ಸಿಎಂ ಬೊಮ್ಮಾಯಿಗೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಗಡುವು ನೆನಪಿಸಿದ ಕಾಶಪ್ಪನವರ

ರಾಜ್ಯವ್ಯಾಪಿ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಾಕಷ್ಟು ಹೋರಾಟಗಳನ್ನ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಸಲಾಗಿದೆ. 

Vijayanand Khashappanavar Slams Cm Basavaraj Bommai Over Panchamasali Reservation gvd

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್​ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಆ.18): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸರ್ಕಾರ ಅಗಸ್ಟ 22 ರ ಗಡುವು ನೀಡಿದ್ದು, ಒಂದೊಮ್ಮೆ ಈ ಗಡುವಿನೊಳಗೆ ಮುಖ್ಯಮಂತ್ರಿಗಳು ಮೀಸಲಾತಿ ಘೋಷಣೆ ಮಾಡದೇ ಹೋದರೆ ಶಿಗ್ಗಾಂವನಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹೋರಾಟ ಆರಂಭಿಸಲಾಗುವುದೆಂದು ಪಂಚಮಸಾಲಿ ಸಮಾಜದ ಮುಖಂಡ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು. ಅವರು ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಈಗಾಗಲೇ ರಾಜ್ಯವ್ಯಾಪಿ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಾಕಷ್ಟು ಹೋರಾಟಗಳನ್ನ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಸಲಾಗಿದೆ. 

ಆದರೂ ಸರ್ಕಾರ ಪದೇ ಪದೇ ಮೀಸಲಾತಿ ನೀಡುವುದನ್ನು ಮುಂದೆ ಹಾಕುತ್ತಾ ಬಂದಿದ್ದು, ಇದೀಗ ಅಗಸ್ಟ 22ರ ಗಡುವು ನೀಡಲಾಗಿತ್ತು, ಇಷ್ಟರೊಳಗೆ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ, ಒಂದೊಮ್ಮೆ ಮುಖ್ಯಮಂತ್ರಿಗಳು ಮೀಸಲಾತಿ ನೀಡಿದರೆ ಅವರ ಮನೆಗೆ ಹೋಗಿ ಸನ್ಮಾನ ಮಾಡುತ್ತೇವೆ, ಇಲ್ಲವಾದರೆ ಮಾತಿಗೆ ತಪ್ಪಿದ್ದಲ್ಲಿ ಶಿಗ್ಗಾಂವನಲ್ಲಿರೋ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರ ಮನೆ ಎದುರು ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಹೋರಾಟ ಆರಂಭಿಸಲಾಗುವುದು ಎಂದರು. 

ಯುವಕರಿಗೆ ಪ್ರಧಾನಿ ಮೋದಿ ಅದ್ಯತೆ: ಸಚಿವ ಗೋವಿಂದ ಕಾರಜೋಳ

ನಿರಾಣಿ ಸಿಎಂ ಆಗಲು ಪಂಚಮಸಾಲಿ ಸಮುದಾಯ ಒಪ್ಪಲ್ಲ: ಇನ್ನು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹುಟ್ಟುಹಬ್ಬದ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ನಿರಾಣಿ ಎಂಬ ಬರಹವುಳ್ಳ ಪೋಸ್ಟರ್​ಗಳ ವಿಚಾರವಾಗಿ ಉತ್ತರಿಸಿದ ಮಾಜಿ ಶಾಸಕ, ಪಂಚಮಸಾಲಿ ಸಮುದಾಯದ ಮುಖಂಡ ವಿಜಯಾನಂದ ಕಾಶಪ್ಪನವರ, ಕೆಲವರು ಸ್ವತ: ಸಿಎಂ ಎಂದು ಹೇಳಿಸಿಕೊಳ್ಳಲು  ಪ್ರಯತ್ನಿಸುತ್ತಾರೆ ಅಂತವರೆಂದು ಸಿಎಂ ಆಗೋದಿಲ್ಲ ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ದ ಹರಿಹಾಯ್ದರು, ಪರೋಕ್ಷವಾಗಿ ಮುರುಗೇಶ ನಿರಾಣಿ ಸಿಎಂ ಆಗಲು ಪಂಚಮಸಾಲಿ ಸಮಾಜ ಒಪ್ಪಲ್ಲ, ಬದಲಾಗಿ ಸಮಾಜದ ಮೀಸಲಾತಿ ಹೋರಾಟ ಸೇರಿದಂತೆ ಸಮಾಜಕ್ಕಾಗಿ ದುಡಿದವರು, ಸಮಾಜದ ಜೊತೆಗೆ ನಿಂತವರು ಸಿಎಂ ಆಗಲಿ ಅವರಿಗೆ ಬೆಂಬಲಿಸುತ್ತದೆ, ಆದ್ರೆ ಸಮಾಜದ ಜೊತೆ ಇಲ್ಲದವರು, ಮೀಸಲಾತಿ ವಿರೋಧ ಮಾಡಿದವರು ಯಾರು ಅಂತ ಇಡೀ ಸಮುದಾಯಕ್ಕೆ ಗೊತ್ತಿದೆ, ಹೀಗಾಗಿ ಅಂತವರು ಮುಖ್ಯಮಂತ್ರಿ ಆಗೋದಕ್ಕೆ ನಾವು ಯಾರೂ ಸಹ ಒಪ್ಪೋದಿಲ್ಲ ಎನ್ನುವ ಮೂಲಕ ಸಚಿವ ನಿರಾಣಿ ವಿರುದ್ದ ವಾಗ್ಧಾಳಿ ನಡೆಸಿದರು. 
  
ಹೋರಾಟಕ್ಕೆ ಬರುವವರಿಗೆ ಸ್ವಾಗತ: ಹೋರಾಟಕ್ಕೆ 3ನೇ ಪೀಠದ ಸ್ವಾಮೀಜಿಗಳನ್ನ ಆಹ್ವಾನಿಸೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ನಮಗೆ ಬೇರೆ ಬೇರೆ ಪೀಠಗಳು ಗೊತ್ತಿಲ್ಲ, ಯಾವುದೋ ಪೀಠ ನಂಬಿ ಹೋರಾಟವನ್ನ ನಾವು ಆರಂಭಿಸಿಲ್ಲ, ನಮ್ಮದೊಂದೇ ಪೀಠ, ಒಂದೇ ಪೂಜ್ಯರು, ಅದುವೇ ಕೂಡಲಸಂಗಮದ ಪಂಚಮಸಾಲಿ ಪೀಠ ಮತ್ತು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳೊಬ್ಬರೇ ನಮ್ಮ ಪೂಜ್ಯರು. ನಮ್ಮ ಪೂಜ್ಯರ ನೇತೃತ್ವದಲ್ಲಿಯೇ ಹೋರಾಟ ಆರಂಭಿಸುತ್ತೇವೆ, ನಾವು ಇನ್ನೊಂದು ಪೀಠ, ಇನ್ನೊಬ್ಬ ಸ್ವಾಮೀಜಿಗಳ ಬಗ್ಗೆ ನಾವು ಮಾತನಾಡೋಕೆ ಹೋಗೋದಿಲ್ಲ, ಆದ್ರೆ ಹೋರಾಟಕ್ಕೆ ಯಾರೇ ಬಂದರೂ ಸಹ ನಾವು ಅವರನ್ನು ಸ್ವಾಗತಿಸುತ್ತೇವೆ. ಬಂದರೆ ನಮ್ಮ ಜೊತೆಗೆ, ಬರದೇ ಇದ್ದರೇ ಅವರು ನಮ್ಮವರಲ್ಲ ಎಂದು ಖಡಕ್​ ಹೇಳಿದರು. 

ಅನವಾಲ ಏತ ನೀರಾವರಿಗೆ ಸಚಿವ ಸಂಪುಟದ ಅನುಮೋದನೆ: ಸಚಿವ ಕಾರಜೋಳ

ಶಾಸಕ ದೊಡ್ಡನಗೌಡ ಪಾಟೀಲ ವಿರುದ್ದ ವಾಗ್ದಾಳಿ: ಜಿಲ್ಲೆಯ ಗುಡೂರು ಗ್ರಾಮದಲ್ಲಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ವೇದಿಕೆ ಬಳಿ ಕಲ್ಲೊಂದು ಎಸೆದಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಗರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ನೋಡಿ ಅದಕ್ಕೂ ನನಗೂ ಸಂಭಂದ ಇಲ್ಲದ ವಿಷಯ, ಜನರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅದು ಬಿಟ್ಟು ಯಾರೋ ಕಲ್ಲು ಎಸೆದರು ಅಂತ ನನ್ನ ಮೇಲೆ ಏಕೆ ನಿಮ್ಮ ಕಣ್ಣು. ಇವರೇ ತಮಗೆ ಅಧಿಕಾರ ಇದೆ ಅಂತ ದಬ್ಬಾಳಿಕೆ ಮಾಡ್ತಾರೆ, ಅನವಶ್ಯಕವಾಗಿ ಕೇಸ್​ ಹಾಕಿಸ್ತಾರೆ, ಇವರ ರೀತಿಯಲ್ಲಿ ನಾನು ಮಾಡಿಲ್ಲ, ಇವರ ನಡವಳಿಕೆಗೆ ಜನರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ, ಇದಕ್ಕೆ ನನ್ನನ್ನ ಯಾಕೆ ದೂರುತ್ತೀರಿ, ಆ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ, ಶಾಸಕರ ಆರೋಪ ಸತ್ಯಕ್ಕೆ ದೂರವಾದ ಸಂಗತಿ ಎಂದರು.

Latest Videos
Follow Us:
Download App:
  • android
  • ios