ಸನಾತನ ಧರ್ಮಕ್ಕೆ ಅತಿಕ್ರಮಣ ತಡೆಯುವ ಶಕ್ತಿ ಇದೆ: ವಿಧುಶೇಖರ ಭಾರತಿ ಸ್ವಾಮೀಜಿ
ಜನ ಸನ್ಮಾರ್ಗದಲ್ಲಿ ನಡೆಯಬೇಕು. ಆದ್ದರಿಂದ ಧರ್ಮವನ್ನು ಎತ್ತಿ ಹಿಡಿಯಬೇಕೆಂದ ಅವರು, ಇಡೀ ಭಾರತದ್ಯಾಂತ ಸುತ್ತಾಡಿದ ಶಂಕರಚಾರ್ಯರು ಸನಾತನ ಧರ್ಮ ರಕ್ಷಣೆಗಾಗಿ ಕೆಲಸ ಮಾಡಿ ಅನೇಕ ಮಠಗಳನ್ನು ಸ್ಥಾಪಿಸಿ ಜನರಲ್ಲಿ ಧರ್ಮ ಜಾಗೃತಿ ಮೂಡಿಸಿದರು: ಶೃಂಗೇರಿಯ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ
ಶಿಡ್ಲಘಟ್ಟ(ಅ.26): ಸನಾತನ ಧರ್ಮದ ಮೇಲೆ ಎಷ್ಟೇ ಅತಿಕ್ರಮಣ ಆದರೂ ತಡೆದುಕೊಳ್ಳುವ ಶಕ್ತಿ ಇದೆ. ಆದರೆ ಜಗತ್ತಿನಲ್ಲಿ ಸನಾತನ ಧರ್ಮದ ಮೇಲೆ ಆದ ಅತಿಕ್ರಮಣಗಳು ಬೇರೆಯ ಧರ್ಮಗಳ ಮೇಲೆ ಆಗಿದ್ದರೆ ಇಷ್ಟೊತ್ತಿಗೆ ಆ ಧರ್ಮಗಳು ಕಣ್ಮರೆ ಆಗುತ್ತಿದ್ದವು ಎಂದು ಶೃಂಗೇರಿಯ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದಲ್ಲಿ ಶುಕ್ರವಾರ ಶ್ರೀ ಶೃಂಗೇರಿ ಶಂಕರಮಠ ಅಭಿವೃದ್ಧಿ ಮತ್ತು ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಆದಿಶಂಕರ ಸಭಾಭವನ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿ, ಧರ್ಮ, ಶಾಸ್ತ್ರಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಆದರೆ ಅವುಗಳ ಪಾಲನೆಯಲ್ಲಿ ಜನರ ಲೋಪ ಇದೆ ಎಂದರು.
ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಮಾಸ್ಟರ್ ಪ್ಲಾನ್: ಪ್ರದೀಪ್ ಈಶ್ವರ್
ಜನ ಸನ್ಮಾರ್ಗದಲ್ಲಿ ನಡೆಯಬೇಕು. ಆದ್ದರಿಂದ ಧರ್ಮವನ್ನು ಎತ್ತಿ ಹಿಡಿಯಬೇಕೆಂದ ಅವರು, ಇಡೀ ಭಾರತದ್ಯಾಂತ ಸುತ್ತಾಡಿದ ಶಂಕರಚಾರ್ಯರು ಸನಾತನ ಧರ್ಮ ರಕ್ಷಣೆಗಾಗಿ ಕೆಲಸ ಮಾಡಿ ಅನೇಕ ಮಠಗಳನ್ನು ಸ್ಥಾಪಿಸಿ ಜನರಲ್ಲಿ ಧರ್ಮ ಜಾಗೃತಿ ಮೂಡಿಸಿದರೆಂದರು.
ಈ ಸಂದರ್ಭದಲ್ಲಿ ಕೋಟೆ ವೃತ್ತದಿಂದ ಆದಿಶಂಕರ ಸಭಾಭವನದವರೆಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳನ್ನು ಭವ್ಯ ಶೋಭಾಯಾತ್ರೆ ಮೂಲಕ ಸ್ವಾಗತಿಸಲಾಯಿತು ಈವೇಳೆಕಾರ್ಯಕ್ರಮದಸ್ವಾಗತಸಮಿತಿ ಅಧ್ಯಕ್ಷರಾದ ಬಿ.ಸಿ.ಸೀತಾರಾಮ್ ರಾವ್, ಕಾರ್ಯದರ್ಶಿ ಎನ್. ಶ್ರೀಕಾಂತ್, ಶ್ರೀ ಶೃಂಗೇರಿ ಶಂಕರ ಮಠ ಅಭಿವೃದ್ಧಿ ಮತ್ತು ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ವಿ.ಕೃಷ್ಣ, ಉಪಾಧ್ಯಕ್ಷರಾದ ಬಿ.ಕೃಷ್ಣಮೂರ್ತಿ ಸೇರಿದಂತೆ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತಿತರರು ಇದ್ದರು.