Asianet Suvarna News Asianet Suvarna News

ಕುಡುಕ ಪೋಸ್ಟ್ ಮ್ಯಾನ್ ವರ್ತನೆಗೆ ಬೇಸತ್ತ ಗ್ರಾಮಸ್ಥರು, ಸಂದೇಶ ರವಾನೆಗೆ ಮದ್ಯ ವ್ಯಸನ ಅಡ್ಡಿ

ಅಂಚೆ ಇಲಾಖೆಯ ಮದ್ಯವ್ಯೆಸನಿ ಪೋಸ್ಟ್ ಮ್ಯಾನ್ ವರ್ತನೆಗೆ ಕೊರಟಗೆರೆ ತಾಲ್ಲೂಕಿ‌ನ ಮಲ್ಲೇಕಾವು  ಗ್ರಾಮಸ್ಥರು ರೋಸಿ ಹೋಗಿದ್ದಾರೆ.    ಸದಾ ಮದಿರೆಯ ಮತ್ತಿನಲ್ಲಿ ತೇಲುವ ಪೋಸ್ಟ್ ಮ್ಯಾನ್ ನಾಗೇಂದ್ರ, ಸರಿಯಾದ ಸಮಯಕ್ಕೆ ಅಂಚೆ ಪತ್ರಗಳನ್ನು ತಲುಪಿಸದೆ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ್ದಾನೆ.‌

Villagers are fed up with the behavior of the alcohol addiction postman in tumakuru gow
Author
First Published Jan 16, 2023, 4:59 PM IST

ವರದಿ: ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ 

ತುಮಕೂರು (ಜ.16): ಅಂಚೆ ಇಲಾಖೆಯ ಮದ್ಯವ್ಯೆಸನಿ ಪೋಸ್ಟ್ ಮ್ಯಾನ್ ವರ್ತನೆಗೆ ಕೊರಟಗೆರೆ ತಾಲ್ಲೂಕಿ‌ನ ಮಲ್ಲೇಕಾವು  ಗ್ರಾಮಸ್ಥರು ರೋಸಿ ಹೋಗಿದ್ದಾರೆ.  ಸದಾ ಮದಿರೆಯ ಮತ್ತಿನಲ್ಲಿ ತೇಲುವ ಪೋಸ್ಟ್ ಮ್ಯಾನ್ ನಾಗೇಂದ್ರ, ಸರಿಯಾದ ಸಮಯಕ್ಕೆ ಅಂಚೆ ಪತ್ರಗಳನ್ನು ತಲುಪಿಸದೆ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ್ದಾನೆ.‌

ಮಲ್ಲೇಕಾವು ಗ್ರಾಮದಲ್ಲಿರುವ ಅಂಚೇ ಕಚೇರಿಯಲ್ಲಿ ಕೆಲಸ ಮಾಡುವ ನಾಗೇಂದ್ರ ಬೆಳಗ್ಗೆಯೇ ಎಣೆ ಹೊಡೆದು ಕೆಲಸಕ್ಕೆ ಹಾಜರಾಗುತ್ತಾನೆ.  ಕುಡಿದ ಮತ್ತಿನಲ್ಲೇ ಕಚೇರಿಯಲ್ಲಿ ನಿದ್ದೆಗೆ ಜಾರುತ್ತಾನೆ. ಈತನ‌ ಈ ಬೇಜವಬ್ದಾರಿ ವರ್ತನೆಯಿಂದ ಗ್ರಾಮದ ಜನರಿಗೆ ಸಾಕಷ್ಟು ನಷ್ಟುವುಂಟಾಗಿದೆ. ಕಳೆದ ಎರಡು ತಿಂಗಳಿಂದಲ್ಲೂ ಯಾವೊಬ್ಬರಿಗೂ ಅಂಚೆ ಪತ್ರಗಳನ್ನು, ಮನಿ ಆರ್ಟರ್ ಗಳನ್ನು ಗ್ರಾಹಕರಿಗೆ ತಲುಪಿಸದೆ ನಿರ್ಲಕ್ಷ್ಯ ತೋರಿದ್ದಾನೆ.‌

ಇದ್ರಿಂದ ಜನರಿಗೆ ಬ್ಯಾಂಕಿಂಗ್ ವ್ಯವಹಾರದ ಪತ್ರಗಳು, ಆಧಾರ್ ಕಾರ್ಡ್ ಅಪ್ಡೇಟ್ ಮಾಹಿತಿ ಪತ್ರ, ಚೆಕ್ ಬುಕ್ ಈ ರೀತಿ ತುರ್ತು ಸೇವೆಗಳು ಸಿಗದೆ ಗ್ರಾಹಕರು ತೊಂದರೆ ಅನುಭವಸಿದ್ದಾರೆ.

Chamarajanagara: ಕೊಳ್ಳೇಗಾಲದ ಸಿದ್ದಪ್ಪಾಜಿಗೆ ಕದ್ದುಮುಚ್ಚಿ ಮದ್ಯ, ಮಾಂಸ ನೈವೇದ್ಯ: ಪಂಕ್ತಿ ಸೇವೆ

ಪತ್ರ ಬಂದಿದೆಯೋ ಅಂತ ತಿಳಿಯಲು ಅಂಚೆ ಕಚೇರಿಗೆ ತೆರಳಿದರೆ, ನಾಗೇಂದ್ರ ಕುಡಿದ ಮತ್ತಿನ ಮಲಗಿರುತ್ತಾನೆ. ಕೊನೆಗೆ ಜನರೇ ಪತ್ರಗಳನ್ನು ಹುಡುಕಿಕೊಂಡು ತೆಗೆದುಕೊಂಡ ಹೋಗಬೇಕಾಗಿದೆ.

Haveri: ಮದ್ಯ ಮುಕ್ತ ಗ್ರಾಮಕ್ಕಾಗಿ ಪ್ರತಿಭಟನೆ, ಎಣ್ಣೆ ಹೊಡೆಯಲು ಬಂದ ತಾತನ ಬಾಟಲ್ ನೆಲಕ್ಕೆಸೆದು ಮಹಿಳೆಯರ ಆಕ್ರೋಶ

ಮದ್ಯ ಪ್ರಿಯ ಅಂಚೆ ಅಣ್ಣನ ಅವಾಂತರದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ರು, ಯಾವುದೇ ಕ್ರಮವಗಿಲ್ಲ, ಇದ್ರಿಂದ ರೋಸಿ ಹೋದ ಗ್ರಾಮಸ್ಥರು , ಈತನ ವರ್ತನೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.  ಈ ಮೂಲಕ ಕುಡಿಕ ಪೋಸ್ಟ್ ಮಾಸ್ಟರ್ ಅನ್ನು ಕೂಡಲೇ ವಜಾ ಮಾಡಬೇಕಿಂದು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios