಸಣ್ಣಪುಟ್ಟತ ಪ್ಪುಗಳಿರುತ್ತದೆ, ಅವುಗಳನ್ನೇ ದೊಡ್ಡದು ಮಾಡಿ, ಗಂಟೆಗಟ್ಟಲೆ, ದಿನಗಟ್ಟಲೇ ಚರ್ಚೆ ಮಾಡುವುದನ್ನು ಬಿಟ್ಟು ಅದರಲ್ಲಿನ ಒಳ್ಳೆಯ ಮೌಲ್ಯಗಳ ಚಿಂತನೆ ನಡೆಸಿ, ನಾವೆಲರೂ ಒಂದೇ ಎಂಬ ಭಾವನೆ ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾ.ಬಿ.ಎಸ್.ಭಾರತಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಹಾಗೂ ಸಾಕ್ಷಾರತಾ ಇಲಾಖೆ ಹಾಗೂ ಮೊಬಿಲಿಟಿ ಇಂಡಿಯಾ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರಡಿ ಸಮನ್ವಯ ಶಿಕ್ಷಣ ಕುರಿತು ಜಿಲ್ಲಾಡಳಿತ ಭವನದಲ್ಲಿರುವ ಹಳೆಯ ಕೆಡಿಪಿ ಸಭಾಂಗಣದಲ್ಲಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜಾತಿ, ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವಂತಹ ಚರ್ಚೆಗಳು ನಡೆಯುತ್ತಿರುವುದು ವಿಷಾದನೀಯ. ಇದು ದೇಶದ ಶಿಕ್ಷಣದ ಪೂರಕ ಅಭಿವೃದ್ಧಿಗೆ ಕುಂಠಿತವಾಗುತ್ತದೆ, ಹಳೆಯ ಆಲದ ಮರಕ್ಕೆ ಜೋತು ಬೀಳುವುದೇ ಹೆಚ್ಚಾಗುತ್ತದೆ ಇದು ಆಗಬಾರದು ಎಂದರು.
ಭಾರತ್ ಜೋಡೋ, ಕಾಂಗ್ರೆಸ್ ಚೋಡೋ: ನಿಜಗುಣರಾಜು ವ್ಯಂಗ್ಯ
ಇಂದಿನ ವಿದ್ಯಾರ್ಥಿಗಳಿಗೆ ಹೊಸ ನೀತಿಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ, ಶಿಕ್ಷಣದಲ್ಲಿ ಉನ್ನತಿ ಸಾಧಿಸಿ ಎಂದು ತಿಳಿಸಬೇಕು, ಸಣ್ಣಪುಟ್ಟತಪ್ಪು ಹೇಳಿ ಗೊಂದಲ ಮೂಡಿಸಬಾರದು, ಒಂದು ಹೊಸ ನೀತಿ ಜಾರಿ ಮಾಡುವಾಗ ಎಲ್ಲವನ್ನು ಪರಿಶೀಲಿಸಿಯೇ ತಜ್ಞರು ನೀತಿ ರೂಪಿಸುತ್ತಾರೆ, ಇದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು. ಪ್ರತಿಯೊಬ್ಬ ಸ್ವಾತಂತ್ರತ್ರ್ಯ ಹೋರಾಟಗಾರರು ತಮ್ಮದೇ ಆದ ನೀತಿಯಿಂದ ದೇಶದ ಸ್ವಾತಂತ್ರತ್ರ್ಯಕ್ಕಾಗಿ ಹೋರಾಡಿ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ, ಆದನ್ನು ಬಿಟ್ಟು ಅವರು ಆ ಜಾತಿಯವರು, ಇನ್ನೊಂದು ಧರ್ಮದವರು, ಅವರು ಹೋರಾಟವನ್ನೇ ಮಾಡಿಲ್ಲ ಎಂಬ ಅನಗತ್ಯ ಚರ್ಚೆಗಳು ಬೇಡ, ನಾವೆಲರೂ ಒಂದೇ ಎಂಬ ಭಾವನೆ ಮೂಡುವ ಬೋಧನೆಗಳು ಆಗಬೇಕು ಎಂದರು.
ಅತಿ ಹೆಚ್ಚು ಉನ್ನತ ಶಿಕ್ಷಣ ಪಡೆದವರೇ ಜಾತಿ, ಧರ್ಮಕ್ಕೆ ಜೋತು ಬೀಳುತ್ತಿರುವುದೇ ವಿಷಾದನೀಯ. ಇದೊಂದು ಮಹತ್ವಪೂರ್ಣ ಕಾರ್ಯಗಾರ, ಶಿಕ್ಷಣ ನೀತಿಯಲ್ಲಿರುವ ಸಣ್ಣ ಹುಳುಕುಗಳನ್ನೇ ದೊಡ್ಡದು ಮಾಡದೇ, ಎಲ್ಲರಿಗೂ ಉನ್ನತ ಶಿಕ್ಷಣ ದೊರುಕುವಲ್ಲಿ ಚಿಂತನೆ ನಡೆಸಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಶ್ರೀಧರ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಇಂದು ಶಿಕ್ಷಣದಲ್ಲಿ ಸರ್ಟಿಫಿಕೇಟ್‌ಗೆ ಸೀಮಿತವಾಗಿ ಎಲ್ಲಾ ಆಯ್ಕೆಗಳಲ್ಲೂ ಮೋಸ ಮಾಡುವುದೇ ಹೆಚ್ಚಾಗಿದೆ ಎಂದರು. ಪ್ರತಿಭಾವಂತರಿಗೆ ಅವಕಾಶಗಳು ಸಿಗಬೇಕು ಎನ್ನುವ ನಿಟ್ಟಿನಲ್ಲಿ ರೂಪಿಸಿರುವ ಶಿಕ್ಷಣ ನೀತಿ 2040ರ ವೇಳೆಗೆ ಒಂದು ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದರು.
ಭಾರತ್ ಜೋಡೋ ಯಾತ್ರೆಗೆ ಗುಂಡ್ಲುಪೇಟೆಯಲ್ಲಿ ಸ್ಥಳ ಪರಿಶೀಲಿಸಿದ ಸಂಸದ ಡಿ.ಕೆ.ಸುರೇಶ್
ಶಿಕ್ಷಣದ ಜೊತೆಗೆ ಶಿಕ್ಷಕರು, ಪೋಕ್ಸೋ ಕಾಯಿದೆ, ಬಾಲವಿವಾಹ, ಬಾಲಪರಾಧಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು, ಹಾಗೇಯೇ, ಲೋಕ್ ಆದಾಲತ್ ಬಗ್ಗೆ ತಿಳಿಸಬೇಕು ಎಂದರು. ಡಯಟ್ ಪ್ರಾಂಶುಪಾಲರಾದ ಎಚ್.ಕೆ. ಪಾಂಡು ಅವರು ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಸೇವಾ ಇನ್‌ಆಕ್ಷನ್ ನಿರ್ದೇಶಕಿ ಮಂಜುಳ ನಂಜುಂಡಯ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊಸ ಶಿಕ್ಷಣ ನೀತಿಯ ಬಗ್ಗೆ ತಿಳಿಸಿಕೊಟ್ಟರು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಸ್.ಎನ್. ಮಂಜುನಾಥ್, ಮೊಬಿಲಿಟಿ ಇಂಡಿಯಾ ಕಾರ್ಯಕಾರಿಣಿ ನಿರ್ದೇಶಕಿ ಅಲ್ಬಿನಾ ಶಂಕರ್, ಕಾರ್ಯಕ್ರಮ ವ್ಯವಸ್ಥಾಪಕ ಎಸ್.ಎನ್. ಆನಂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.