Asianet Suvarna News Asianet Suvarna News

Vijayapura: ಡೋಣಿ ನದಿ ಪ್ರವಾಹದ ಅಬ್ಬರಕ್ಕೆ ಹರನಾಳ ಗ್ರಾಮಸ್ಥರ ನರಳಾಟ!

ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹಕ್ಕೆ ನದಿ ಪಾತ್ರದ ಜನರು ನಲುಗಿ ಹೋಗಿದ್ದಾರೆ. ಡೋಣಿ ನದಿ ಪ್ರವಾಹ ಪೀಡಿದ ಜನರು ನಮ್ಮ ಗ್ರಾಮಗಳನ್ನು ಸ್ಥಳಾಂತರ ಮಾಡಿ ಎಂದು ಜಿಲ್ಲಾಡಳಿತದ ಮುಂದೇ ಬೇಡಿಕೆಯಿಡುತ್ತಿದ್ದಾರೆ.

Villagers Suffer From Doni River Floods In Vijayapura gvd
Author
Bangalore, First Published Aug 12, 2022, 12:14 AM IST

ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.12): ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹಕ್ಕೆ ನದಿ ಪಾತ್ರದ ಜನರು ನಲುಗಿ ಹೋಗಿದ್ದಾರೆ. ಡೋಣಿ ನದಿ ಪ್ರವಾಹ ಪೀಡಿದ ಜನರು ನಮ್ಮ ಗ್ರಾಮಗಳನ್ನು ಸ್ಥಳಾಂತರ ಮಾಡಿ ಎಂದು ಜಿಲ್ಲಾಡಳಿತದ ಮುಂದೇ ಬೇಡಿಕೆಯಿಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿ ಪ್ರವಾಹ ಸಂತ್ರಸ್ತರಿಗೆ ಈಗಾಗಲೇ ಗ್ರಾಮಗಳನ್ನ ಸ್ಥಳಾಂತರ ಮಾಡಲಾಗಿದೆ. ಇದೀಗ ಅದೇ ಮಾದರಿಯಲ್ಲಿ ಡೋಣಿ ನದಿ ಸಂತ್ರಸ್ತರ ಗ್ರಾಮಗಳನ್ನ ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ದಾರೆ.

ಡೋಣಿ ಅಬ್ಬರಕ್ಕೆ ಹರನಾಳ ಗ್ರಾಮಸ್ಥರ ನರಳಾಟ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹರನಾಳ ಗ್ರಾಮ ಡೋಣಿ ನದಿ ಪ್ರವಾಹದಿಂದ ತತ್ತರಿಸಿದೆ. ಆಗಾಗ್ಗ ಅಬ್ಬರಿಸೋ ಡೋಣಿ ನದಿಯ ಕಾಟಕ್ಕೆ ಹರನಾಳ ಗ್ರಾಮಸ್ಥರು ಅಕ್ಷರಶಃ ನರಳಾಡುತ್ತಿದ್ದಾರೆ. ಸುಮಾರು 150ಕ್ಕೂ ಅಧಿಕ ಮನೆಗಳಿರುವ ಗ್ರಾಮ. ಈ ಗ್ರಾಮದ ಸುತ್ತಲೂ ಪ್ರತಿವರ್ಷ ಡೋಣಿ ನದಿ ನೀರು ಆವರಿಸುತ್ತದೆ. ಇದರಿಂದಾಗಿ ಗ್ರಾಮಸ್ಥರು ಪ್ರತಿವರ್ಷ ಸಂಕಷ್ಟ ಪಡುವಂತಾಗಿದೆ.

ಮಳೆಹಾನಿ ಸಮೀಕ್ಷೆ ವಾರದೊಳಗೆ ಮುಗಿಸಿ: ಅಧಿಕಾರಿಗಳಿಗೆ ಡೆಡ್‌ಲೈನ್‌ ಕೊಟ್ಟ ಸಚಿವ ಕತ್ತಿ

ಅಂಗನವಾಡಿ, ಶಾಲೆಗಳಿಗು ಡೋಣಿ ಕಂಟಕ: ಗ್ರಾಮದ ಶಾಲೆಗಳು, ಅಂಗನವಾಡಿ ಕಟ್ಟಡಗಳು ಡೋಣಿ ನದಿ ನೀರಿನಿಂದಾಗಿ ಕುಸಿಯುವ ಹಂತಕ್ಕೆ ಬಂದಿವೆ. ಡೋಣಿ ಪ್ರವಾಹ ಗ್ರಾಮ ಅಂಗನವಾಡಿ, ಶಾಲೆಗಳಿರುವ ಜಾಗಗಳಿಗು ಆವರಿಸಿಕೊಳ್ಳುತ್ತಿರೋದ್ರಿಂದ ಕಟ್ಟಡಗಳು ಶಿಥಿಲಗೊಳ್ಳುವ ಸ್ಥಿತಿಗೆ ಬರ್ತಿವೆ. ಹೀಗಾಗಿ ಮಕ್ಕಳು ಮುಂದಿನ ಶಿಕ್ಷಣ ದೃಷ್ಟಿಯಿಂದಲು ಹರನಾಳ ಗ್ರಾಮ ಶಿಫ್ಟಿಂಗ್‌ ಉತ್ತಮ ಎನ್ತಿದ್ದಾರೆ ಗ್ರಾಮಸ್ಥರು.

ಗ್ರಾಮ ಸುತ್ತುವರೆಯುವ ಡೋಣಿ ಪ್ರವಾಹ: ಸುತ್ತಮುತ್ತಲಿನ ಜಮೀನು ಕೂಡಾ ಜಲಾವೃತವಾಗಿವ ಕಾರಣ ಊರಿನಿಂದ ಹೊರಹೊಗಲು ಜನರು ತೊಂದರೆ ಅನುಭಸುತ್ತಿದ್ದಾರೆ. ನೀರು ಅಧಿಕವಾಗಿ ಬಂದರೆ ಬಸ್ ಸಂಚಾರ ಸಹ ಬಂದ್ ಆಗುವ ಕಾರಣ ಇಡೀ ಗ್ರಾಮ ನಡುಗಡ್ಡೆಯಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ನಮ್ಮ ಗ್ರಾಮ ಸ್ಥಳಾಂತರ ಮಾಡಬೇಕು ಎಂಬುದು ಗ್ರಾಮಸ್ಥರ ವಾದ.

ಜಿಲ್ಲಾಡಳಿತದ ವಾದವೇ ಬೇರೆ: ಜಿಲ್ಲಾಡಳಿತ ಡೋಣಿ ನದಿ ಪಾತ್ರದ ಹಲವು ಗ್ರಾಮಗಳನ್ನು ಸ್ಥಳಾಂತರ ಮಾಡಿದ್ದೇವೆ. ಜನರು ಸ್ಥಳಾಂತರ ಮಾಡಿದರೂ ಸಹ ಹಳೆ ಊರಿನಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಸದ್ಯ ಹರನಾಳ  ಗ್ರಾಮ ಸ್ಥಳಾಂತರದ ಬಗ್ಗೆ ನಿರ್ಧಾರ ಮಾಡಿಲ್ಲ ಎಂದಿದೆ. ಅಲ್ಲದೆ ಅಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡಲು ಜಿಲ್ಲಾಡಳಿತ ಸಿದ್ದವಿದ್ದು ಗ್ರಾಮಸ್ಥರು ಏನೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತರುವಂತೆ ತಿಳಿಸಿದೆ.  ಅಲ್ಲದೆ ಸ್ಥಳಾಂತರವಾದ ಗ್ರಾಮಗಳಿಗೆ ಜನರು ತೆರಳಬೇಕು, ಹಳೆಯ ಊರುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಎಂದು ಸ್ಪಷ್ಟಪಡಿಸಿದೆ.

ಲೋಕೋಪಯೋಗಿ ಇಲಾಖೆ ಎಇಇಗೆ ಬೂಟಿನಿಂದ ಹೊಡೆಯುತ್ತೇನೆಂದ ಉಮೇಶ್ ಕತ್ತಿ!

ಹರನಾಳ ಗ್ರಾಮಕ್ಕೆ ಉಸ್ತುವಾರಿ ಸಚಿವರ ಭೇಟಿ: ಇನ್ನು ನಿನ್ನೆಯಷ್ಟೆ ಪ್ರವಾಹ ಪ್ರವಾಸ ನಡೆಸಿದ ಉಸ್ತುವಾರಿ ಸಚಿವರ ಉಮೇಶ ಕತ್ತಿ ಹರನಾಳ ಗ್ರಾಮಕ್ಕು ಭೇಟಿ ನೀಡಿದ್ದಾರೆ. ಸ್ಥಳೀಯ ಜನರು ಗ್ರಾಮ ಸ್ಥಳಾಂತರದ ಬೇಡಿಕೆಯನ್ನ ಸಚಿವರ ಮುಂದಿಟ್ಟಿದ್ದಾರೆ. ಸಧ್ಯ ಡೋಣಿಯಿಂದ ಗ್ರಾಮಸ್ಥರಿಗೆ ಉಂಟಾಗಿರುವ, ಉಂಟಾಗಬಹುದಾದ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜಿಲ್ಲಾಡಳಿತಕ್ಕೆ ಸಚಿವರು ಸೂಚಿಸಿದ್ದಾರೆ. ಗ್ರಾಮ ಶಿಪ್ಟ್‌ ಆಗಲೇ ಬೇಕು ಅಂತ ಈಗ ಹರನಾಳ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

Follow Us:
Download App:
  • android
  • ios