KRS Dam Water level Today: ಮಳೆ ಕೊರತೆ ಮತ್ತು ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾರಣ ಕೆ.ಆರ್.ಎಸ್ ಅಣೆಕಟ್ಟೆಯ ನೀರಿನ ಮಟ್ಟ 99 ಅಡಿಗೆ ಕುಸಿದಿದೆ. ಇದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಭಾರಿ ಸಮಸ್ಯೆ ಎದುರಾಗುವ ಆತಂಕವಿದೆ.
ಶ್ರೀರಂಗಪಟ್ಟಣ (ನ.6): ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದಾಗಿ ಕೆ.ಆರ್.ಸಾಗರ ಅಣೆಕಟ್ಟೆ ಒಳ ಹರಿವಿನ ನೀರಿನ ಪ್ರಮಾಣ ಇಳಿಮುಖ ಕಂಡು ಗುರುವಾರ ಸಂಜೆ ವೇಳೆಗೆ 99 ಅಡಿಗೆ ತಲುಪಿದೆ. ಮಳೆ ಕೊರತೆ, ಕಾವೇರಿ ನಿರ್ವಹಣಾ ಸಮಿತಿ ಅದೇಶದಂತೆ ತಮಿಳುನಾಡಿಗೆ ನದಿ ಮೂಲಕ ನೀರು ಹರಿಸುತ್ತಿರುವ ಪರಿಣಾಮ ಅಣೆಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ.
ಇದರಿಂದ ಮುಂದಿನ ದಿನಗಳಲ್ಲಿ ನೀರಿನ ಕೊರತೆಯಿಂದಾಗಿ ಜನರಿಗೆ ಕುಡಿಯುವ ನೀರು ಮತ್ತು ರೈತರು ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಸಮಸ್ಯೆ ಎದುರಾಗಲಿದೆ. ಕಳೆದ ವರ್ಷ ಇದೇ ದಿನ 2025ರ ನವೆಂಬರ್ ಮೊದಲ ವಾರ 124.80 ಅಡಿ ಸಂಗ್ರಹವಾಗಿ ಅಣೆಕಟ್ಟೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು.
ಮುಖ ಜಲಾಶಯಗಳ ನೀರಿನ ಮಟ್ಟ (4-11-2026)
ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ
ಕಬಿನಿ 67% 2284 2272.90
ಹೇಮಾವತಿ 49% 2922 2897.07
ತುಂಗಭದ್ರಾ 37% 1633 1610.59
ಸೂಪಾ(ಮೀ.) 50% 564 543.85
ಕೆಆರ್ಎಸ್ 46% 124.80 100.12
ಘಟಪ್ರಭಾ 96% 2175 2172.55
ಲಿಂಗನಮಕ್ಕಿ 50% 1819.12 1791.30
ಭದ್ರಾ 78% 2158 2144.72
ಹಾರಂಗಿ 66% 2859 2848.74
ಆಲಮಟ್ಟಿ(ಮೀ.) 55% 519.60 515.42
ನಾರಾಯಣಪುರ(ಮೀ.) 64% 492.25 489.20
ಮಲಪ್ರಭಾ 55% 2079.50 2064.86






