Asianet Suvarna News Asianet Suvarna News

ಮನೆಯಿಂದಲೇ ಮತಕ್ಕೆ ನೋಂದಣಿ ಮಾಡಿದ್ದ 33 ಮಂದಿ ಸಾವು: 2,282 ವೃದ್ಧರು, ವಿಶೇಷ ಚೇತನರಿಂದ ಮತ ಚಲಾವಣೆ

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 9,152 ವೃದ್ಧರು ಹಾಗೂ 119 ಅಂಗವಿಕಲರು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 33 ಮಂದಿ ಮತದಾನಕ್ಕೂ ಮುನ್ನವೇ ಮೃತಪಟ್ಟಿದ್ದಾರೆ.

vote from home during karnataka assembly elections 33 people died before voting in bengaluru ash
Author
First Published May 1, 2023, 12:12 PM IST

ಬೆಂಗಳೂರು (ಮೇ 1, 2023): ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದಲ್ಲಿ ಮನೆಯಿಂದ ಮತದಾನಕ್ಕೆ ನೋಂದಣಿ ಮಾಡಿಕೊಂಡವರ ಪೈಕಿ 33 ಮಂದಿ ಮತದಾನಕ್ಕೂ ಮುನ್ನವೇ ಮೃತಪಟ್ಟಿದ್ದಾರೆ. ಭಾರತ ಚುನಾವಣಾ ಆಯೋಗ ಮೊದಲ ಬಾರಿಗೆ ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡುವುದಕ್ಕೆ ಅವಕಾಶ ನೀಡಿದೆ. 

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 9,152 ವೃದ್ಧರು ಹಾಗೂ 119 ವಿಶೇಷ ಚೇತನರು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 33 ಮಂದಿ ಮತದಾನಕ್ಕೂ ಮುನ್ನವೇ ಮೃತಪಟ್ಟಿದ್ದಾರೆ. ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ಉತ್ತರ 15, ಬೆಂಗಳೂರು ದಕ್ಷಿಣ 5 ಹಾಗೂ ಬೆಂಗಳೂರು ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಇದನ್ನು ಓದಿ: ಶ್ರಮಿಕ ಸ್ತ್ರೀಯರಿಗೆ ಬಂಪರ್‌: ಅಂಗನವಾಡಿ, ಆಶಾ, ಬಿಸಿಯೂಟ ವೇತನ ಏರಿಕೆ; ಪ್ರಿಯಾಂಕಾ ಗಾಂಧಿ ಭರವಸೆ

ಭಾನುವಾರ ಒಟ್ಟು 2,282 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ. ಈ ಪೈಕಿ 18 ಅಂಗವಿಕರು ಹಾಗೂ 2264 ಮಂದಿ 80 ವರ್ಷ ಮೇಲ್ಪಟ್ಟವರಾಗಿದ್ದಾರೆ. ಕಳೆದ ಶನಿವಾರ 3,727 ಮಂದಿ 80 ವರ್ಷ ಮೇಲ್ಪಟ್ಟವರು ಹಾಗೂ 46 ಮಂದಿ ಅಂಗವಿಕಲರು ಮತದಾನ ಮಾಡಿದ್ದರು. ಈ ಪ್ರಕ್ರಿಯೆ ಮೇ 6 ವರೆಗೆ ನಡೆಯಲಿದೆ.

ಬೆಂಗಳೂರು ಕೇಂದ್ರದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈವರೆಗೆ 1,363 ಮಂದಿ ಮತದಾನ ಮಾಡಿದ್ದಾರೆ. ಬೆಂಗಳೂರು ಉತ್ತರದಲ್ಲಿ 1,414, ಬೆಂಗಳೂರು ದಕ್ಷಿಣದಲ್ಲಿ 2030 ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1,248 ಮಂದಿ ಮತದಾನ ಮಾಡಿದ್ದಾರೆ. ಈವರೆಗೆ ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ 6055 ಮಂದಿ ಮನೆಯಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಇದನ್ನೂ ಓದಿ: Amit Shah Interview: ಮೋದಿ ಬಂದ ಬಳಿಕ ಈಶಾನ್ಯ ಭಾರತ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ತೀವ್ರ ಕಡಿಮೆಯಾಗಿದೆ: ಅಮಿತ್ ಶಾ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: Amit Shah Interview: ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಬಲವಾಗಿದೆ, ಮುಸ್ಲಿಂ ಮೀಸಲಾತಿ 1 ವರ್ಷ ಮೊದಲೇ ತೆಗೆಯಬೇಕಿತ್ತು: ಅಮಿತ್ ಶಾ

Follow Us:
Download App:
  • android
  • ios