* ಪ್ರಯಾಣಿಕರ ದೂರು ಹಿನ್ನೆಲೆಯಲ್ಲಿ ನಿಗಮದಿಂದ ತಿಳುವಳಿಕೆ ಪತ್ರ* ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಲು ಚಾಲಕರಿಗೆ ತಿಳುವಳಿಕೆ ಪತ್ರ ನೀಡಿದ ನಿಗಮ* ಸಂಸ್ಥೆಯ ಆದಾಯಕ್ಕೆ ನಷ್ಟ
ಬೆಂಗಳೂರು(ಮಾ.02): ವಾಹನವನ್ನು ನಿಧಾನವಾಗಿ ಚಾಲನೆ ಮಾಡಿರುವುದು ಮತ್ತು ನಿಗದಿತ ಅವಧಿಗಿಂತ ಮುಂಚಿತವಾಗಿ ಡಿಪೋಗೆ ಆಗಮಿಸಿ ನಿಗಮಕ್ಕೆ ನಷ್ಟ ಉಂಟು ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಬಿಎಂಟಿಸಿ(BMTC) ಚಾಲಕರಿಗೆ(Drivers) ತಿಳುವಳಿಕೆ ಮತ್ತು ಪಾಲನಾ ಪತ್ರಗಳನ್ನು ನೀಡುವ ಮೂಲಕ ಎಚ್ಚರಿಕೆ ನೀಡಲಾಗಿದೆ.
ಬಿಎಂಟಿಸಿ ಬಸ್ ಮಾರ್ಗಸಂಖ್ಯೆ ‘410ಕೆ’ ಎತ್ತಿನಗಾಡಿಯ ರೀತಿಯಲ್ಲಿ ತುಂಬಾ ವಿಳಂಬವಾಗಿ ಚಾಲನೆ ಮಾಡಿದ್ದರಿಂದ ಕೆಲಸಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲವೆಂದು ಪ್ರಯಾಣಿಕರೊಬ್ಬರು(Passengers) ನಿಗಮಕ್ಕೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಲು ಚಾಲಕರಿಗೆ ನಿಗಮವು ತಿಳುವಳಿಕೆ ಪತ್ರ ನೀಡಿದೆ.
BMTC: ವರ್ಷದಿಂದ ವರ್ಷಕ್ಕೆ ಬಿಎಂಟಿಸಿ ಅಪಘಾತ ಸಂಖ್ಯೆ ಇಳಿಕೆ!
ಮತ್ತೊಂದು ಪ್ರಕರಣದಲ್ಲಿ ಮಾರ್ಗ ಸಂಖ್ಯೆ ‘25ಬಿ’ಯಲ್ಲಿ ಕರ್ತವ್ಯ ನಿರ್ವಹಿಸಿ ಹಿಂತಿರುಗುವಾಗ ಜಯನಗರಕ್ಕೆ 30 ನಿಮಿಷ ಮುಂಚಿತವಾಗಿ ಬಂದು ಕಾಲಹರಣ ಮಾಡಿ ಸಾರಿಗೆ ಆದಾಯ(Transportation Revenue) ತಪ್ಪಿಸಿದ್ದೀರಿ. ನಿಗದಿತ ಆದಾಯ 3 ಸಾವಿರ ಇದರ ಬದಲು 2,740 ಮಾತ್ರ ಬಂದಿದೆ. ಕೊನೆಯ ಸುತ್ತುವಳಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಖಾಲಿ ಸುತ್ತುವಳಿಯ ಕಾರ್ಯಚರಣೆ ಮಾಡಿರುತ್ತೀರಿ. ಇದರಿಂದ ಸಂಸ್ಥೆಯ ಆದಾಯಕ್ಕೆ ನಷ್ಟವಾಗಿದೆ. ಆ ಮೂಲಕ ನಿಗಮದ ನಿಯಮಗಳನ್ನು ಉಲ್ಲಂಘಿಸಿದ್ದೀರಿ ಎಂದು ಆರೋಪಿಸಿ ಅಪಾದನಾ ಪತ್ರ ನೀಡಿ ನಿಗಮ ಎಚ್ಚರಿಸಿದೆ.
ಬಿಎಂಟಿಸಿ ಪಾಲಿಗೆ ಬಿಳಿಯಾನೆಯಾದ ಎಲೆಕ್ಟ್ರಿಕ್ ಬಸ್!
ಕೊರೋನಾ(Coronavirus) ಲಾಕ್‌ಡೌನ್‌ನಿಂದ(Lockdown) ನಷ್ಟಕ್ಕೆ ಸಿಲುಕಿ ಸಿಬ್ಬಂದಿಗೆ ವೇತನ ಪಾವತಿಗೂ ಸರ್ಕಾರದ ಮೊರೆ ಹೋಗಿದ್ದ ಬಿಎಂಟಿಸಿಗೆ ನೂತನವಾಗಿ ಆಗಮಿಸಿರುವ ಎಲೆಕ್ಟ್ರಿಕ್ ಬಸ್‌ಗಳು ಬಿಳಿಯಾನೆಯಾಗಿ ಪರಿಣಮಿಸಿದೆ.
ನಗರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್(NTPCL)ನಿಂದ 90 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದೆ. ಆದರೆ, ಈ ಬಸ್‌ಗಳ ಚಾರ್ಜಿಂಗ್ ಮಾಡುವುದಕ್ಕಾಗಿ ನಗರದಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಪರಿಣಾಮ ಬಸ್‌ಗಳು ಸಂಚರಿಸದಿದ್ದರೂ ಒಪ್ಪಂದದಂತೆ ನಿಗದಿತ ಮೊತ್ತ ಪಾವತಿ ಮಾಡಬೇಕಾಗಿದೆ. ಇದು ಬಿಎಂಟಿಸಿಗೆ ನಷ್ಟದ ಬಾಬ್ತು ಆಗಿದೆ.
ಪ್ರತಿ ಕಿ.ಮೀ.ಗೆ 51.67:
ಸುಮಾರು 1.5 ಕೋಟಿ ಬೆಲೆಯ ಈ ಬಸ್‌ಗಳಿಗೆ ಸ್ಮಾರ್ಟ್‌ಸಿಟಿ(Smartcity) ಯೋಜನೆ ಅಡಿ ಪ್ರತಿ ಬಸ್‌ಗೆ ತಲಾ 50 ಲಕ್ಷ ರು. ನೀಡಲಾಗಿದೆ. ಇನ್ನುಳಿದ ಮೊತ್ತವನ್ನು ಎನ್‌ಟಿಪಿಸಿಎಲ್ ವಿನಿಯೋಗಿಸಿದೆ. ಆದರೆ, ಈ ಬಸ್‌ಗಳು ದಿನವೊಂದಕ್ಕೆ 180 ಕಿ.ಮೀ. ಸಂಚರಿಸಬೇಕು. ಇದಕ್ಕಾಗಿ ಕಿ.ಮೀ.ಗೆ 51.67 ರು. ಎನ್‌ಟಿಪಿಸಿಎಲ್‌ಗೆ ಪಾವತಿಸಬೇಕು ಎಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಜತೆಗೆ, ದಿನವೊಂದರಲ್ಲಿ ಒಂದು ಕಿಲೋ ಮೀಟರ್ ಸಂಚರಿಸಿದರೂ 180 ಕಿ.ಮೀ.ನ ಸಂಪೂರ್ಣ ಮೊತ್ತ ಪಾವತಿಸಬೇಕು ಎಂಬುದಾಗಿ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕೇವಲ 80 ಕಿ.ಮೀ. ದೂರ ಸಂಚರಿಸಿ ನಿಂತು ಹೋಗುತ್ತಿರುವ ಬಸ್‌ಗಳಿಗೂ ಸಂಪೂರ್ಣ ಮೊತ್ತ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
BMTC ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ: ಸಾರಿಗೆ ಸಚಿವ ಶ್ರೀರಾಮುಲು
ಎಲೆಕ್ಟ್ರಿಕ್ ಬಸ್‌ಗಳು(Electric Bus) ಸರಾಗವಾಗಿ ಹಾದು ಹೋಗುವ ರಸ್ತೆಗಳಲ್ಲಿ ಹೆಚ್ಚು ಕಿಲೋ ಮೀಟರ್ ಸಂಚರಿಸಲಿವೆ. ಆದರೆ, ಬೆಂಗಳೂರು(Bengaluru) ನಗರದ ರಸ್ತೆಗಳಲ್ಲಿ ಪ್ರತಿ ಕಿಲೋ ಮೀಟರ್‌ಗೆ ಎರಡು ರಸ್ತೆ ಉಬ್ಬುಗಳು ಇರಲಿದ್ದು, ರಸ್ತೆ ಗುಂಡಿಗಳ ನಡುವೆ ಸಂಚರಿಸಬೇಕಾಗಿದೆ. ಜತೆಗೆ, ಹೊಸ ಬಸ್‌ಗಳನ್ನು ಚಾಲನೆ ಮಾಡಲು ಬಿಎಂಟಿಸಿ ಚಾಲಕರಿಗೆ ಅನುಭವದ ಕೊರತೆಯಿದೆ. ಇದರಿಂದ ನಿಗದಿತ ಪ್ರಮಾಣದ ಕಿಲೋ ಮೀಟರ್ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಸ್ತೆಗಿಳಿಯದ 62 ಬಸ್‌ಗಳು
ಎನ್‌ಪಿಸಿಎಲ್‌ನಿಂದ ಈವರೆಗೂ 90 ಬಸ್‌ಗಳನ್ನು ಒದಗಿಸಲಾಗಿದೆ. ಅವುಗಳಲ್ಲಿ ಪ್ರಸ್ತುತ 28 ಬಸ್‌ಗಳನ್ನು ಮಾತ್ರ ರಸ್ತೆಗಿಳಿಸಲಾಗಿದೆ. ಇನ್ನುಳಿದ ಬಸ್‌ಗಳಿಗೆ ಸೂಕ್ತ ಮೂಲ ಸೌಕರ್ಯಗಳು ಇಲ್ಲದ ಪರಿಣಾಮ ಕೆಂಗೇರಿಯ ಕಾರ್ಯಾಗಾರದಲ್ಲಿ ನಿಲ್ಲಿಸಲಾಗಿದೆ. ಅವುಗಳಲ್ಲಿ 30 ಬಸ್‌ಗಳನ್ನು ಯಶವಂತಪುರ ಮತ್ತು 30 ಬಸ್‌ಗಳನ್ನು ಕೆ.ಆರ್.ಪುರ ಡಿಪೋಗಳಿಗೆ ರವಾನಿಸಲು ತೀರ್ಮಾನಿಸಲಾಗಿದೆ. ಈ ಘಟಕಗಳಲ್ಲಿ ಚಾರ್ಜಿಂಗ್ ಕೇಂದ್ರ ನಿರ್ಮಿಸಿದ ಬಳಿಕ ರಸ್ತೆಗಿಳಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
