ಗ್ರಾಮದ‌ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಮೀನು ದಾನ ನೀಡಿದ ದಂಪತಿ..!

• ಸೋಮನಾಥ, ರೇಣುಕಾ ಬಗಲಿ ದಂಪತಿಯ ಸಾಮಾಜಿಕ ಕಳಕಳಿ ಸಮಾಜಕ್ಕೆ ಮಾದರಿ..!
• ಗ್ರಾಮದ‌ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಮೀನು ದಾನ ನೀಡಿದ ದಂಪತಿ..!
• ಗ್ರಾಮ ಪಂಚಾಯಿತಿಗೆ ದಾನ ರೂಪದಲ್ಲಿ ಜಮೀನು ಹಸ್ತಾಂತರ.!
* ಜನಹಿತ ಕಾರ್ಯಕ್ಕೆ ಜಿಪಂ ಸಿಇಓ ರಾಹುಲ್‌ ಶಿಂಧೆ ಅವರಿಂದ‌ ಮೆಚ್ಚುಗೆ.! 

Vijayapura couple donates land to solve drinking water problem In village rbj

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಜೂನ್ 17) :
ಈಗಿನ ಕಾಲದಲ್ಲಿ 10 ರೂಪಾಯಿ ದಾನ ಮಾಡೋದಕ್ಕು ಹಿಂದೆ ಮುಂದೆ‌ ನೋಡುವವರು ಇದ್ದಾರೆ. ಇಂಥವರ ನಡುವೆ ಸದುದ್ದೇಶಗಳಿಗಾಗಿ ದೊಡ್ಡ ಮಟ್ಟದಲ್ಲಿ ದಾನಧರ್ಮ ಮಾಡುವ ಜನರು ಇನ್ನು ನಮ್ಮ ನಡುವಿದ್ದಾರೆ.

ಹೌದು....ಗ್ರಾಮದ‌ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ದಂಪತಿ ತಮ್ಮ ಜಮೀನು ದಾನ ಮಾಡಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಸಮಾಜಮುಖಿ ಆಲೋಚನೆಯಿಂದ ವಿಜಯಪುರ ತಾಲೂಕಿನ ಐನಾಪುರ ಗ್ರಾಮದ ಕುಟುಂಬವೊಂದು ಸರ್ಕಾರಕ್ಕೆ ದಾನ ರೂಪವಾಗಿ ನೀಡಿದ  ಜಮೀನೊಂದನ್ನು ಪಂಚಾಯತಿಗೆ ದಾನವಾಗಿ ನೀಡುವ ಕರಾರು ಒಪ್ಪಂದ ಪ್ರಕ್ರಿಯೆಯು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್‌ ಶಿಂಧೆ ಹಾಗೂ ಗ್ರಾಮದ ಹಿರಿಯರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಜೂನ್ 17ರಂದು ನಡೆಯಿತು.  

ಉದ್ಯೋಗ ಮಾಡುತ್ತಿದ್ರೂ ಕೃಷಿಯಲ್ಲಿ ಖುಷಿ ಕಂಡ ದಂಪತಿ, 200 ಅಧಿಕ ವಿದೇಶಿ ತಳಿ ಹಣ್ಣು ಬೆಳೆದ ಜೋಡಿ
 

3.20 ಎಕರೆ ಜಮೀನು ಸರ್ಕಾರಕ್ಕೆ ದಾನ ಮಾಡಿದ ಬಗಲಿ ದಂಪತಿ..!
ಕಳೆದ ಜೂನ್ 10ರಂದು, ವಿಜಯಪುರ ತಾಲೂಕಿನ ಐನಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಗೃಹ ಬಳಕೆಗೆ ಅವಶ್ಯವಿರುವ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಕೆರೆ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿತ್ತು. ಅದರಂತೆ 
ಎಲ್ಲಾ ಆಯಾಮಗಳಿಂದ ಅನುಕೂಲವಾಗುವಂತೆ ಗುರುತಿಸಿದ ನೀರು ತುಂಬಿಕೊಂಡಿರುವ ಸುಮಾರು 3.20 ಎಕರೆ ಜಮೀನು ಐನಾಪುರ ಗ್ರಾಮದ ಸೋಮನಾಥ ಶಿವಪ್ಪ ಬಗಲಿ ಎಂಬುವರಿಗೆ ಸೇರಿತ್ತು.  ಪ್ರಾರಂಭದಲ್ಲಿ ಮಾಲೀಕರು ಈ ಜಮೀನನ್ನು ಸರ್ಕಾರಕ್ಕೆ ಮಾರಾಟ ಮಾಡಲು ಒಪ್ಪಿದ್ದರು. ತದನಂತರ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಗ್ರಾಮದ ಹಿರಿಯರು ಮಾಲೀಕರ ಮನವೊಲಿಸಿದರು. ಕಲ್ಲು ಗಣಿಗಾರಿಕೆ ಮಾಡಿ ನೀರಿನಿಂದ ತುಂಬಿ ಕೆರೆಯಂತಾಗಿರುವ ಸುಮಾರು 3.20 ಎಕರೆ ಪ್ರದೇಶವನ್ನು ದಾನವಾಗಿ ನೀಡಿದ್ದಾರೆ..

ನೀರಿನ ಸಮಸ್ಯೆ ನೀಗಿಸಲು ದಂಪತಿಗಳ ದಾನ...!
ಐನಾಪೂರ ಗ್ರಾಮದ ಜನರಿಗೆ ನೀರಿನ ಸಮಸ್ಯೆ ಇತ್ತು. ನೀರಿನ ಸಮಸ್ಯೆಯನ್ನ ನಿಗಿಸೋದು ಸಮಾವಾಲಾಗಿತ್ತು.‌ ಇದೆ ಗ್ರಾಮದಲ್ಲಿದ್ದ ಬಗಲಿಯವರಿಗೆ ಸೇರಿದ ಜಾಗ ಕಲ್ಲುಗಣಿಗಾಕರಿಕೆಯಿಂದ ಕೆರೆಯಂತಾಗಿತ್ತು.‌ ಈ ಜಮೀನು ನೀಡಿದ್ರೆ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುವ ಬಗ್ಗೆ ತಿಳಿದ ಬಳಿಕ ದಂಪತಿಗಳು ನೀರಿನ ಸಮಸ್ಯೆ ಪರಿಹರಿಸಲು ಪಂಚಾಯತಿಗೆ ದಾನವಾಗಿ ನೀಡಲು ಒಪ್ಪಿಕೊಂಡಿದ್ದಾರೆ.

ಕೆರೆ ನಿರ್ಮಾಣದ ಸದುದ್ದೇಶ: ಈ ಕುರಿತು ಸಿಇಓ ರಾಹುಲ್ ಶಿಂಧೆ ಅವರು ಮಾತನಾಡಿ, ಶ್ರೀ ಸೋಮನಾಥ ಶಿವಪ್ಪ ಬಗಲಿ ಹಾಗೂ ಇವರ ಧರ್ಮ ಪತ್ನಿಯವರಾದ ಶ್ರೀಮತಿ ರೇಣುಕಾ ಸೋಮನಾಥ ಬಗಲಿ ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಸ್ಮರಣೀಯವಾಗಿದೆ.
ಐನಾಪೂರ ಗ್ರಾಮದ ಜನತೆಯ ಹಿತದೃಷ್ಟಿಯಿಂದ ಹಾಗೂ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಮತ್ತು ಕೆರೆ ನಿರ್ಮಾಣದ ಸದುದ್ದೇಶದಿಂದ ಈ ದಂಪತಿಯು ತಮ್ಮ ಸ್ವ-ಇಚ್ಛೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದಾನದ ರೂಪದಲ್ಲಿ ಜಮೀನು ನೀಡಿರುತ್ತಾರೆ. ಹಾಗೂ ಐನಾಪುರ ಗ್ರಾಮದ ಸರ್ವ ಜೀವಸಂಕುಲಕ್ಕೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರೇರಣೆಯಾಗಿದ್ದಾರೆ. ಇಂತಹ ದಾನಿಗಳು ನಮ್ಮ ಜಿಲ್ಲೆಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.

Latest Videos
Follow Us:
Download App:
  • android
  • ios