Asianet Suvarna News Asianet Suvarna News

Haveri: ಮದ್ಯ ಮುಕ್ತ ಗ್ರಾಮಕ್ಕಾಗಿ ಪ್ರತಿಭಟನೆ, ಎಣ್ಣೆ ಹೊಡೆಯಲು ಬಂದ ತಾತನ ಬಾಟಲ್ ನೆಲಕ್ಕೆಸೆದು ಮಹಿಳೆಯರ ಆಕ್ರೋಶ

ಹಾವೇರಿ ತಾಲೂಕು  ನೆಗಳೂರ ಗ್ರಾಮದಲ್ಲಿ ಇಂದು ಮಹಿಳೆಯರು ಮಕ್ಕಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಮದ್ಯ ಮುಕ್ತ ಗ್ರಾಮ ಮಾಡಲು ಬೃಹತ್ ಪ್ರತಿಭಟನೆ ಕೈಗೊಂಡರು. ಗ್ರಾಮದಲ್ಲಿನ MSIL ಅಂಗಡಿ ಮುಚ್ಚಿ ಪ್ರತಿಭಟನೆ ನಡೆಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

Protest for liquor free village in Negalur Village at Haveri gow
Author
First Published Jan 16, 2023, 4:31 PM IST

ಹಾವೇರಿ (ಜ.16): ಹಾವೇರಿ ತಾಲೂಕು  ನೆಗಳೂರ ಗ್ರಾಮದಲ್ಲಿ ಇಂದು ಮಹಿಳೆಯರು ಮಕ್ಕಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಮದ್ಯ ಮುಕ್ತ ಗ್ರಾಮ ಮಾಡಲು ಬೃಹತ್ ಪ್ರತಿಭಟನೆ ಕೈಗೊಂಡರು. ಗ್ರಾಮದಲ್ಲಿನ MSIL ಅಂಗಡಿ ಮುಚ್ಚಿ ಪ್ರತಿಭಟನೆ ನಡೆಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಪಟ್ಟು ಹಿಡಿದ ಗ್ರಾಮಸ್ಥರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಗೆ ಬೆಂಬಲ ನೀಡಿದ ನೆಗಳೂರ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಕೂಡಾ ಮದ್ಯ ನಿಷೇಧಕ್ಕೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ಮಹಿಳೆಯರು, ಶಾಲಾ ಮಕ್ಕಳು ಸೇರಿದಂತೆ ಅನೇಕರು ಭಾಗಿಯಾಗಿದ್ರು. ಪ್ರತಿಭಟನಾ ಸಂಧರ್ಭದಲ್ಲಿ ಮದ್ಯ ಖರೀದಿಗೆ ಬಂದ ವೃದ್ಧನ ವಿರುದ್ದವೂ ಮಹಿಳೆಯರು ಆಕ್ರೋಶ ಹೊರ ಹಾಕಿದರು. ವೃದ್ದನಿಗೆ ತರಾಟೆ ತೆಗೆದುಕೊಂಡ ಮಹಿಳೆಯರು ವೃದ್ದನ ಬಳಿಯಿದ್ದ ಸಾರಾಯಿ ಬಾಟಲಿ ನೆಲಕ್ಕೆಸೆದರು. ಎಂಎಸ್ ಐ ಎಲ್ ಮುಚ್ಚುವಂತೆ ಗ್ರಾಮಸ್ಥರ ಆಗ್ರಹಿಸಿದರು.

ಮದ್ಯ ಖರೀದಿಯ ಕನಿಷ್ಟವಯಸ್ಸಿನ ಮಿತಿ ತಗ್ಗಿಸುವ ಪ್ರಸ್ತಾಪ ಸರಿಯಲ್ಲ
ಮೈಸೂರು:ಕರ್ನಾಟಕ ಅಬಕಾರಿ ಪರವಾನಗಿ ನಿಯಮಗಳು- 1967ರ ವಿಧೇಯಕ್ಕೆ ತಿದ್ದುಪಡಿ ತಂದು ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸಲು ಮೊದಲು ಇದ್ದಂತಹ ಕನಿಷ್ಠ ವಯೋಮಿತಿಯನ್ನು 21 ರಿಂದ 18 ವರ್ಷಕ್ಕೆ ಇಳಿಸಲಿರುವ ಸರ್ಕಾರದ ಪ್ರಸ್ತಾಪವನ್ನು ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಆರ್ಗನೈಸೇಶನ್‌ (ಎಐಡಿವೈಓ) ಜಿಲ್ಲಾ ಕಾರ್ಯದರ್ಶಿ ಎಸ್‌. ಸುಮಾ ಉಗ್ರವಾಗಿ ಖಂಡಿಸಿದ್ದಾರೆ.

Mangaluru News: ವಿದ್ಯಾರ್ಥಿಗಳು ಬರುವ ಮೊದಲೇ ಕುಡಿದು ಮಲಗಿದ್ದ ಸರ್ಕಾರಿ ಶಾಲಾ ಶಿಕ್ಷಕ ಅಮಾನತ್ತು

ನಮ್ಮ ಸಮಾಜದಲ್ಲಿ ಈಗಾಗಲೇ ಮದ್ಯ ಮತ್ತು ಮಾದಕ ವ್ಯಸನಗಳಿಗೆ ಯುವ ಜನತೆ ಬಲಿಯಾಗುತ್ತಿರುವುದು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೀಗಿರುವಾಗ ಅತ್ಯಂತ ಚಿಕ್ಕ ವಯಸ್ಸಿಗೆ ಇವುಗಳ ಲಭ್ಯತೆ ಸಿಗುವಂತಾದರೆ, ವಯೋಸಹಜ ಕುತೂಹಲದಿಂದ ವ್ಯಸನಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೆ, ರಾಜ್ಯ ಹೆದ್ದಾರಿಗಳಿಂದ 500 ಮೀಟರ್‌ ಅಂತರದವರೆಗೆ ಮದ್ಯದ ಅಂಗಡಿಗಳನ್ನು ತೆರೆಯಲು ಇದ್ದಂತಹ ನಿರ್ಬಂಧÜವನ್ನು ತೆಗೆದು ಹಾಕಿ, ಷರತ್ತುಗಳಿಗೊಳಪಟ್ಟು 220 ಮೀಟರ್‌ ಅಂತರದಲ್ಲಿಯೇ ಮದ್ಯದ ಅಂಗಡಿಗಳನ್ನು ತೆರೆಯಬಹುದು ಎಂಬ ಪ್ರಸ್ತಾವನೆಯೂ ಅಪಾಯಕಾರಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಜಸ್ಟ್ ಒನ್ ಪೆಗ್ ಕುಡಿದ್ರೆ ಏನಾಗಲ್ಲ ಅನ್ಬೇಡಿ, ಕಡಿಮೆ ಅಲ್ಕೋಹಾಲ್ ಸೇವನೆಯೂ ಕ್ಯಾನ್ಸರ್‌ಗೆ ಕಾರಣವಾಗುತ್ತೆ !

ಇಂದು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲಿಯೂ ಮದ್ಯಪಾನದ ವ್ಯಸನವು ಕುಟುಂಬಗಳನ್ನು ಬೀದಿಗೆ ತಳ್ಳಿದೆ. ಇದಕ್ಕೆ ಬಲಿಯಾದ ಯುವಜನರು ಸಮಾಜಘಾತಕ ಕೃತ್ಯಗಳಲ್ಲಿ ಹಾಗೂ ಅನೈತಿಕ ಕೃತ್ಯಗಳಲ್ಲಿ ತೊಡಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮದ್ಯಪಾನವನ್ನು ಸಂಪೂರ್ಣ ನಿಷೇಧಿಸಬೇಕೆಂದು ಹಲವಾರು ಸಂಘಟನೆಗಳ, ಮಹಿಳೆಯರ ಜನಪರ ಚಳವಳಿಗಳ ಒಕ್ಕೊರಲಿನ ಕೂಗು ಎಲ್ಲೆಡೆ ಇದ್ದರೂ ರಾಜ್ಯ ಸರ್ಕಾರ ಇದ್ಯಾವುದನ್ನೂ ಗಮನಿಸದೇ, ಚಿಕ್ಕ ವಯಸ್ಸಿನ ಯುವಕರಿಗೆ ಮದ್ಯಪಾನವು ಸರಳವಾಗಿ ಸಿಗುವಂತೆ ಮಾಡಲು ಹೊರಟಿರುವ ಸರ್ಕಾರದ ಪ್ರಸ್ತಾಪವು ಅತ್ಯಂತ ಜನವಿರೋಧಿಯಾಗಿದ್ದು, ಈ ಕೂಡಲೇ ಈ ಪ್ರಸ್ತಾವನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios