Chamarajanagara: ಕೊಳ್ಳೇಗಾಲದ ಸಿದ್ದಪ್ಪಾಜಿಗೆ ಕದ್ದುಮುಚ್ಚಿ ಮದ್ಯ, ಮಾಂಸ ನೈವೇದ್ಯ: ಪಂಕ್ತಿ ಸೇವೆ

ಗೊಂದಲಗಳ ನಡುವೆ ಕೊಳ್ಳೇಗಾಲದ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯ ಪಂಕ್ತಿಸೇವೆ 
ಘನನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿ
ಪ್ರಾಣಬಲಿ ನಿಷೇಧ ನಡುವೆಯೂ ಕದ್ದುಮುಚ್ಚಿ ಕೋಳಿ, ಕುರಿಗಳ ಬಲಿ

Oblation of liquor meat offering to Siddappaji fair of Kollegala Pankti Seva sat

ವರದಿ - ಪುಟ್ಟರಾಜು. ಆರ್. ಸಿ. ಏಷ್ಯಾನೆಟ್  ಸುವರ್ಣ ನ್ಯೂಸ್
ಚಾಮರಾಜನಗರ (ಜ.09): 8 ಶತಮಾನಗಳ ಹಿಂದೆ ನಾಡಿನಲ್ಲಿ ಸಮಾನತೆ ಸಾರಿದ ಐತಿಹಾಸಿಕ ಮಹಾಪುರುಷ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧವನ್ನು ವಿಧಿಸಿ ಕೋರ್ಟ್‌ ಆದೇಶ ಹೊರಡಿಸಿದ್ದರೂ, ಕದ್ದು ಮುಚ್ಚಿ ಕುರಿ, ಕೋಳಿಗಳನ್ನು ಬಲಿಕೊಟ್ಟು ಮಾಂಸವನ್ನು ಎಡೆಯಿಟ್ಟು, ಪಂಕ್ತಿ ಸೇವೆ ಮಾಡುತ್ತಿರುವುದು ಕಂಡುಬಂದಿದೆ.

ಎಂಟನೇ ಶತಮಾನದಲ್ಲಿ ಸಮಾಜದಲ್ಲಿ ಇದ್ದ ಮೇಲು ಕೀಳು, ಆಹಾರ ಪದ್ದತಿಯ ತಾರಮ್ಯದ ವಿರುದ್ಧ ಸಿಡಿದೆದ್ದು ಪಂಕ್ತಿ ಬೋಜನದ ಮೂಲಕ ನಾವೇಲ್ಲರೂ ಮನುಷ್ಯರು ಎಂದು ಸಿದ್ದಪ್ಪಾಜಿ ಸಾರಿ ಹೇಳಿದ್ದರು. ಈ ಪಂಕ್ತಿ ಸೇವೆಯಲ್ಲಿ ಮಾಂಸಾಹಾರ, ಸಸ್ಯಾಹಾರದ ಭೋಜನ ತಯಾರಿಸಿ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದರು. ಆದರೆ, ಕೋರ್ಟ್ ಆದೇಶದನ್ವಯ ಚಿಕ್ಕಲ್ಲೂರಿನಲ್ಲಿ ಪ್ರಾಣಿ ವಧೆ ನಡೆಸಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಈ ನಡುವೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಾಂಸಾಹಾರ ತಯಾರಿಸಿ ಪಂಕ್ತಿ ಸೇವೆಗೆ ಅವಕಾಶ ಕಲ್ಪಿಸುವಂತೆ ಪ್ರತಿಭಟಿಸಿದರು. ಇದೆಲ್ಲದರ ನಡುವೆ ಇದೀಗಾ ಪಂಕ್ತಿ ಸೇವೆ ನಡೆದಿದೆ. 

Chamarajanagar: ಇನ್ಸ್‌ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಪುಟ್ಟಸ್ವಾಮಿ!

ಸಿದ್ದಪ್ಪಾಜಿಗೆ ಕಂಡಾಯ ಇಟ್ಟು ಪೂಜೆ:
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಸಿದ್ದಾಪ್ಪಾಜಿ ಜಾತ್ರೆ ಪ್ರತಿ ವರ್ಷ ಮೊದಲನೇ ಹುಣ್ಣಿಮೆಯಂದು ಆರಂಭವಾಗುವ ಜಾತ್ರೆ. ಜಾನಪದ ಗ್ರಂಥಗಳ ದಾಖಲೆ ಪ್ರಕಾರ 8 ಶತಮಾನಗಳಿಂದ ಜಾತ್ರೆ ನಡೆಯುತ್ತಾ ಬಂದಿದೆ. ಹುಣ್ಣಿಮೆಯಂದು ಆರಂಭವಾಗುವ ಜಾತ್ರೆ ಐದು ದಿನಗಳ ಕಾಲ ನಡೆಯುತ್ತದೆ. ಜಾತ್ರೆಗೆ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಹಾಗು ಬೆಂಗಳೂರು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಬಂದ ಭಕ್ತರು ದೇವಾಲಯದ ಆವರಣ ಇಲ್ಲವೇ ಸುತ್ತಮುತ್ತಲ ಖಾಸಗಿ ಜಾಗದಲ್ಲಿ ಬಿಡಾರ ಹೂಡಿ ವಾಸವಾಗಿರುತ್ತಾರೆ. ಬಿಡಾರ ಹೂಡಿದಾಗಿನಿಂದ ಅಲ್ಲಿ ಪವಾಡ ಪುರುಷ ಸಿದ್ದಾಪ್ಪಾಜಿಯ ಕಂಡಾಯ ಇಟ್ಟು ಪೂಜೆ ಸಲ್ಲಿಸುತ್ತಾರೆ. 

ಹರಕೆ ಹೊತ್ತ ಭಕ್ತರು ಕುರಿ, ಕೋಳಿಗಳನ್ನ ಬಲಿ: ಸುಗ್ಗಿಯ ನಂತರ ಬರುವ ಈ ಜಾತ್ರೆಗೆ ಈ ಭಾಗದ ಜನರು ಸಡಗರ ಸಂಭ್ರದಿಂದ ಪಾಲ್ಗೊಳ್ಳುತ್ತಾರೆ. ಜಾತ್ರೆಯ ಆಕರ್ಷಣೀಯ ಮತ್ತು ಹೆಚ್ಚು ಪ್ರಸಿದ್ದಿ ಪಡೆವುದು ನಾಲ್ಕನೇ ದಿನ ನಡೆಯುವ ಪಂಕ್ತಿ ಸೇವೆ. ಹರಕೆ ಹೊತ್ತ ಭಕ್ತರು ಕುರಿ, ಕೋಳಿಗಳನ್ನ ಬಲಿ ಕೊಡುತ್ತಾರೆ. ಪಂಕ್ತಿ ಸೇವೆಗೆ ಪ್ರಾಣಿ ಬಲಿ ಕೊಡಲಾಗುತ್ತಿದೆ ಎಂದು ಪ್ರಾಣಿ ದಯಾ ಕಲ್ಯಾಣ ಸಮಿತಿ ಆರೋಪಿಸಿ ನ್ಯಾಯಾಲದ ಮೆಟ್ಟಿಲು ಹತ್ತಿತ್ತು. ನಂತರ ಮಧಯಂತರ ಆದೇಶ ಹೊರಡಿಸಿದ್ದ ಹೈಕೋರ್ಟ್ ಭಕ್ತರಿಗೆ ಪಂಕ್ತಿ ಸೇವೆಗೆ ಅಡಚಣೆ ಮಾಡದೇ ಕರ್ನಾಟಕ ಪ್ರಾಣಿ ಬಲಿ ಕಾಯ್ದೆ ಉಲ್ಲಂಘನೆ ಮಾಡದಂತೆ ಆದೇಶ ನೀಡಿತ್ತು. ಇದರಿಂದ ಪ್ರಾಣಿ ವಧೆ ನಿಷೇಧ ಮಾಡಲಾಗಿದೆ.

Chamarajanagar: ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಕೋಳಿ,ಕುರಿ ತಪಾಸಣೆ: ಇನ್ನೂ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಜಾತ್ರೆಯ ವಿಶೇಷ ಅಂದರೆ ಭಾಗವಹಿಸುವವರೆಲ್ಲ ಬಹುತೇಕ ರೈತರೇ. 12ನೇ ಶತಮಾನದಲ್ಲಿ ಜಾತಿ ಪದ್ದತಿ, ಪಂಕ್ತಿ ಸೇವೆ ತಾರತಮ್ಯಗಳ ವಿರುದ್ಧ ಹೋರಾಟ ಮಾಡಿದ ರಾಚಪ್ಪಜೀ ಅವರು ಉತ್ತರದಿಂದ ದಕ್ಷಿಣಾಭಿಮುಕವಾಗಿ ಬಂದರು. ಅವರ ಶಿಷ್ಯರೇ ನೀಲಗಾರ ಸಿದ್ದಪ್ಪಾಜಿ. ಜಾತಿ ಭೇದ ದಿಕ್ಕರಿಸಿ ಎಲ್ಲರೂ ಸಹಪಂಕ್ತಿಯಲ್ಲಿ ಊಟ ಮಾಡಬೇಕು ಎಂಬ ಕಲ್ಪನೆಯೊಂದಿಗೆ ಚಿಕ್ಕಲ್ಲೂರಿನಲ್ಲಿ ನೆಲೆಸಿದರು. ಅವರ ಐಕ್ಯವಾದ ನಂತರ ವರ್ಷದ ಮೊದಲ ಹುಣ್ಣಿಮೆ ದಿನದಿಂದ ಐದು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಆದರೆ ಭಕ್ತರು ತರುವ ಕುರಿ, ಕೋಳಿಗಳನ್ನು ತೆಗೆದುಕೊಂಡು ಹೋಗದಂತೆ ಪೊಲೀಸರು ಹದ್ದಿನ ಕಣ್ಣೀಟ್ಟು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸುತ್ತಿದ್ದರು.

ಪೊಲೀಸರ ಕಣ್ತಪ್ಪಿಸಿ ಪ್ರಾಣಿ ಬಲಿ: ಚೆಕ್‌ ಪೋಸ್ಟ್‌ಗಳಲ್ಲಿ ಪೊಲೀಸರು ತಪಾಸನೆ ಮಾಡಿದರೂ ಕೂಡ ಕದ್ದುಮುಚ್ಚಿ ಕುರಿ, ಕೋಳಿ ಕೊಯ್ದು ಮಾಂಸಾಹಾರ ತಯಾರಿಸಿ ಖಂಡಾಯಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಮದ್ಯ, ಮಾಂಸಾಹಾರ, ಭಂಗಿ ಸೊಪ್ಪಿನ ನೈವೇದ್ಯ ಕೂಡ ಇಡುತ್ತಿದ್ದಾರೆ. ಒಟ್ಟಾರೆ ಗೊಂದಲ ಜಿಜ್ಞಾಸೆ ನಡುವೆಯೇ ಚಿಕ್ಕಲ್ಲೂರಿನಲ್ಲಿ ಪಂಕ್ತಿ ಸೇವೆ ನಡೆದಿದೆ.ಮುಂದಿನ ಬಾರಿ ಸರ್ಕಾರ ಪಂಕ್ತಿ ಸೇವೆಗೆ ಮಾಂಸಾಹಾರ ಭೋಜನಕ್ಕೆ ಅವಕಾಶ ಕೊಡಲಿ, ನಾವೂ ಪ್ರಾಣಿ ಬಲಿ ಕೊಡಲ್ಲ, ಹರಕೆ ತೀರಿಸುವ ಕೆಲಸ ಮಾಡ್ತೀವಿ. ಜನರ ಆಚಾರ ವಿಚಾರಕ್ಕೂ ಮಣೆ ಹಾಕುವಂತೆ ಭಕ್ತರು ಮನವಿ ಮಾಡ್ತಿದ್ದಾರೆ..

Latest Videos
Follow Us:
Download App:
  • android
  • ios