Asianet Suvarna News Asianet Suvarna News

BMTC ಟಿಕೆಟ್‌ ದರ ಏರಿಕೆ ಸದ್ಯಕ್ಕಿಲ್ಲ: ಸಾರಿಗೆ ಸಚಿವ ಶ್ರೀರಾಮುಲು

ಸದ್ಯಕ್ಕೆ ಬಿಎಂಟಿಸಿ ಪ್ರಯಾಣ ದರ ಏರಿಕೆ ಇಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ನೌಕರರ ಮುಷ್ಕರ, ಕೋವಿಡ್‌ ಸಂಕಷ್ಟ, ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಬಿಎಂಟಿಸಿ ಬಸ್‌ ಟಿಕೆಟ್‌ ದರ ಏರಿಕೆ ಕುರಿತು ಚರ್ಚೆ ನಡೆಸಲಾಗಿತ್ತು. 

Transport Minister Sriramulu Says No Increase in BMTC Ticket Rate gvd
Author
Bangalore, First Published Feb 11, 2022, 1:02 AM IST | Last Updated Feb 11, 2022, 1:02 AM IST

ಬೆಂಗಳೂರು (ಫೆ.11): ಸದ್ಯಕ್ಕೆ ಬಿಎಂಟಿಸಿ (BMTC) ಪ್ರಯಾಣ ದರ ಏರಿಕೆ ಇಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು (B Sriramulu) ಸ್ಪಷ್ಟಪಡಿಸಿದ್ದಾರೆ. ನೌಕರರ ಮುಷ್ಕರ, ಕೋವಿಡ್‌ ಸಂಕಷ್ಟ, ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಬಿಎಂಟಿಸಿ ಬಸ್‌ ಟಿಕೆಟ್‌ ದರ ಏರಿಕೆ ಕುರಿತು ಚರ್ಚೆ ನಡೆಸಲಾಗಿತ್ತು. ಆದರೆ, ಬಸ್‌ ದರ ಏರಿಕೆ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಟಿಕೆಟ್‌ ದರ ಏರಿಕೆಗೆ ಹಸಿರು ನಿಶಾನೆ ನೀಡಿಲ್ಲ. ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಸದ್ಯ ತಿಂಗಳಿಗೆ ಬಿಎಂಟಿಸಿಗೆ 90-95 ಕೋಟಿ ರು. ಬರುತ್ತಿದ್ದು, 155 ಕೋಟಿ ರು. ವೆಚ್ಚವಾಗುತ್ತಿದೆ. ನಮ್ಮದು ಸೇವಾಭಾವನೆಯಿಂದ ಕೆಲಸ ಮಾಡುತ್ತಿರುವ ಸಂಸ್ಥೆಯಾಗಿದೆ ಎಂದ ಅವರು, ಬಿಎಂಟಿಸಿ ಬಸ್‌ಗಳಿಗೆ ಬೆಂಕಿ ಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ವರದಿ ಬರಲಿದ್ದು, ಅದನ್ನು ಪರಿಶೀಲಿಸಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಹಿಜಾಬ್ ವಿಚಾರದಲ್ಲಿ ತಟಸ್ಥ ನಿಲುವು ತಾಳಿದ ಶ್ರೀರಾಮುಲು, ಅಲ್ಪಸಂಖ್ಯಾತ ಮತಗಳಿಗೆ ಹೆದರಿದ್ರಾ?

KSRTC ಸಿಬ್ಬಂದಿಗೆ ಸಂತಸದ ಸುದ್ದಿ: ಸಾರಿಗೆ ಇಲಾಖೆಯ ವೇತನ ನೀಡಲು ಮೊದಲು ತೊಂದರೆ ಇತ್ತು. ಈಗ ಎಲ್ಲ ಸರಿಪಡಿಸಲಾಗಿದೆ. ಇನ್ನು ಮುಂದೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮಲು ಹೇಳಿದ್ದರು. ಜ.02 ರಂದು ಇಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಅಡಿಗಲ್ಲು ಸಮಾರಂಭ ಭೂಮಿ ಪೂಜೆ ಮಾಡಿ ಮಾತನಾಡಿದ್ದ ಅವರು, ಸಾರಿಗೆ ಇಲಾಖೆ (Transport Department) ನೌಕರ ವರ್ಗ ಮುಷ್ಕರದಲ್ಲಿ (Strike) ತೊಡಗಬೇಡಿ. 

ಇದರಿಂದ ನಿಮಗೆ ತೊಂದರೆ ಉಂಟಾಗುತ್ತದೆ. ಇನ್ನು 4 ವಾರಗಳಲ್ಲಿ ವರ್ಗಾವಣೆ (Transfer) ಸೇರಿದಂತೆ ವಿವಿಧ ಶಿಕ್ಷೆಗೆ ಒಳಪಟ್ಟವರನ್ನು ಮರಳಿ ತೆಗೆದುಕೊಳ್ಳಲಾಗುವುದು ಎಂದ ಅವರು, ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಹಳೆ ಬಸ್‌ಗಳನ್ನು ಮರಳಿ ಪಡೆದು ಒಳ್ಳೆಯ ಬಸ್‌ಗಳನ್ನು ಶೀಘ್ರದಲ್ಲೇ ಓಡಿಸಲಾಗುತ್ತದೆ ಎಂದು ಹೇಳಿದ್ದರು.

ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ (Siddu Savadi) ಮಾತನಾಡಿ, ವಾಹನವನ್ನು ಖರೀದಿಸಿದವರಿಗೆ ಕಡ್ಡಾಯವಾಗಿ ವಾಹನ ಪರವಾನಗಿ ಮಾಡಿಕೊಡಬೇಕು. ಹೆಚ್ಚು ಲೋಡ್‌ ತೆಗೆದುಕೊಂಡು ಸಂಚರಿಸುವವರಿಗೆ ಹೊಸ ಕಾನೂನು ಜಾರಿಗೆ ತರಬೇಕು. ಅದನ್ನು ಬಿಟ್ಟು ವಾಹನ ಸವಾರರಿಗೆ ಅಧಿಕಾರಿಗಳು ಕಿರುಕುಳ ಮಾಡಬಾರದು. ಈ ಭಾಗದಿಂದ ಬೆಂಗಳೂರಿಗೆ (Bengaluru) ಹೋಗಲು ಎರಡು ಹೊಸ ಬಸ್‌ ಪ್ರಾರಂಭಿಸಬೇಕು. ರಬಕವಿ-ಬನಹಟ್ಟಿಯ ಬಸ್‌ ನಿಲ್ದಾಣ ಬೀಳುವ ಹಂತದಲ್ಲಿವೆ. ಕೂಡಲೇ ಹೊಸ ಬಸ್‌ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು ಎಂದು ತಿಳಿಸಿದ್ದರು. 

Cabinet Reshuffle ಸಿಎಂಗೂ ಮುನ್ನ ದಿಲ್ಲಿಗೆ ಹೋಗಿ ಕುಂತ ಶ್ರೀರಾಮುಲು, ಡಿಸಿಎಂ ಆಸೆ ಈಡೇರುತ್ತಾ?

ಜನತೆ ಮೆಚ್ಚುವಂತಹ ಆಡಳಿತವನ್ನು ಬಿಜೆಪಿ ನೀಡಿದೆ: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪಕ್ಷದ ಹಿರಿಯ ನಾಯಕರಾಗಿದ್ದು, ಸರ್ಕಾರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವಲ್ಲಿ ಸಫಲರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಜವಾಬ್ದಾರಿಯಿಂದ ನನ್ನನ್ನು ಬಿಡುಗಡೆಗೊಳಿಸಿ ಬಳ್ಳಾರಿ ಜಿಲ್ಲೆ ಉಸ್ತುವಾರಿ ವಹಿಸಿರುವುದು ನನಗೆ ಸಂತಸ ತಂದಿದೆ. ಪಕ್ಷದ ಸಂಘಟನೆಗೆ ಒತ್ತು ನೀಡುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು. ದೊಡ್ಡೇರಿಯ ಶ್ರೀ ಕನ್ನೇಶ್ವರ ಆಶ್ರಮದ ದತ್ತಾವಧೂತ ಮಲ್ಲಿಕಾರ್ಜುನ ಸ್ವಾಮೀಜಿಯವರನ್ನು ಭೇಟಿ ಮಾಡಿ ಪೂಜಾ ಕಾರ್ಯಗಳನ್ನು ನೆರವೇರಿಸಿದ ನಂತರ ನೆರೆದಿದ್ದ ಭಕ್ತರೊಂದಿಗೆ ಗ್ರಾಮೀಣ ಭಾಗದ ಕೆಲವು ಸಮಸ್ಯೆಯನ್ನು ಸಹ ಆಲಿಸಿದರು.

Latest Videos
Follow Us:
Download App:
  • android
  • ios