Shivamogga: ವಾಚಮನ್​ ಮೇಲೆ ಸಕ್ರೆಬೈಲ್ ಬಿಡಾರದ ಆನೆ ದಾಳಿ, ಆಸ್ಪತ್ರೆಗೆ ದಾಖಲು

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸಕ್ರೆಬೈಲ್ ಆನೆ ಬಿಡಾರದಲ್ಲಿ ವಾಚಮನ್​ ಮೇಲೆ ಬಿಡಾರದ ಆನೆ ದಾಳಿ  ನಡೆಸಿರುವ ಘಟನೆ ನಡೆದಿದೆ. ಬೆಳಗ್ಗೆ ಆಲೆ  ಹೆಸರಿನ ಆನೆಯನ್ನು ಬಿಡಾರದಿಂದ  ಕಾಡಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಸಕ್ರೆಬೈಲ್​ ಬಿಡಾರದ ಗೇಟ್​ ಬಳಿ ನಿಂತಿದ್ದ ವಾಚಮನ್​ ಮೇಲೆ ದಾಳಿ ನಡೆಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Watchman attacked by an elephant in the Sakrebailu elephant camp gow

ಶಿವಮೊಗ್ಗ (ಫೆ.21): ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸಕ್ರೆಬೈಲ್ ಆನೆ ಬಿಡಾರದಲ್ಲಿ ವಾಚಮನ್​ ಮೇಲೆ ಬಿಡಾರದ ಆನೆ ದಾಳಿ  ನಡೆಸಿರುವ ಘಟನೆ ನಡೆದಿದೆ. ಬೆಳಗ್ಗೆ ಆಲೆ  ಹೆಸರಿನ ಆನೆಯನ್ನು ಬಿಡಾರದಿಂದ  ಕಾಡಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಸಕ್ರೆಬೈಲ್​ ಬಿಡಾರದ ಗೇಟ್​ ಬಳಿ ನಿಂತಿದ್ದ ವಾಚಮನ್​ ಚೌಡಪ್ಪ ಎಂಬುವವರ  ಮೇಲೆ ಆಲೆ ಆನೆ ದಾಳಿ ನಡೆಸಿದೆ. ವಾಚಮನ್​ ಚೌಡಪ್ಪ, ಆನೆಗಳಿಗೆ ಆಗಾಗ ಬಾಳೆಹಣ್ಣು ತಿನ್ನಿಸುತ್ತಿದ್ದು ಎಂದಿನಂತೆ ಇಂದು ಕೂಡ ತಿನ್ನಿಸಲು ಮುಂದಾಗಿದ್ದಾರೆ. ಬಾಳೆಹಣ್ಣು ತಿನ್ನಿಸಲು ಬಂದ  ಚೌಡಪ್ಪರ ಮೇಲೆ ದಾಳಿ ಮಾಡಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ಧಾರೆ. ಚೌಡಪ್ಪ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಶಿವಮೊಗ್ಗದ  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ರಾಜ್ಯ ಎರಡನೇ ಅತೀ ದೊಡ್ಡ ಆನೆ ಶಿಬಿರ, ಸದಾ ಪ್ರವಾಸಿಗರನ್ನು ಆರ್ಕಷಿಸುವ ತಾಣವಾಗಿರುವ ಸಕ್ರೆಬೈಲು ಆನೆ ಬಿಡಾರದಲ್ಲಿ ಈಗ ಆನೆಗಳ ಸಂಖ್ಯೆ ಕುಸಿಯುತ್ತಲೇ ಇದೆ. ಇತ್ತೀಚಿನ ವರ್ಷದಲ್ಲಿ ಆನೆ ಬಿಡಾರದ ಅನೇಕ ಆನೆಗಳು ಸಾವನ್ನಪ್ಪಿರುವುದು ಒಂದೆಡೆಯಾದರೆ, ಸರ್ಕಾರದಿಂದ ಬೇರೆ ರಾಜ್ಯಕ್ಕೆ ಇಲ್ಲಿನ ಆನೆಗಳ ವರ್ಗಾವಣೆಯ ಆದೇಶವೂ ಇದಕ್ಕೆ ಕಾರಣವಾಗಿದೆ.

ಚಾಮರಾಜನಗರ: ಆನೆಯ ರಕ್ಷಿಸಿದ ಬಂಡೀಪುರ ಸಿಬ್ಬಂದಿಗೆ ಮೋದಿ ಶಹಬ್ಬಾಸ್‌

ಮೊನ್ನೆಯಷ್ಟೇ ಸಕ್ರೆಬೈಲು ಆನೆ ಬಿಡಾರದಿಂದ ಮಧ್ಯಪ್ರದೇಶಕ್ಕೆ ಎರಡು ಆನೆಗಳು ಸ್ಥಳಾಂತರಿಸಲಾಗಿದೆ. ಈಗ ಮತ್ತೆ ಮೂರು ಆನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಿ ಕೊಡುವಂತೆ ರಾಜ್ಯದ ಅರಣ್ಯ ಇಲಾಖೆಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ.

 

 ಕೇರಳದಲ್ಲಿ ದೇವರಿಗೆ ಸೇವೆ ಸಲ್ಲಿಸಲಿದೆ ನಟ್ ಬೋಲ್ಟ್ ಇರುವ ಆನೆ

ಎರಡರ ಬದಲು ಮೂರು: ಕಳೆದ ಬಾರಿ ಸರ್ಕಾರ ಆದೇಶದ ಪ್ರಕಾರ ಸಕ್ರೆಬೈಲು ಆನೆ ಬಿಡಾರದಿಂದ ನಾಲ್ಕು ಆನೆಗಳನ್ನು ಕಳುಹಿಸಿಕೊಡಬೇಕಿತ್ತು. ಆದರೆ, ಬೆಂಗಳೂರು ಗಣೇಶ, ಮಣಿಕಂಠನನ್ನ ಬಿಟ್ಟು ಶಿವ, ರವಿಯನ್ನು ಮಧ್ಯಪ್ರದೇಶಕ್ಕೆ ಕರೆದೊಯ್ಯಲಾಗಿತ್ತು. ಇದರ ಬೆನ್ನೆಲ್ಲೆ, ಈಗ ಎರಡು ಆನೆಗಳ ಬದಲಿಗೆ ಮೂರು ಆನೆ ಕಳುಹಿಸಿಕೊಡುವಂತೆ ರಾಜ್ಯದ ಅರಣ್ಯ ಇಲಾಖೆಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ. ಸಕ್ರೆಬೈಲ್‌ ಆನೆ ಬಿಡಾರದ ಆರು ವರ್ಷದ ಐರಾವತ, ನಾಲ್ಕು ವರ್ಷದ ಧನುಶ್‌ 14 ವರ್ಷದ ಆಲೆ ಆನೆಗಳನ್ನು ಉತ್ತರ ಭಾರತದ ಮಧ್ಯಪ್ರದೇಶಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಆನೆಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದ ಅಧಿಕಾರಿಗಳ ತಂಡ, ಈ ಮೂರು ಆನೆಗಳನ್ನು ಆಯ್ಕೆ ಮಾಡಿ, ಅವು ಗಳನ್ನು ತಮಗೆ ನೀಡುವಂತೆ ಅರಣ್ಯ ಇಲಾಖೆಗೆ ನೀಡಿದೆ.
 

Latest Videos
Follow Us:
Download App:
  • android
  • ios