ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು: ವೃದ್ಧ ದಂಪತಿಗಳ ಬದುಕಿಗೆ ಆಸರೆಯಾದ ಜಿಲ್ಲಾಧಿಕಾರಿ

ವಿಜಯಪುರದಲ್ಲಿ ಸಹಾಯಕ್ಕೆ ಅಂಗಲಾಚಿ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದ ವೃದ್ಧ ದಂಪತಿಗಳಿಗೆ ಸ್ವತಃ ಜಿಲ್ಲಾಧಿಕಾರಿಗಳೆ ಆಸರೆಯಾದ ಅಪರೂಪದ ಘಟನೆ ನಡೆದಿದೆ. 

Vijayapura DC Sanctioned old age pension to an elderly couple within an hour gvd

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.03): ನಾವು ಅಲ್ಲಲ್ಲಿ ವೃದ್ಧಾಪ್ಯ ವೇತನ, ಮಾಸಾಶನ, ವಿಧವಾ ವೇತನಕ್ಕಾಗಿ ಅಲೆದಾಡುವ ಅನೇಕ ಜನರನ್ನ ನೋಡಿರುತ್ತೇವೆ. ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ್ರು ಅವರ ಗೋಳು ಕೇಳುವವರೆ ಇರೋದಿಲ್ಲ. ಆದ್ರೆ ವಿಜಯಪುರದಲ್ಲಿ ಸಹಾಯಕ್ಕೆ ಅಂಗಲಾಚಿ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದ ವೃದ್ಧ ದಂಪತಿಗಳಿಗೆ ಸ್ವತಃ ಜಿಲ್ಲಾಧಿಕಾರಿಗಳೆ ಆಸರೆಯಾದ ಅಪರೂಪದ ಘಟನೆ ನಡೆದಿದೆ. ವೃದ್ಧಾಪ್ಯ ವೇತನ ಇಲ್ಲದೆ ಕಂಗಾಲಾಗಿದ್ದ ದಂಪತಿಗಳಿಗೆ ಕೇವಲ ಒಂದು ಗಂಟೆಯಲ್ಲೆ ವೃದ್ಧಾಪ್ಯ ವೇತನ ಮಂಜೂರು ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ..

ಒಂದೆ ಗಂಟೆಯಲ್ಲಿ ವೃದ್ಧಾಪ್ಯ ವೇತನ ಮಂಜೂರು ಮಾಡಿದ ಡಿಸಿ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಮುಂದೆ ಅಳಲು ತೋಡಿಕೊಂಡು ಬಂದ ಬಡ ವೃದ್ಧ ದಂಪತಿಗಳಿಗೆ ಒಂದು ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಡ ವೃದ್ಧ ದಂಪತಿಗಳು ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ತಮ್ಮ ಜೀವನೋಪಾಯಕ್ಕೆ ಆಸರೆ ಒದಗಿಸಲು ಮನವಿ ಮಾಡಿಕೊಂಡಾಗ, ಖುದ್ದು ಜಿಲ್ಲಾಧಿಕಾರಿಗಳು ಅವರ ದೂರನ್ನು ಶಾಂತಚಿತ್ತದಿಂದ ಅಲಿಸಿ, ಸ್ಥಳದಲ್ಲಿಯೇ ವೃದ್ದ ದಂಪತಿಗಳಿಗೆ ಪಿಂಚಣಿ ಮಂಜೂರು ಮಾಡಿಸುವ ಮೂಲಕ ಅಸರೆ ಒದಗಿಸಿರುವ ಘಟನೆ ಜರುಗಿದೆ. 

ಹೊನ್ನಾವರದಲ್ಲಿ 2 ಕುಟುಂಬಕ್ಕೆ 6 ವರ್ಷದಿಂದ ಸಾಮಾಜಿಕ ಬಹಿಷ್ಕಾರ: ಜಿಲ್ಲಾಡಳಿತದ ಮೊರೆಹೋದ ಸಂತ್ರಸ್ತರು!

ಡಿಸಿ ಅವರೆ ಮೊರೆ ಹೋದ ದಂಪತಿಗಳು ಗ್ಯಾಂಗಬಾವಡಿಯ ನಿವಾಸಿಗಳಾದ ಸೂರ್ಯಕಾಂತ ರಾಮದುರ್ಗಕರ ಹಾಗೂ ಶ್ರೀಮತಿ ಸುರೇಖಾ ರಾಮದುರ್ಗಕರ್. ಪಿಂಚಣಿಗಾಗಿ ಹಲವು ಬಾರಿ ಕಚೇರಿಗಳಿಗೆ ಅಲೆದಾಡಿದ್ದರು. ಆದರೆ ಎಲ್ಲಿಯೂ ಸ್ಪಂದನೆ ಸಿಗದೆ ಹೋದಾಗ ನೇರವಾಗಿ ಜಿಲ್ಲಾಧಿಕಾರಿಗಳ ಭೇಟಿಗೆ ತೆರಳಿದ್ದರು. ಈ ವೇಳೆ ವೃದ್ಧದಂಪತಿಗಳ ಕಷ್ಟ ಅರ್ಥ ಮಾಡಿಕೊಂಡ ಡಿಸಿ ಸ್ಥಳದಲ್ಲೆ ಸ್ಪಂದನೆ ನೀಡಿದ್ದಾರೆ‌‌. ಇತ್ತ ಜನರ ಕಷ್ಟಗಳಿಗೆ ತತ್‌ಕ್ಷಣವೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ..

ಪಿಂಚಣಿಗಾಗಿ ಫಲಾನುಭವಿಗಳು ಅಲೆಯಬಾರದು: ಸರ್ಕಾರದ ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಜಿಲ್ಲೆಯ ಯಾವುದೇ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವಂತಾಗಬಾರದು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಿ ಅರ್ಹ ಫಲಾನುಭವಿಗಳಿಗೆ ಅವಶ್ಯಕತೆಯಿರುವವರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಡಿಸಿ ಟಿ ಭೂಬಾಲನ್ ತಾಕೀತು ಮಾಡಿದ್ದಾರೆ. ವೃದ್ಧ ದಂಪತಿಗಳಿಗೆ ನೆರವು ನೀಡಿ ಬಳಿಕ ಸಂಬಂಧಿಸಿದ ಅಧಿಕಾರಿಗಳು ಫಲಾನುಭವಿಗಳು ಅಲೆಯುಂತೆ ಮಾಡಬಾರದು ಎಂದು ತಾಕೀತು ಮಾಡಿದರು. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವಿವಿಧ ಪಿಂಚಣಿ ಯೋಜನೆಗಳಾಗಿ ಅರ್ಹರು ತಾಲೂಕಾ ತಹಶೀಲ್ದಾರರನ್ನು ಸಂಪರ್ಕಿಸಬೇಕು  ಎಂದಿದ್ದಾರೆ.

ಗ್ಯಾರಂಟಿಗಳ ಅನುಷ್ಠಾನ ತರುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲ: ಎಂ.ಪಿ.ರೇಣುಕಾಚಾರ್ಯ

ಪಿಂಚಣಿ ಅದಾಲತ್ ಸದುಪಯೋಗ ಪಡೆಸಿಕೊಳ್ಳಿ: ಜಿಲ್ಲೆಯಾದ್ಯಂತ ಪಿಂಚಣಿ ಅದಾಲತ್‍ಗಳನ್ನು ಆಯೋಜಿಸುವ ಮೂಲಕ ಅರ್ಹರಿಗೆ ಸೌಲಭ್ಯ ದೊರಕಿಸಲು ಪ್ರಯತ್ನಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios