ಕೇರಳದಲ್ಲಿ ದೇವರಿಗೆ ಸೇವೆ ಸಲ್ಲಿಸಲಿದೆ ನಟ್ ಬೋಲ್ಟ್ ಇರುವ ಆನೆ
ಕೇರಳ ರಾಜ್ಯದ ಇರಿಂಜಲಕುಡದ ಕಲ್ಲೆಟುಂಕರದ ಬಳಿ ಇರುವ ಇರಿಂಜಡಪಿಲ್ಲಿಯ ಶ್ರೀಕೃಷ್ಣ ದೇಗುಲದಲ್ಲಿ ರೋಬೊಟಿಕ್ ತಂತ್ರಜ್ಞಾನದಿಂದ ನಿರ್ಮಾಣವಾದ ಆನೆಯನ್ನು ದೇವರ ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಇಂತಹ ಪ್ರಕ್ರಿಯೆ ರಾಜ್ಯದಲ್ಲೇ ಮೊದಲಾಗಿದೆ.
ತ್ರಿಶೂರ್: ಕೇರಳ ದೇವರನಾಡು ಎಂದು ಹೇಗೆ ಪ್ರಸಿದ್ಧವೋ ಹಾಗೆಯೇ ಆನೆಗಳ ಬೀಡು ಎಂದು ಕೂಡ ಪ್ರಸಿದ್ಧ. ಇಲ್ಲಿನ ಬಹುತೇಕ ದೇವಾಲಯಗಳಲ್ಲಿ ಆನೆಗಳಿವೆ. ಆದರೆ ಈಗ ರಾಜ್ಯದ ಇರಿಂಜಲಕುಡದ ಕಲ್ಲೆಟುಂಕರದ ಬಳಿ ಇರುವ ಇರಿಂಜಡಪಿಲ್ಲಿಯ ಶ್ರೀಕೃಷ್ಣ ದೇಗುಲದಲ್ಲಿ ರೋಬೊಟಿಕ್ ತಂತ್ರಜ್ಞಾನದಿಂದ ನಿರ್ಮಾಣವಾದ ಆನೆಯನ್ನು ದೇವರ ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಇಂತಹ ಪ್ರಕ್ರಿಯೆ ರಾಜ್ಯದಲ್ಲೇ ಮೊದಲಾಗಿದೆ.
11 ಅಡಿ ಉದ್ದದ ಜೊತೆಗೆ 800 ಕೆಜಿ ತೂಗುವ ಈ ರೋಬೋಟಿಕ್ ಆನೆಯನ್ನು ರಬ್ಬರ್ ಕೋಟಿಂಗ್ ಜೊತೆಗೆ ಕಬ್ಬಿಣದ ಪ್ರೇಮ್ ಅಳವಡಿಸಿ ತಯಾರಿಸಲಾಗಿದೆ. ಈ ಆನೆಯನ್ನು ಪೇಟಾ ಇಂಡಿಯಾ ( People for the Ethical Treatment of Animals) ಸಂಸ್ಥೆಯೂ ಇರಿಂಜಡಪಿಲ್ಲಿ ಕುಟುಂಬವೂ ನಿರ್ವಹಿಸುವ ದೇಗುಲಕ್ಕೆ ನೀಡಿದೆ.
ಸಕ್ರೆಬೈಲು ಆನೆ ಬಿಡಾರದಿಂದ ಮತ್ತೆ 3 ಆನೆಗಳು ಶಿಫ್ಟ್?: ಮಧ್ಯಪ್ರದೇಶದಿಂದ ಅರಣ್ಯ ಇಲಾಖೆಗೆ ಮತ್ತೆ ಬೇಡಿಕೆ
ಈ ರೋಬೋಟಿಕ್ ಆನೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಇರಿಂಜಡಪಿಲ್ಲಿ ಕುಟುಂಬ (Irinjadapilli family) ದ ರಾಜ್‌ಕುಮಾರ್ ನಂಬೂದಿರಿ, ಈ
ರೋಬೋಟಿಕ್ ತಂತ್ರಜ್ಞಾನದಿಂದ ನಿರ್ಮಿತವಾದ ಆನೆಯೂ ಇತರ ಜೀವಂತ ಆನೆಗಳಂತೆ ತನ್ನ ಕಿವಿ ಹಾಗೂ ಬಾಲವನ್ನು ಅಲ್ಲಾಡಿಸುತ್ತದೆ. ಮಾವುತ ಇದರ ಸ್ವಿಚ್ ಆನ್ ಮಾಡಿದರೆ ಇದು ತನ್ನ ಸೊಂಡಿಲಿನ ಮೂಲಕ ನೀರನ್ನು ಕೂಡ ಎರಚುತ್ತದೆ. ಈ ಕಾರ್ಯಗಳಿಗಾಗಿ ಆನೆಯ ದೇಹದಲ್ಲಿ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಐದು ಲಕ್ಷ ರೂಪಾಯಿ ಮೊತ್ತದಲ್ಲಿ ಈ ರೋಬೋ ಆನೆಯನ್ನು ತಯಾರಿಸಲಾಗಿದೆ. ಅಲ್ಲದೇ ದೇಗುಲದಲ್ಲಿ ಮೆರವಣಿಗೆ ನಡೆಸುವ ವೇಳೆ ಈ ಆನೆಯ ಮೇಲೆ ಕನಿಷ್ಠ 4 ಜನ ಕುಳಿತುಕೊಳ್ಳಬಹುದಾಗಿದೆ. ಈ ದೇಗುಲದ ಆಡಳಿತ ಮಂಡಳಿ ಸಿಬ್ಬಂದಿ ಮಾತನಾಡಿ, ಜೀವಂತ ಆನೆಗಳ ಮೆರವಣಿಗೆ ನಡೆಸುವುದು ಅವುಗಳ ಸಾಕಾಣೆ ವೆಚ್ಚ, ಸೇರಿದಂತೆ ಹಲವು ಆತಂಕಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದೇವೆ. ಇದರ ಜೊತೆಗೆ ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಇದು ಮುಂದೆ ಇತರ ದೇಗುಲಗಳು ಕೂಡ ಅಳವಡಿಸಿಕೊಳ್ಳಬೇಕಾದ ಒಂದು ಉತ್ತಮ ಯೋಜನೆ ಎಂದು ಅವರು ಹೇಳಿದರು.
Kodagu: ಕಾಡು ದಾಟಿ ರಸ್ತೆಗೆ ಬರುವುದನ್ನು ಪತ್ತೆಹಚ್ಚಲು ರೆಡಿಯಾಯ್ತು ಆನೆ ಕ್ರಾಸಿಂಗ್ ಸಿಗ್ನಲ್
ಅಂದಹಾಗೆ ಈ ಆನೆಗೆ ಇರಿಂಜಡಪಿಲ್ಲಿ ರಾಮನ್ (Irinjadappilli Raman) ಎಂದು ಹೆಸರಿಡಲಾಗಿದೆ. ಫೆಬ್ರವರಿ 26 ರಂದು ಈ ಆನೆಯನ್ನು ದೇಗುಲಕ್ಕೆ ಔಪಾಚಾರಿಕವಾಗಿ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.