ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಮದ್ಯ ಸೇವನೆ ನಶೆಯಲ್ಲಿಯೇ ಬಂದು ಮಹಿಳೆಗೆ ಡಯಾಲಿಸಿಸ್‌ ಮಾಡಲು ಮುಂದಾಗಿದ್ದು, ಕುಡುಕನ ಯಡವಟ್ಟಿನಿಂದ ಮಹಿಳೆ ಸಾವನ್ನಪ್ಪಿದ್ದಾರೆ.

ವಿಜಯಪುರ (ನ.01): ವಿಜಯಪುರ ಜಿಲ್ಲೆಯ ಇಂಡಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಮದ್ಯ ಸೇವನೆ ಮಾಡಿ ನಶೆಯಲ್ಲಿಯೇ ಬಂದು ಮಹಿಳೆಗೆ ಡಯಾಲಿಸಿಸ್‌ ಮಾಡಲು ಮುಂದಾಗಿದ್ದು, ತಾನು ಮಾಡಿದ ಯಡವಟ್ಟಿನಿಂದ ಚಿಕಿತ್ಸೆಗೆ ಬಂದ ಮಹಿಳೆಯ ಪ್ರಾಣಪಕ್ಷಿ ಹಾರಿ ಹೋಗಿದೆ. 

ಇಂಡಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಯಡವಟ್ಟಿನಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಕುಡಿದು ನಶೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದ‌‌ ಸಿಬ್ಬಂದಿಯಿಂದ ಭಾರಿ ಯಡವಟ್ಟು ಸಂಭವಿಸಿದೆ. ನಶೆಯಲ್ಲಿ ಡಯಾಲಿಸಿಸ್ ಮಾಡಿ ಮಹಿಳೆಯ ಪ್ರಾಣವನ್ನೆ ತೆಗೆದಿದ್ದಾನೆ. ವಿಜಯಪುರ ಜಿ.‌ ಇಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಡಯಾಲಿಸಿಸ್ ವೇಳೆ ಆಸ್ಪತ್ರೆ ಬೆಡ್ ಮೇಲೆಯೇ ಮೃತಪಟ್ಟ ಮಹಿಳಾ ರೋಗಿ. ಆಸ್ಪತ್ರೆ ಎದುರು ಶವವಿಟ್ಟು ಕುಟುಂಬಸ್ಥರ ಆಕ್ರೋಶ. ಟೈರ್ ಗೆ ಬೆಂಕಿ ಹಚ್ಚಿ ಆಸ್ಪತ್ರೆ ಎದುರು ಪ್ರತಿಭಟನೆ ಮಾಡಲಾಗುತ್ತಿದೆ.

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹೆಸರಲ್ಲಿ 'ಹೃದಯ ಜ್ಯೋತಿ ಯೋಜನೆ ' ಆರಂಭ: ಹೃದಯಾಘಾತಕ್ಕೆ ಆಗುವುದೇ ಪರಿಹಾರ!

ಬಿಸ್ಮಿಲ್ಲಾ ನದಾಫ್ (35) ಸಾವನ್ನಪ್ಪಿದ ಮಹಿಳೆ. ಇಂಡಿ ತಾ. ಮಾವಿನಹಳ್ಳಿ ಗ್ರಾಮದವಳಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್ ಗೆ ಬಿಸ್ಮಿಲ್ಲಾಳನ್ನ ಕರೆತಂದಿದ್ದ ಪೋಷಕರು. ಆದರೆ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಸವರಾಜ್ ಹಂಜಗಿ ಎನ್ನುವವರು ಕುಡಿದ ನಶೆಯಲ್ಲೆ‌ ಡಯಾಲಿಸಿಸ್ ಮಾಡಿದ್ದಾರೆ. ಅವರು ಸರಿಯಾಗಿ ಡಯಾಲಿಸಿಸ್‌ ಕ್ರಮವನ್ನು ಪಾಲಿಸದ ಹಿನ್ನೆಲೆಯಲ್ಲಿ ರೋಗಿ ಬಿಸ್ಮಿಲ್ಲ ಸಾವನ್ನಪ್ಪಿದ್ದಾಳೆ ಎಂದು ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ. 

ಹಾರ್ಟ್‌ ಅಟ್ಯಾಕ್‌ ಪ್ರಮಾಣ ಕಳೆದ 10 ವರ್ಷಗಳಲ್ಲಿ ಶೇ.22 ಹೆಚ್ಚಳ: ಡಾ. ಸಿ.ಎನ್. ಮಂಜುನಾಥ್‌

ಮಂಗಳವಾರವೇ ಡಯಾಲಿಸಿಸ್ ಗಾಗಿ ಬಿಸ್ಮಿಲ್ಲಾಳನ್ನು ಕರೆತರಲಾಗಿತ್ತು. ನಿನ್ನೆ ಡಯಾಲಿಸಿಸ್ ಮಾಡಲು ಬರ್ತಿನಿ‌ ಎಂದು ಹೇಳಿದ್ದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಸವರಾಜ್ ಅಲ್ಲಿಂದ ಹೋಗಿದ್ದನು. ಇಂದು ಮಧ್ಯಾಹ್ನ 12 ಗಂಟೆಗೆ ಕುಡಿದು ನಶೆಯಲ್ಲಿಯೇ ಆಸ್ಪತ್ರೆಗೆ ಬಂದಿದ್ದಾನೆ. ನಂತರ, ನಶೆಯಲ್ಲಿಯೇ ಬಂದು ಡಯಾಲಿಸಿಸ್‌ ಮಾಡುವಾಗ ಯಡವಟ್ಟು ಮಾಡಿಕೊಂಡಿದ್ದಾನೆ. ಈ ಯಡವಟ್ಟಿನಿಂದ ಡಯಾಲಿಸಿದ್‌ ಪಡೆಯುತ್ತಿದ್ದ ಮಹಿಳೆ ಬಿಸ್ಮಿಲ್ಲಾ ಹಾಸಿಗೆ ಮೇಲೆಯೇ ಸಾವಿಗೀಡಾಗಿದ್ದಾಲೆ. ಈಗ ಇಂಡಿ ತಾಲ್ಲೂಕಾ ಆಸ್ಪತ್ರೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.