"ಅಸಾಮಾನ್ಯ ಕನ್ನಡಿಗ" ಪ್ರಶಸ್ತಿ: ತೆರೆಮರೆ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ, ರವಿ ಹೆಗಡೆ
ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಹಲವು ವಿಚಾರಗಳಲ್ಲಿ ಟ್ರೆಂಡ್ ಸೆಟ್ಟರ್ ಆಗಿದೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಿದೆ. ಆದರೆ, ಪ್ರಶಸ್ತಿ ನೀಡುವುದು ನೆಪ ಮಾತ್ರ. ಆದರೆ, ತೆರೆಮರೆಯಲ್ಲಿರುವ, ಸಣ್ಣ ನಗರ, ಹಳ್ಳಿಗಳಲ್ಲಿ ಬೆಳೆದು ಇತರರಿಗೆ ಮಾದರಿಯಾಗಿರುವ ಸಾಧಕರನ್ನು ಹುಡುಕಿ ತಂದು ಸಮಾಜದ ಎದುರು ಕರೆತರುವುದು ಪ್ರಶಸ್ತಿಯ ಮುಖ್ಯ ಉದ್ದೇಶ: ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ

ಬೆಂಗಳೂರು(ಅ.14): ಯಾವುದೇ ಮಾಧ್ಯಮ ಸುದ್ದಿ ಬಿತ್ತರಿಸುವ ಜತೆಗೆ ಸಮಾಜದ ಹಿತಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಿ, ಸಮಾಜಕ್ಕೆ ಮಾದರಿಯಾಗಿರುವವರನ್ನು ಪರಿಚಯಿಸುವುದು ಕೂಡ ಮಾಧ್ಯಮಗಳ ಕರ್ತವ್ಯ. ಹೀಗಾಗಿಯೇ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ತೆರೆಮರೆಯ ಸಾಧಕರನ್ನು ಗುರುತಿಸಿ "ಅಸಾಮಾನ್ಯ ಕನ್ನಡಿಗ" ಪ್ರಶಸ್ತಿ ನೀಡಿ ಗೌರವಿಸಿ ಅವರ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದು ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದರು.
ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಹಲವು ವಿಚಾರಗಳಲ್ಲಿ ಟ್ರೆಂಡ್ ಸೆಟ್ಟರ್ ಆಗಿದೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಿದೆ. ಆದರೆ, ಪ್ರಶಸ್ತಿ ನೀಡುವುದು ನೆಪ ಮಾತ್ರ. ಆದರೆ, ತೆರೆಮರೆಯಲ್ಲಿರುವ, ಸಣ್ಣ ನಗರ, ಹಳ್ಳಿಗಳಲ್ಲಿ ಬೆಳೆದು ಇತರರಿಗೆ ಮಾದರಿಯಾಗಿರುವ ಸಾಧಕರನ್ನು ಹುಡುಕಿ ತಂದು ಸಮಾಜದ ಎದುರು ಕರೆತರುವುದು ಪ್ರಶಸ್ತಿಯ ಮುಖ್ಯ ಉದ್ದೇಶ. ಇಲ್ಲಿ ಯಾವುದೇ ಶಿಫಾರಸಿನಿಂದ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುವುದಿಲ್ಲ. ತಳಮಟ್ಟದಲ್ಲಿ ಪರೀಕ್ಷಿಸಿದ ನಂತರವೇ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ನಟ ಅನಂತನಾಗ್‌ಗೆ ಪ್ರಶಸ್ತಿ ನೀಡಿದ್ದು ನನ್ನ ಸೌಭಾಗ್ಯ: ಸಿಎಂ ಸಿದ್ದರಾಮಯ್ಯ
ಕೊರೊನಾ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ನೀಡಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಅದನ್ನು ಮುಂದುವರಿಸಿಕೊಂಡು, ಇತರರಿಗೆ ಮಾದರಿಯಾಗುವ ಕೆಲಸ ಮಾಡುತ್ತಿದ್ದೇವೆ. ಸಾಧನೆ ಮಾಡಿ ಈವರೆಗೆ ಪ್ರೋತ್ಸಾಹ ಸಿಗದ 8 ಮಂದಿ ತೆರೆಮರೆಯ ಸಾಧಕರನ್ನು ಅಸಮಾನ್ಯ ಕನ್ನಡಿಗರನ್ನಾಗಿ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿದೆ. ಅದರ ಜತೆಗೆ ರಾಷ್ಟ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ 8 ಮಂದಿ ಅಸಾಮಾನ್ಯ ಸಾಧಕರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ವಿವರಿಸಿದರು.
ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ಚಲನಚಿತ್ರ ನಟಿ ರೂಪಾ ಅಯ್ಯರ್, ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರು ಪ್ರಶಸ್ತಿ ಪುರಸ್ಕೃತರು ಆಯ್ಕೆ ಸಮಿತಿಯಲ್ಲಿದ್ದರು. ಪ್ರಶಸ್ತಿಗಾಗಿ ನೂರಾರು ಮಂದಿಯಿಂದ ಶಿಫಾರಸುಗಳು ಬಂದಿದ್ದವು. ಅದರಲ್ಲಿ 25 ಮಂದಿ ಸಾಧಕರನ್ನು ಅಂತಿಮಗೊಳಿಸಿ ಆಯ್ಕೆ ಸಮಿತಿಗೆ ನೀಡಲಾಗಿತ್ತು. ಸಮಿತಿ ಸದಸ್ಯರು ಸಾಕಷ್ಟು ಶ್ರಮವಹಿಸಿ 8 ಮಂದಿ ಸಾಧಕರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.