Asianet Suvarna News Asianet Suvarna News

ನಟ ಅನಂತನಾಗ್‌ಗೆ ಪ್ರಶಸ್ತಿ ನೀಡಿದ್ದು ನನ್ನ ಸೌಭಾಗ್ಯ: ಸಿಎಂ ಸಿದ್ದರಾಮಯ್ಯ

ಕನ್ನಡ ಚಲನಚಿತ್ರ ರಂಗದ ಮೇರು ನಟರಲ್ಲಿ ಅನಂತನಾಗ್‌ ಕೂಡ ಒಬ್ಬರು. ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ ನಾನೂ ಮತ್ತು ಅವರು ಸಚಿವರಾಗಿ ಒಟ್ಟಿಗೆ ಕೆಲಸ ಮಾಡಿದ್ದೆವು. ಅವರಿಗೆ "ಅಸಾಮಾನ್ಯ ಕನ್ನಡಿಗ" ಪ್ರಶಸ್ತಿ ಪ್ರದಾನ ಮಾಡಲಾಗಿದೆ. 
 

It was My Privilege to Award Ananth Nag Says CM Siddaramaiah gvd
Author
First Published Oct 14, 2023, 4:00 AM IST

ಬೆಂಗಳೂರು (ಅ.14): ಕನ್ನಡ ಚಲನಚಿತ್ರ ರಂಗದ ಮೇರು ನಟರಲ್ಲಿ ಅನಂತನಾಗ್‌ ಕೂಡ ಒಬ್ಬರು. ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ ನಾನೂ ಮತ್ತು ಅವರು ಸಚಿವರಾಗಿ ಒಟ್ಟಿಗೆ ಕೆಲಸ ಮಾಡಿದ್ದೆವು. ಅವರಿಗೆ "ಅಸಾಮಾನ್ಯ ಕನ್ನಡಿಗ" ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅವರು ಸ್ವೀಕರಿಸಿದ ಮೂರು ಪ್ರಮುಖ ಪ್ರಶಸ್ತಿಗಳನ್ನು ನಾನೇ ಪ್ರದಾನ ಮಾಡಿದ್ದೇನೆ. ಅದಕ್ಕೆ ಅವರು ನನ್ನಿಂದ ಪ್ರಶಸ್ತಿ ಪಡೆದಿರುವುದು ಅದೃಷ್ಟ ಎಂದು ಹೇಳಿದ್ದಾರೆ. ಆದರೆ, ಅಂತಹ ಮೇರು ನಟನಿಗೆ ಪ್ರಶಸ್ತಿ ನೀಡಿದ್ದು, ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರತಿಯೊಬ್ಬರಿಗೂ ಅವಕಾಶ ದೊರೆಯುತ್ತದೆ. ಆದರೆ, ಅದನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜಮುಖಿ ಕೆಲಸ ಮಾಡುವ ಮೂಲಕ ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಆಯೋಜಿಸಿದ್ದ ನಾಲ್ಕನೇ "ಅಸಮಾನ್ಯ ಕನ್ನಡಿಗ" ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ 7 ಕೋಟಿ ಜನರಿದ್ದಾರೆ. ಅವರಲ್ಲಿ ಬಹುತೇಕರು ತಮ್ಮ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿರುತ್ತಾರೆ. ಅಂತಹವರಲ್ಲಿ 8 ಮಂದಿ ಅಸಾಮಾನ್ಯ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿರುವ ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಾಧನೆ ನಿಜಕ್ಕೂ ಶ್ಲಾಘನೀಯ. ಅವರ ಸಾಧನೆ ಸಮಾಜಕ್ಕೆ ತಿಳಿಸಿ, ಇತರರನ್ನೂ ಪ್ರೇರೇಪಿಸುವ ಕೆಲಸ ಮಾಡುತ್ತಿರುವುದು ಮಾದರಿ ಕಾರ್ಯ ಎಂದರು.

ನಾನೂ ಸಿಎಂ ಸ್ಥಾನದ ಆಕಾಂಕ್ಷಿ: ಸಚಿವ ಶರಣಬಸಪ್ಪ ದರ್ಶನಾಪುರ ಹೊಸ ಬಾಂಬ್‌

ಸಮಾಜದಲ್ಲಿ ಪ್ರತಿಯೊಬ್ಬರೂ ಜೀವನ ಸಾರ್ಥಕವಾಗಿಸಿಕೊಳ್ಳುವಂತೆ ಬದುಕಬೇಕು. ಅದರಿಂದ ಆತ್ಮತೃಪ್ತಿ ದೊರೆಯುತ್ತದೆ. ಅಲ್ಲದೆ, ಸಾಧಕರಿಗೆ ಗೌರವಿಸುವುದನ್ನು ನೋಡಿದಾಗ, ನಾವೂ ಅವರಂತಾಗಲು ಪ್ರಯತ್ನಿಸಬೇಕು. ಎಲ್ಲರಿಗೂ ಜೀವನದಲ್ಲಿ ಅವಕಾಶಗಳು ದೊರೆಯುತ್ತವೆ. ಅವನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜಮುಖಿ ಕೆಲಸ ಮಾಡಬೇಕು. ಆಗ ಜೀವನ ಸಾರ್ಥಕವಾಗುತ್ತದೆ. ಪ್ರಯತ್ನ, ಶ್ರದ್ಧೆ ಇದ್ದರೆ ಸಾಧನೆ ಮಾಡುವುದು ಕಷ್ಟವಲ್ಲ ಎಂದು ಅಭಿಪ್ರಾಯಪಟ್ಟರು.

ಹಿಂದೂಗಳ ಹತ್ಯೆ ಕಂಡು ಹೊಟ್ಟೆ ಉರಿಯುತ್ತಿದೆ: ಕೆ.ಎಸ್‌.ಈಶ್ವರಪ್ಪ

ಸಾರ್ಥಕ ಕಾರ್ಯಕ್ರಮ: ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಂಸ್ಥೆಗಳು ಕಳೆದ ಮೂರು ವರ್ಷಗಳಿಂದ ಅಸಮಾನ್ಯ ಕನ್ನಡಿಗ ಪ್ರಶಸ್ತಿ ನೀಡುತ್ತಿದೆ. ಇದು ನಾಲ್ಕನೇ ಆವೃತ್ತಿಯಾಗಿದ್ದು, ಯಾರೂ ಗುರುತಿಸದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ರಾಜ್ಯದಲ್ಲಿ ಇನ್ನೂ ಅಸಮಾನ್ಯ ಸಾಧನೆ ಮಾಡಿದವರಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನೂ ಗುರುತಿಸಿ, ಗೌರವಿಸುವ ಕೆಲಸವಾಗಬೇಕು. ಸಾಧಕರಿಗೆ ಸನ್ಮಾನಿಸುವಂತಹ ಕಾರ್ಯಕ್ರಮಕ್ಕೆ ಬಂದಿದ್ದು ನನ್ನಲ್ಲಿ ಸಾರ್ಥಕ ಭಾವನೆ ಮೂಡುವಂತಾಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.

Follow Us:
Download App:
  • android
  • ios