ಅಸಹಾಯಕ ಕುಟುಂಬಕ್ಕೆ ಆಸರೆಯಾದ ವಿಶ್ವ ಹಿಂದೂ ಪರಿಷತ್: ಇಂದು ಗೃಹಪ್ರವೇಶ
ಮಳೆಗಾಲದಲ್ಲಿ ಸುಸಜ್ಜಿತ ಮನೆಯೇ ಇಲ್ಲದವರ ಬದುಕು ಹೇಳತೀರದು. ಮನೆಯ ಯಜಮಾನನ ಆನಾರೋಗ್ಯದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದ ಅಸಹಾಯಕ ಬಡಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು ವಿಶ್ವ ಹಿಂದು ಪರಿಷತ್ ಮಾನವೀಯತೆ ಮೆರೆದಿದೆ.
ಉಪ್ಪಿನಂಗಡಿ,(ಜು.15); ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕುರ್ತಡ್ಕ ಎಂಬಲ್ಲಿ ಜೋಪಡಿ ವಾಸುಸುತ್ತಿದ್ದ ಅಸಹಾಯಕ ಕುಟುಂಬವೊಂದರ ಸಂಕಷ್ಟವನ್ನು ಕಂಡ ವಿಶ್ವ ಹಿಂದೂ ಪರಿಷತ್ ಕಾಂಚನ ಘಟಕದ ಕಾರ್ಯಕರ್ತರು ನೂತನ ಮನೆ ನಿರ್ಮಿಸಿಕೊಟ್ಟಿದ್ದು, ಜುಲೈ 15ರಂದು ಅಭಯ ಎಂಬ ಹೊಸ ಮನೆಯನ್ನು ಹಸ್ತಾಂತರಗೊಳಿಸಲಾಗುವುದು.
ಮನೆಯ (poor family) ಯಜಮಾನ ಚಂದ್ರ ಅನಾರೋಗ್ಯದಿಂದಾಗಿ ಮನೆಯಲ್ಲಿಯೇ ಇದ್ದು, ಮೂವರು ಮಕ್ಕಳ ಸಹಿತ ಕುಟುಂಬದ ನಿರ್ವಹಣೆಯ ಹೊಣೆ ಲಕ್ಷ್ಮೀಯವರದ್ದಾಗಿತ್ತು. ವಾಸಿಸುವ ಮನೆ ಜೋಪಡಿಯಾಗಿದ್ದು, ಯಾವುದೇ ಸಂದರ್ಭದಲ್ಲೂ ಕುಸಿತದ ಭೀತಿ ಮನೆ ಮಂದಿಯನ್ನು ಕಾಡುತ್ತಿತ್ತು. ಈ ಅಸಹಾಯಕ ಕುಟುಂಬದ ಸಂಕಷ್ಟವನ್ನು ಕಂಡ ವಿಶ್ವ ಹಿಂದೂ ಪರಿಷತ್ ಕಾಂಚನ ಘಟಕದ ಕಾರ್ಯಕರ್ತರು (VHP)ತಾವೇ ಶಕ್ತ್ಯಾನುಸಾರ ದೇಣಿಗೆ (donate) ನೀಡಿ, ಚಂದ್ರ ಕುಟುಂಬಕ್ಕೆ ಸ್ನಾನ ಗೃಹ, ಶೌಚಾಲಯ ಒಳಗೊಂಡಂತೆ ಸುಸಜ್ಜಿತ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.z
ಇದನ್ನೂ ಓದಿ: ಕಡಲ್ಕೊರೆತ ತಡೆಗೆ ‘ಸೀ ವೇವ್ ಬ್ರೇಕರ್’ ತಂತ್ರಜ್ಞಾನ: ಸಿಎಂ ಬೊಮ್ಮಾಯಿ
ನಿರ್ಮಿಸಿದಂತಹ ಮನೆಗೆ ಅಭಯ ಎಂದು ನಾಮಕರಣ ಮಾಡಿದ್ದು, ಇದರ ಗೃಹ ಪ್ರವೇಶ ಕಾರ್ಯಕ್ರಮ ಜುಲೈ 15ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಹಿಂಪ, ಭಜರಂಗದಳದ ಮುಂದಾಳುಗಳಾದ ಶರಣ್ ಪಂಪ್‌ವೆಲ್, ಮುರಳೀಕೃಷ್ಣ ಹಸಂತಡ್ಕ, ಭರತ್ ಕುಮ್ಡೇಲು ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆಂದು ಭಜರಂಗದಳದ ಮುಂದಾಳು ಮಹೇಶ್ ಬಜತ್ತೂರು ತಿಳಿಸಿದ್ದಾರೆ.
ಉಡುಪಿ: ಮಳೆ ಬಿಸಿಲಿನ ಕಣ್ಣುಮುಚ್ಚಾಲೆ
ಗುರುವಾರವೂ ಜಿಲ್ಲೆಯಲ್ಲಿ ಮಳೆ ಬಿಸಿಲಿನ ಕಣ್ಣುಮುಚ್ಚಾಲೆ ಮುಂದುವರಿದಿತ್ತು. ದಿನವಿಡೀ ಹಠಾತ್ತನೇ ಬರುತ್ತಿದ್ದ ಮಳೆಯ ನಂತರ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಕೆಲವು ದಿನಗಳ ಸತತ ಮಳೆಯಿಂದ ಬೇಸತ್ತಿದ್ದ ಜನರು ಗುರುವಾರ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಬುಧವಾರದ ಮಳೆಗೆ ಜಿಲ್ಲೆಯಲ್ಲಿ ಸುಮಾರು 22 ಮನೆಗಳಿಗೆ ಹಾನಿಯಾಗಿ 10.50 ಲಕ್ಷ ರು. ನಷ್ಟಸಂಭವಿಸಿದೆ. ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಜಯಂತಿ ಪ್ರಭು ಅವರ ಮನೆಯ ಗೋಡೆ ಕುಸಿದು 1 ಲಕ್ಷ ರು., ಹೆಬ್ರಿ ತಾಲೂಕಿನ ಬೇಳಂಜೆ ಗ್ರಾಮದ ರಾಧಾ ಪೂಜಾರಿ ಮನೆಗೆ 1 ಲಕ್ಷ ರು., ಕಾರ್ಕಳ ತಾಲೂಕಿನ ನೀರೆ ಗ್ರಾಮದ ಮೋವಿನ್ ರತನ್ ಮನೆಗೆ 1 ಲಕ್ಷ ರು., ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಅನಿಲ್ ಕುಮಾರ್ ಮನೆಯ ಗೋಡೆ ಸಂಪೂರ್ಣ ಕುಸಿದು 1.50 ಲಕ್ಷ ರು. ನಷ್ಟವಾಗಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ದ್ವಿಪವಾಗುತ್ತೆ ಪಂಜ; ಗ್ರಾಮವಾಸ್ತವ್ಯದಲ್ಲಿ ಸಿಗುವುದೇ ಪರಿಹಾರ?
ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ವನಜಾ ಅವರ ನಾಪತ್ತೆಯಾಗಿದ್ದ ಜಾನುವಾರು ಶವವಾಗಿ ಮನೆಯ ಸಮೀಪದ ಕೊಡ್ಗಿ ಪ್ರದೇಶದ ತೋಡಿನಲ್ಲಿ ಪತ್ತೆಯಾಗಿದೆ, ಅವರಿಗೆ 40 ಸಾವಿರ ರು. ನಷ್ಟವಾಗಿದೆ.
ಗುರುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 82 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಉಡುಪಿ 56.40, ಬ್ರಹ್ಮಾವರ 66.10, ಕಾಪು 59.80, ಕುಂದಾಪುರ 86.50, ಬೈಂದೂರು 103.70, ಕಾರ್ಕಳ 80.80, ಹೆಬ್ರಿ 92.40 ಮಿ.ಮೀ. ಮಳೆ ದಾಖಲಾಗಿದೆ.