ಗ್ಯಾರಂಟಿಗಳ ಅನುಷ್ಠಾನ ತರುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲ: ಎಂ.ಪಿ.ರೇಣುಕಾಚಾರ್ಯ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ತಿಂಗಳಾಗಿದ್ದರೂ ಕೊಟ್ಟಭರವಸೆಗಳ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

Ex Minister MP Renukacharya Slams On Congress Govt gvd

ಹೊನ್ನಾಳಿ (ಆ.03): ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ತಿಂಗಳಾಗಿದ್ದರೂ ಕೊಟ್ಟಭರವಸೆಗಳ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಾಲೂಕಿನ ನೇರಲಗುಂಡಿ, ಬೇವಿನಹಳ್ಳಿ, ಹನುಮನಹಳ್ಳಿ ಬಡಾವಣೆ, ತಿಮ್ಲಾಪುರ ತಾಂಡ, ತಿಮ್ಲಾಪುರ, ಯಕ್ಕನಹಳ್ಳಿ, ಚಿಕ್ಕಹಾಲಿವಾಣ ಬಡಾವಣೆ, ಯರೇಹಳ್ಳಿ, ಯರೇಚಿಕ್ಕನಹಳ್ಳಿ, ನೆಲವೊನ್ನೆ ತಾಂಡ, ಕುಂಬಳೂರು, ಕೂಲಂಬಿ, ತಿಮ್ಲಾಪುರ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರವನ್ನು ವಿತರಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಇಲಾಖೆ ಈ ವರ್ಷಕ್ಕೆ ಮಾತ್ರವೇ ಹಣ ಇಟ್ಟಿದ್ದು ಮುಂದಿನ ವರ್ಷದಿಂದ ಹಣ ಕೊಡಲು ಆಗಲ್ಲ ಎಂದು ಹೇಳಿದ್ದಾರೆ ಎಂದ ರೇಣುಕಾಚಾರ್ಯ, ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಕುಸಿಯಲಿದೆ. ಈಗಾಗಲೇ ದಿನೋಪಯೋಗಿ ವಸ್ತುಗಳಾದ ತರಕಾರಿ, ಹಾಲು ಸೇರಿ ವಿವಿಧ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು ಸಾರ್ವಜನಿಕರು ಸಾಕಷ್ಟುತೊಂದರೆ ಅನುಭವಿಸುತ್ತಿದ್ದಾರೆ ಎಂದರು. 

ಶೂನ್ಯ ಬಡ್ಡಿ ದರ ಸಾಲ ಸೌಲಭ್ಯ ಹೆಚ್ಚಳ: ಸಚಿವ ಚಲುವರಾಯಸ್ವಾಮಿ

ಮಹಿಳೆಯರಿಗೆ ಉಚಿತ ಬಸ್‌ ವ್ಯವಸ್ಥೆ ಸರ್ಕಾರ ಕಲ್ಪಿಸಿದರೂ, ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲ ಮೊದಲು ಗ್ರಾಮೀಣ ಪ್ರದೇಶಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ಗೃಹಲಕ್ಷ್ಮಿ ಯೋಜನೆಗೆ ಮೊದಲು ಯಾವುದೇ ಷರತ್ತುಗಳ ಸರ್ಕಾರ ವಿಧಿಸಿರಲಿಲ್ಲ ಆದರೇ ಇದೀಗ ಷರತ್ತುಗಳ ವಿಧಿಸುತ್ತಿದ್ದು, ಯಾವುದೇ ಷರತ್ತುಗಳಿಲ್ಲದೆ ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ಜಾರಿ ಮಾಡಬೇಕೆಂದರು.

ಕರಪತ್ರ ವಿತರಣೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಹಾಸಂಪರ್ಕ ಅಭಿಯಾನದಡಿ ಹೊನ್ನಾಳಿ-ನ್ಯಾಮತಿ ತಾಲೂಕಿನ ಪ್ರತಿ ಹಳ್ಳಿಗಳಿಗೂ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ಜನರ ಮನೆ ಬಾಗಿಲಿಗೆ ತಲುಪಿಸಿ ಕೇಂದ್ರ ಸರ್ಕಾರದ ಸಾಧನೆಗಳ ಜನರಿಗೆ ತಿಳಿಸುವ ಜೊತೆಗೆ ನರೇಂದ್ರ ಮೋದಿಯವರ ಮತ್ತೊಮ್ಮೆ ಪ್ರಧಾನಿಯಾಗಿಸಲು ಎಲ್ಲರೂ ಕೈಜೋಡಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಈ ವೇಳೆ ಬಿಜೆಪಿ ಉಪಾಧ್ಯಕ್ಷ ನೆಲವೊನ್ನೆ ಮಂಜುನಾಥ್‌, ಕುಂದೂರು ಅನಿಲ್‌,ಹನುಮಂತಪ್ಪ, ರುದ್ರೇಶಪ್ಪ ಸೇರಿ ಮತ್ತಿತರರಿದ್ದರು.

ಪ್ರತಿ ಹಳ್ಳಿಯಲ್ಲೂ ಕೇಂದ್ರ ಸರ್ಕಾರ ಸಾಧನೆ ತಿಳಿಸುವೆ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರವನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಕರಪತ್ರ ನೀಡಿ ಗಮನ ಸೆಳೆದರು. ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಕೇಂದ್ರ ಸರ್ಕಾರ ಸಾಧನೆಗಳ ಕರಪತ್ರ ವಿತರಿಸಿ ಕೇಂದ್ರ ಸರ್ಕಾರದ ಜನಪರ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. 

ಜನರನ್ನು ಲಂಚಕ್ಕಾಗಿ ಪೀಡಿಸುತ್ತಿರಲ್ಲ, ನಿಮಗೆ ಮರ್ಯಾದೆ ಇದೆಯೇ: ಅಧಿಕಾರಿಗಳಿಗೆ ಶಾಸಕಿ ರೂಪಕಲಾ ತರಾಟೆ

ಪ್ರಧಾನಿ ನರೇಂದ್ರ ಮೋದಿ ಕಳೆದ 9 ವರ್ಷದಿಂದ ಸಾಕಷ್ಟುಜನಪರ ಕೆಲಸಗಳ ಮಾಡಿದ್ದು ಅವುಗಳ ಜನರಿಗೆ ತಿಳಿಸಬೇಕಾದ್ದು ನಮ್ಮ ಕರ್ತವ್ಯ ಈ ಹಿನ್ನೆಲೆಯಲ್ಲಿ ಅವಳಿ ತಾಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಜನರಿಗೆ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇನೆಂದರು. ನರೇಂದ್ರ ಮೋದಿ ಕಳೆದ 9 ವರ್ಷದಿಂದ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದು, ವಿಶ್ವ ಮೆಚ್ಚಿದ ನಾಯಕ ಎನಿಸಿದ್ದಾರೆಂದ ರೇಣುಕಾಚಾರ್ಯ, ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶ ಆರ್ಥಿಕವಾಗಿ ಮುಂದುವರಿದ ದೇಶವಾಗಿದ್ದು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿಸಲು ಎಲ್ಲರೂ ಕೈಜೋಡಿಸಬೇಕೆಂದರು.

Latest Videos
Follow Us:
Download App:
  • android
  • ios