Asianet Suvarna News Asianet Suvarna News

'ವಿಜಯೇಂದ್ರ ವೀರಶೈವ ಸಮಾಜ ಮುನ್ನಡೆಸುವ ಸಮರ್ಥ ನಾಯಕ'

*  ರಾಜಕೀಯದಲ್ಲಿ ವೀರಶೈವ ಸಮಾಜದ ಪರವಾಗಿ ಧ್ವನಿ ಎತ್ತುವವರು ಬೇಕಾಗಿದ್ದಾರೆ
*  ಬಿಎಸ್‌ವೈಗೆ ಪ್ರಶಸ್ತಿ ಪ್ರದಾನವಿಲ್ಲ
*  ಮಹಾಸಭಾದಿಂದ ಪುನೀತ್‌ಗೆ ಶ್ರದ್ಧಾಂಜಲಿ
 

Vijayendra is an capable leader of the Leading Veerashaiva Community in Politics grg
Author
Bengaluru, First Published Oct 31, 2021, 11:06 AM IST

ಬಳ್ಳಾರಿ(ಅ.31):  ವೀರಶೈವ ಲಿಂಗಾಯತ(Veerashaiva Lingayat) ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವವರು ಅಗತ್ಯವಿದ್ದು ಬಿ.ವೈ. ವಿಜಯೇಂದ್ರ(BY Vijayendra) ಅವರು ಸಮರ್ಥ ನಾಯಕರಾಗುವ ಗುಣ ಹೊಂದಿದ್ದಾರೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ ತಿಳಿಸಿದ್ದಾರೆ. 

ಇಲ್ಲಿನ ಬಸವಭವನದಲ್ಲಿ ಶನಿವಾರ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭಾ ವಿವಿಧ ಘಟಕಗಳು, ವಿಭಾಗಗಳ ಪದಾಧಿಕಾರಿಗಳ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜಕೀಯ(Politics) ಕ್ಷೇತ್ರದಲ್ಲಿ ವೀರಶೈವ ಸಮಾಜದ ಪರವಾಗಿ ಧ್ವನಿ ಎತ್ತುವವರು ಬೇಕಾಗಿದ್ದಾರೆ. ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರು ವೀರಶೈವ ಲಿಂಗಾಯತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಬಿ.ವೈ. ವಿಜಯೇಂದ್ರ ಅವರು ಸಹ ತಂದೆಯಂತೆ ಸಮರ್ಥ ನಾಯಕತ್ವವನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿಯಾಗಿದ್ದು, ನಾವೆಲ್ಲರೂ ಅವರನ್ನು ಬೆಂಬಲಿಸಬೇಕಾಗಿದೆ ಎಂದರು.

ಕೂಡ್ಲಿಗಿ ವಿಸ್ಮಯ ಕಲ್ಲು ನೋಡಿ ವಾವ್‌ ಎಂದಿದ್ದ ಪುನೀತ್‌ ರಾಜಕುಮಾರ್‌

ಆಗ ಮಹಾಸಭಾದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ(Karnataka) ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಜನರು ಚಪ್ಪಾಳೆ ತಟ್ಟುವ ಮೂಲಕ ಪರಮೇಶ್ವರಯ್ಯ ಅವರ ಹೇಳಿಕೆಯನ್ನು ಬೆಂಬಲಿಸಿದರು.

ವಿಧಾನಪರಿಷತ್‌(Vidhanaparishat) ಸದಸ್ಯ ಅಲ್ಲಂ ವೀರಭದ್ರಪ್ಪ ಮಾತನಾಡಿ, ವೀರಶೈವ ಸಮಾಜ(Veerashaiva Community) ಒಗ್ಗಟ್ಟು ಕಾಪಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಉಳಿಗಾಲವಿಲ್ಲ. ಸರ್ಕಾರದ(Government) ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಅಭಿವೃದ್ಧಿ ಕಾಣಬೇಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಸ್ವಾಗತಾರ್ಹವಾಗಿದ್ದು ವೀರಶೈವರ ಕಲ್ಯಾಣಕ್ಕಾಗಿ ಎಲ್ಲರೂ ಜತೆಗೂಡಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಕಮ್ಮರಚೇಡು ಕಲ್ಯಾಣ ಸಂಸ್ಥಾನಪೀಠದ ಶ್ರೀ ಕಲ್ಯಾಣಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಮಠಗಳು ಜಾತಿ(Caste), ಬೇಧ ಎನ್ನದೆ ಎಲ್ಲ ಸಮುದಾಯದಗಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಇಡೀ ವಿಶ್ವಕ್ಕೆ(World) ಮಾದರಿಯಾಗಿವೆ. ವೀರಶೈವ ಲಿಂಗಾಯತರು ಯಾವುದೇ ಪಕ್ಷದಲ್ಲಿರಲಿ; ಸಮುದಾಯದ ಸಮಸ್ಯೆ ಎದುರಾದಾಗ ಎಲ್ಲರೂ ಒಂದಾಗಬೇಕು. ಮೊದಲು ಸಮಾಜ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್‌ ಶೇಖರ್‌ ಪ್ರಾಸ್ತಾವಿಕ ಮಾತನಾಡಿದರು. ಸೌದತ್ತಿಮಠದ ನಿರ್ವಹಣೇಶ್ವರ ಮಹಾಸ್ವಾಮಿ, ಮಹಾಸಭಾದ ರಾಜ್ಯಾಧ್ಯಕ್ಷ ಎನ್‌.ತಿಪ್ಪಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಬಿ.ವೈ. ಅರುಣಾದೇವಿ, ರಾಜ್ಯ ಉಪಾಧ್ಯಕ್ಷ ಎಚ್‌.ಎಂ. ಚಂದ್ರಶೇಖರಪ್ಪ, ಅಲ್ಲಂ ಪ್ರಶಾಂತ್‌, ಡಾ. ಮಹಿಪಾಲ್‌, ರಾಜಶೇಖರ ಮುಲಾಲಿ ಮತ್ತಿತರರಿದ್ದರು. ಬಂಡ್ರಾಳು ಮೃತ್ಯುಂಜಯಸ್ವಾಮಿ ಹಾಗೂ ನಟರಾಜ್‌ ಕಾರ್ಯಕ್ರಮ ನಿರ್ವಹಿಸಿದರು. ಎಂ. ನಾಗಭೂಷಣ್‌ ಅವರ ಗಾನಗಂಧರ್ವ ಕಲಾ ತಂಡದಿಂದ ಗೀತಗಾಯನ ಜರುಗಿತು.

ಗಣಿ ನಾಡು ಬಳ್ಳಾರಿ ಜತೆ ನಿಕಟ ಸಂಪರ್ಕ ಹೊಂದಿದ್ದ ಅಪ್ಪು..!

ಇಂದಿನ ಕಾರ್ಯಕ್ರಮ ರದ್ದು: ಬಿಎಸ್‌ವೈಗೆ ಪ್ರಶಸ್ತಿ ಪ್ರದಾನವಿಲ್ಲ

ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ನಿಧನ ಹಿನ್ನಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಹಾನಗಲ್ಲ ಕುಮಾರ ಶಿವಯೋಗಿಗಳ 154ನೇ ಜಯಂತಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬಸವರತ್ನ ಪ್ರಶಸ್ತಿ(Basavararatna Award) ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿದ ಎಚ್‌.ಎಂ. ರೇಣುಕಾ ಪ್ರಸನ್ನ ಅವರು ಸಭೆಯಲ್ಲಿ ಪ್ರಕಟಿಸಿದರು. ನಟ ಪುನೀತ್‌ ಸಾವು ನಮಗೂ ತೀವ್ರ ಆಘಾತ ತಂದಿದೆ. ಹೀಗಾಗಿ, ಕಾರ್ಯಕ್ರಮ ರದ್ದುಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಹೇಳಿದರು.

ಮಹಾಸಭಾದಿಂದ ಪುನೀತ್‌ಗೆ ಶ್ರದ್ಧಾಂಜಲಿ

ವೀರಶೈವ ಮಹಾಸಭಾದ ಕಾರ್ಯಕಾರಿಣಿ ಶುರು ಮುನ್ನ ಹೃದಯಾಘಾತದಿಂದ(Heart Attack) ನಿಧನರಾದ(Death)ನಟ ಪುನೀತ್‌ರಾಜ್‌ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸವಭವನ ಮುಂಭಾಗ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಎನ್‌.ತಿಪ್ಪಣ್ಣ, ಶಾಸಕ ಅಲ್ಲಂ ವೀರಭದ್ರಪ್ಪ ಸೇರಿದಂತೆ ನೂರಾರು ಜನರು ಭಾಗವಹಿಸಿ, ಅಗಲಿದ ನಟನಿಗೆ ಗೌರವ ಸಮರ್ಪಿಸಿದರು.

ಬಳ್ಳಾರಿಯ(Ballari) ಬಸವಭವನದಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸಭೆಗೆ ಶನಿವಾರ ಚಾಲನೆ ನೀಡಲಾಯಿತು. ಸಭಾದ ರಾಜ್ಯಾಧ್ಯಕ್ಷ ಎನ್‌.ತಿಪ್ಪಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಬಿ.ವೈ.ಅರುಣಾದೇವಿ ಮತ್ತಿತರರಿದ್ದರು.

ಹೃದಯಾಘಾತದಿಂದ ನಿಧನರಾದ ನಟ ಪುನೀತ್‌ ರಾಜ್‌ಕುಮಾರ್‌ರಿಗೆ ವೀರಶೈವ ಮಹಾಸಭಾದಿಂದ ಬಳ್ಳಾರಿಯ ಬಸವಭವನದ ಮುಂಭಾಗ ಶನಿವಾರ ಶ್ರದ್ಧಾಂಜಲಿ ಸಭೆ ಜರುಗಿತು. ಸಭಾದ ರಾಜ್ಯಾಧ್ಯಕ್ಷ ಎನ್‌.ತಿಪ್ಪಣ್ಣ, ಚಾನಾಳ್‌ ಶೇಖರ್‌ ಮತ್ತಿತರರಿದ್ದರು.
 

Follow Us:
Download App:
  • android
  • ios