Asianet Suvarna News Asianet Suvarna News

ಕೊರೋನಾ ಕಾಟಕ್ಕೆ ತರಕಾರಿ ಬೆಲೆ ದಿವಾಳಿ: ಕಂಗಾಲಾದ ರೈತ

ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದ ಬೇಡಿಕೆ ಕುಸಿತ | ಎಪಿಎಂಸಿಗೆ ಬಾರದ ತರಕಾರಿ ಖರೀದಿ ವ್ಯಾಪಾರಿಗಳು| 

Vegetable Prices fall in Belagavi APMC
Author
Bengaluru, First Published Mar 15, 2020, 10:30 AM IST

ಬೆಳಗಾವಿ(ಮಾ.15): ಮಹಾಮಾರಿ ಕೊರೋನಾ ವೈರಸ್ ತೀವ್ರತೆ ಹೆಚ್ಚಾಗುತ್ತಿದ್ದಂತೆ ಷೇರು ಮಾರುಕಟ್ಟೆ ಅಷ್ಟೇ ಅಲ್ಲ, ಚಿಲ್ಲರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದಾಗಿ ತರಕಾರಿ ಬೆಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತವಾಗಿ ರೈತರು ಕಂಗಾಲಾಗಿದ್ದಾರೆ. 

ನೆರೆಯ ಗೋವಾ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತ ಸೇರಿದಂತೆ ಇತರ ರಾಜ್ಯಗಳಿಗೆ ಉತ್ತಮ ಗುಣಮಟ್ಟದ ತರಕಾರಿಗೆ ಕೇಂದ್ರವಾಗಿರುವ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊರೋನಾ ಹಾವಳಿ ಪರಿಣಾಮ ಎಲ್ಲ ತರಕಾರಿ ದರ ಪಾತಾಳ ಕಂಡಿವೆ. ಇದರಿಂದಾಗಿ ಸಾವಿರಾರು ರುಪಾಯಿ ಸಾಲ ಮಾಡಿ ತರಕಾರಿ ಬೆಳೆದ ರೈತರಿಗೆ ಒಂದು ಕಡೆ ಕೊರೋನಾ ಬಿಸಿ ತಟ್ಟಿದ್ದರೆ, ಇನ್ನೊಂದೆಡೆ ಸಾಲ ಮರುಪಾವತಿಸುವ ಚಿಂತೆ ಮನೆ ಮಾಡಿದೆ. 

ನನ್ನನ್ನು ಅಸಹ್ಯಭಾವದಿಂದ ನೋಡುತ್ತಿದ್ದರು: ಕೊರೋನಾ ಶಂಕಿತನ ಬೇಸರದ ನುಡಿ

ಬೆಳಗಾವಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಗೋವಾ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಪೂರೈಕೆ ಆಗುತ್ತದೆ. ಆದರೆ ಇದೀಗ ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೈ ಅಲರ್ಟ್ ಇರುವುದರಿಂದ ಯಾವುದೇ ವ್ಯಾಪಾರಿಗಳು ತರಕಾರಿ ಖರೀದಿಸಲು ಆಗಮಿಸಿಲ್ಲ. ಅಲ್ಲದೇ ಗೋವಾ ಹಾಗೂ ಮಹಾರಾ ಷ್ಟ್ರದ ಸಾಂಗ್ಲಿ ಪ್ರದೇಶದ ವ್ಯಾಪಾರಿಗಳು ಮಾತ್ರ ವ್ಯಾಪಾರು ವಹಿವಾಟಿನಲ್ಲಿ ತೊಡಗಿದ್ದರಿಂದ ಅಲ್ಪ ಪ್ರಮಾಣದಲ್ಲಿ ತರಕಾರಿ ಮಾರಾಟವಾಗಿದೆ. ಗುಜರಾತ, ಮಧ್ಯಪ್ರದೇಶ ರಾಜ್ಯದ ವ್ಯಾಪಾರಿಗಳು ಮಾರುಕಟ್ಟೆಯತ್ತ ಸುಳಿಯಲಿಲ್ಲ. ಇದರಿಂದಾಗಿ ಹೆಚ್ಚಿನ ಪ್ರಮಾ ಣದಲ್ಲಿ ಮಾರುಕಟ್ಟೆಗೆ ಬಂದಿದ್ದ ತರಕಾರಿಗೆ ಬೆಲೆ ನಿಗದಿಯಾಗದ ಹಿನ್ನೆಲೆಯಲ್ಲಿ ರೈತರು ಅಕ್ಷರಶಃ ಕಂಗೆಟ್ಟು ಹೋಗಿದ್ದಾರೆ. ದರ ಕುಸಿತದಿಂದಾಗಿ ರೈತರು ತರಕಾರಿಯೊಂದಿಗೆ ಮಾರುಕಟ್ಟೆಗೆ ಬಾರದೆ, ವಾಹನ ಚಾಲಕ ಹಾಗೂ ಮಾಲೀಕರಿಗೆ ಜವಾಬ್ದಾರಿ ನೀಡಿ, ಮಾರಾಟವಾಗಿ ಬಂದಂತ ಹಣವನ್ನು ತೆಗೆದು ಕೊಂಡು ಬರುವಂತೆ ತಿಳಿಸುತ್ತಿದ್ದಾರೆ.

ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಲು ಅಮಿತಾಭ್ ಬಚ್ಚನ್ ಕವಿತೆ!

ಕೊರೋನಾ ವೈರಸ್ ನಿಂದಾಗಿ ನೆರೆಯ ರಾಜ್ಯದ ವ್ಯಾಪಾರಿಗಳು ಮಾರುಕಟ್ಟೆಗೆ ಆಗಮಿಸದ ಹಿನ್ನೆಲೆಯಲ್ಲಿ ತರಕಾರಿ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಇನ್ನು ಕೆಲವು ತರಕಾರಿಗೆ ಕೂಲಿ ಅಥವಾ ಸಾಗಾಟದ ವೆಚ್ಚ ಭರಿಸುವಷ್ಟು ಹಣ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತರಕಾರಿ ವ್ಯಾಪಾರಸ್ಥ ಸಂಜಯ ಸನ್ನಿ ಹೇಳಿದ್ದಾರೆ. 

ಮಾರುಕಟ್ಟೆಯಲ್ಲಿ ಪ್ರಸ್ತುತ ತರಕಾರಿ ದರ 

ಹೂಕೋಸು ಡಜನ್‌ಗೆ 40 ರಿಂದ 60, ಬದನೆಕಾಯಿ ಕೆಜಿಗೆ 6 ರಿಂದ 10, ಮೆಣಸಿನಕಾಯಿ 10-12 (ಕೆಜಿ) ಕರಿಮೆಣಸಿನಕಾಯಿ 25 (ಕೆಜಿ) ಬೀನ್ಸ್ 10-15 (ಕೆಜಿ) ಎಲೆಕೋಸು(ಚೀಲಕ್ಕೆ) 60ರಿಂದ 100 ಬಟಾಣೆ 40 (ಕೆಜಿ) ಹಾಗಲಕಾಯಿ(30ಕೆಜಿ) ₹ 80 ರಿಂದ  100 ನುಗ್ಗೆಕಾಯಿ 10 ಕೆಜಿ 30 ರಿಂದ 50 ಡಬ್ಬು ಮೆಣಸಿನಕಾಯಿ ಕೆಜಿಗೆ 12 ರಿಂದ 15 ಟೊಮೆಟೊ 30 ಕೆಜಿ 6-70 
 

Follow Us:
Download App:
  • android
  • ios