Asianet Suvarna News Asianet Suvarna News

ಬಿಸ್ಕತ್, ಡ್ರೈ ಫ್ರೂಟ್ಸ್, ಬಟ್ಟೆಯೊಂದಿಗೆ ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ಹೋದ ಪತ್ನಿ

ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ದೊರತೆ ಹಿನ್ನೆಲೆಯಲ್ಲಿ, ಸ್ಯಾಂಡಲ್‌ವುಡ್ ನಟ, ಕೊಲೆ ಆರೋಪಿ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಪತಿಯನ್ನು ಭೇಟಿಯಾಗಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. 

vijayalakshmi visited Ballari Jail For meet Actor Darshan grg
Author
First Published Aug 31, 2024, 4:56 PM IST | Last Updated Aug 31, 2024, 6:07 PM IST

ಬಳ್ಳಾರಿ(ಆ.31):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪತಿಯನ್ನು ಭೇಟಿಯಾಗಲು ತೆರಳಿದ್ದಾರೆ. ಕೈಯಲ್ಲಿ ನಾಲ್ಕು ಬ್ಯಾಗ್‌ಗಳಿದ್ದು ಡ್ರೈ ಫ್ರೂಟ್ಸ್, ಬಿಸ್ಕತ್, ಬಟ್ಟೆ ಹಾಗೂ ಇತರೆ ಅಗತ್ಯ ವಸ್ತುಗಳನ್ನು ತೆಗದೆುಕೊಂಡು ಹೋಗಿದ್ದಾರೆನ್ನಲಾಗಿದೆ. ಬೆಂಗಳೂರು ಪರಪ್ಪನ ಆಗ್ರಹಾರದಲ್ಲಿದ್ದ ದರ್ಶನ್ ಆ್ಯಂಡ್ ಗ್ಯಾಂಗಿಗೆ ರಾಜಾತಿಥ್ಯ ದೊರತೆ ಹಿನ್ನೆಲೆಯಲ್ಲಿ ಬಳ್ಳಾರಿ ಜೈಳಿಗೆ ವರ್ಗಾಯಿಸಲಾಗಿದ್ದು, ಇದೀಗ ಒಂಟಿಯಾಗಿ ಕಾಲ ಕಳೆಯೋದು ನಟನಿಗೆ ಅನಿವಾರ್ಯವಾಗಿದೆ. 

ಇದೀಗ ವಕೀಲರ ಜೊತೆ ವಿಜಯಲಕ್ಷ್ಮಿ ಜೈಲಿಗೆ ಹೋಗಿದ್ದು, ಬೇರೆ ಜೈಲಿಗೆ ಶಿಫ್ಟ್ ಮಾಡಲು ಅನುಮತಿ ಕೋರಬಹುದು ಎಂದು ಹೇಳಲಾಗಿದೆ. ಕೇವಲ 30 ನಿಮಿಷಗಳ ಕಾಲ ಪತ್ನಿಯೊಂದಿಗೆ ಮಾತುಕತೆ ನಡೆಸಿದ್ದೆಂದು ಹೇಳಲಾಗಿದೆ.  ಸಂದರ್ಶಕರ ಕೊಠಡಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಪತ್ನಿಯನ್ನು ನೋಡಿ ದರ್ಶನ್ ಭಾವುಕರಾದರೆನ್ನಲಾಗಿದೆ. ಸ್ವತಃ ದರ್ಶನ್ ಪತ್ನಿಗೆ ಧೈರ್ಯ ತುಂಬಿದ್ದಾರೆಂದು ಹೇಳಲಾಗುತ್ತಿದೆ. ವಕೀಲರ ಜೊತೆ ಕೆಲಕಾಲ ಮಾತನಾಡಿದ ನಟ, ಬಳಿಕ ಹೈವೊಲ್ಟೇಜ್ ಕೊಠಡಿಗೆ ತೆರಳಿದರು.

ಜೈಲಲ್ಲಿ ದೌಲತ್ತು ಮಾಡಿ ದಿಕ್ಕಾಪಾಲಾದ ಡಿ ಗ್ಯಾಂಗ್​​..! ದರ್ಶನ್ ವಿರುದ್ಧ ದಾಖಲಾಯ್ತು ಮತ್ತೆರಡು FIR..!

ಬಳ್ಳಾರಿ ಜೈಲಲ್ಲಿ ಒಂಟಿಯಾದ ನಟ:
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್‌ ಆದ ಮೇಲೆ ನಟ ದರ್ಶನ್ ಒಬ್ಬಂಟಿಯಾದಂತಾಗಿದ್ದು, ತುಸು ಮಂಕಾಗಿದ್ದಾರೆಂದು ಹೇಳಲಾಗುತ್ತಿದೆ. ಊಟ, ಉಪಹಾರವನ್ನೂ ಮಾಡದೇ ಮೌನವಾಗಿಯೇ ಕಾಲ ಕಳೆಯುತ್ತಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿದವೆ. ಜೈಲು ಸಿಬ್ಬಂದಿ ಜೊತೆಯೂ ಮಾತನಾಡದೆ ಮೌನಕ್ಕೆ ಜಾರಿರುವ ಅವರು, ಸಮಯ ಕಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ.

ಬಳ್ಳಾರಿ ಜೈಲು ಸೇರಿದ ಬಳಿಕ ಮೊದಲ ದಿನವಾದ ಗುರುವಾರ ರಾತ್ರಿ ಅವರು ಸರಿಯಾಗಿ ಊಟ ಮಾಡಿರಲಿಲ್ಲ. 2ನೇ ದಿನವಾದ ಶುಕ್ರವಾರ ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ಮಧ್ಯಾಹ್ನ ರಾಗಿಮುದ್ದೆ, ಚಪಾತಿ ಮತ್ತು ಅನ್ನ ಸಾಂಬಾರು ಸೇವಿಸಿದ್ದಾರೆ. ಬಳ್ಳಾರಿಯಲ್ಲಿ ತಾಪಮಾನ ಹೆಚ್ಚಿದ್ದು, ಇದರಿಂದಲೂ ಸಂಕಟ ಅನುಭವಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಜತೆಗೆ ಕಾರಾಗೃಹದ ಸೊಳ್ಳೆಯೂ  ನಿದ್ರೆಗೆಡಿಸಿವೆ, ಎನ್ನಲಾಗುತ್ತಿದೆ. 

ಕಾಟೇರನಿಗೆ ಕಾನೂನಿನ ಕೋಳ ತೊಡಿಸಿದ್ದೇ ಸಿದ್ದರಾಮಯ್ಯನ ಖಡಕ್ ನಿರ್ಧಾರ!

ಬಳ್ಳಾರಿಯ ವಾತಾವರಣ ಹೊಂದಾಣಿಕೆ ಸೇರಿ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಜೈಲು ಬದಲಾವಣೆಗೆ ದರ್ಶನ್ ಕುಟುಂಬಸ್ಥರು ಭೇಟಿಯಾದ ಬಳಿಕ ನಿರ್ಧಾರ ತೆಗದೆುಕೊಳ್ಳಲಾಗುವುದು ಎಂದು ಹೇಳಲಾಗಿತ್ತು. ಇದಕ್ಕಾಗಿ ಆಗ್ರಿಹಿಸ ಮತ್ತೆ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಜೊತೆ ತೆರಳಿದ ವಕೀಲರ ಜೊತೆ ದರ್ಶನ್ ಚರ್ಚಿಸಿರಬಹುದು. ಬಳ್ಳಾರಿಯಲ್ಲಿ ಸಾಕಷ್ಟು ದಿನ ಇರಬೇಕಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಇಲ್ಲೇ ಮನೆಯೊಂದನ್ನು ಬಾಡಿಗೆ ಹಿಡಿಯಲು ನಿರ್ಧರಿಸಿದ್ದಾರೆನ್ನಲಾಗಿದೆ. ದರ್ಶನ್ ಜತೆ ಈ ಕುರಿತು ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಹೇಳಲಾಗಿತ್ತು. ಬ್ಯಾರಕ್‌ನಲ್ಲಿ ಸರಿಯಾಗಿ ಓಡಾಡಲೂ ಜಾಗವಿಲ್ಲದ ಕಾರಣ, ಅಲ್ಲಿಯೋ ಹೊರಗೆ ತುಸು ಓಡಾಡಲು ಪೊಲೀಸ್ ಅಧಿಕಾರಿಗಳು ದರ್ಶನ್‌ಗೆ ಅವಕಾಶ ಕಲ್ಪಿಸಿದ್ದರಂತೆ. 

ದರ್ಶನ್‌ಗಾಗಿ ತಂದಿದ್ದ ಬ್ಲಾಂಕೇಟ್ ವಾಪಸ್

ಮನೆಯಿಂದ ದರ್ಶನ್‌ಗಾಗಿ ಪತ್ನಿ ವಿಜಯಲಕ್ಷ್ಮಿ ತಂದಿದ್ದ ಬ್ಲಾಂಕೇಟ್‌ಅನ್ನು ವಾಪಸ್‌ ಕಳುಹಿಸಲಾಗಿದೆ. ಜೈಲಿನಲ್ಲಿ ನೀಡಿದ ಚಾದರ್ ಸರಿಯಿರಲ್ಲವೆಂದು ಮನೆಯಿಂದ ಬ್ಲಾಂಕೇಟ್‌ ತರಲಾಗಿತ್ತು. ವಿಜಯಲಕ್ಷ್ಮಿ ಆರಂಭದಲ್ಲಿ ಬಂದಾಗ ಸೆಕ್ಯೂರಿಟಿ ಸೆಲ್‌ನಿಂದ ತಪಾಸಣೆ ಮಾಡಿಸಿ ಒಳಗೆ ತೆಗೆದುಕೊಂಡು ಹೋಗಿದ್ರು. ಆದ್ರೆ, ಜೈಲಿನ ಸಿಬ್ಬಂದಿ ಅನುಮತಿ ನೀಡದ ಹಿನ್ನಲೆಯಲ್ಲಿ ವಿಜಯಲಕ್ಷ್ಮಿ ಬ್ಲಾಂಕೇಟ್ ವಾಪಸ್ ತೆಗೆದುಕೊಂಡು ಹೋಗಿದ್ದಾರೆ

Latest Videos
Follow Us:
Download App:
  • android
  • ios