ನನ್ನನ್ನು ಅಸಹ್ಯಭಾವದಿಂದ ನೋಡುತ್ತಿದ್ದರು: ಕೊರೋನಾ ಶಂಕಿತನ ಬೇಸರದ ನುಡಿ

ನನ್ನನ್ನು ಅಸಹ್ಯಭಾವದಿಂದ ನೋಡುತ್ತಿದ್ದರು: ಕೊರೋನಾ ಶಂಕಿತನ ಬೇಸರದ ನುಡಿ| ಅಜರುದ್ದೀನ್‌ ನೋವನ್ನು ‘ಕನ್ನಡಪ್ರಭ’ದ ಮುಂದೆಬಿಚ್ಚಿಟ್ಟಸಂಬಂಧಿ ಅಶ್ರಫ್‌

People Were Looking At Me With A Disgusting Way Says Corona Suspect Of Mangaluru

ಬಂಟ್ವಾಳ[ಮಾ.15]: ದೂರದಲ್ಲಿ ಊಟ ಇಡುತ್ತಿದ್ದರು. ನಾ ಒಲ್ಲದ ಮನಸ್ಸಿನಲ್ಲೇ ತೆಗೆದುಕೊಳ್ಳುತ್ತಿದ್ದೆ. ಅಲ್ಲಿ ನಾ ಒಬ್ಬಂಟಿಯಾಗಿದ್ದೆ. ನನ್ನನ್ನು ಅಸಹ್ಯಭಾವದಿಂದ ನೋಡುತ್ತಿದ್ದರು. ಯಾರಿಗೂ ಈ ಸ್ಥಿತಿ ಬಾರದಿರಲಿ!

ಇದು ಕರಾವಳಿಯಲ್ಲಿ ಕೊರೋನಾ ಶಂಕಿತ ಪ್ರಕರಣ ಎಂದು ಆಸ್ಪತ್ರೆ ಸೇರಿ, ನೆಗೆಟಿವ್‌ ವರದಿ ಜತೆಗೆ ಮನೆಯಲ್ಲೇ ದಿಗ್ಭಂಧನಕ್ಕೆ ಒಳಗಾಗಿರುವ ಅಜರುದ್ದೀನ್‌ ಹೇಳುವ ನೋವಿನ ನುಡಿ. ಅಜರುದ್ದೀನ್‌ ಅವರ ನೋವಿನ ನುಡಿಯನ್ನು ‘ಕನ್ನಡಪ್ರಭ’ ಮುಂದಿಟ್ಟವರು ಸಂಬಂಧಿ ಆಶ್ರಫ್‌.

'ತಂಗಿ ಶವದೊಂದಿಗೆ 2 ದಿನದಿಂದ ಮನೆಯಲ್ಲಿದ್ದೇನೆ, ಏನು ಮಾಡ್ಬೇಕಂತ ತಿಳೀತಿಲ್ಲ!'

ತಿಂಗಳ ಹಿಂದಷ್ಟೇ ದುಬೈಗೆ ತೆರಳಿದ್ದವರು, ವಾಪಸ್‌ ಬಂದಾಗ ವಿಮಾನ ನಿಲ್ದಾಣ ಸಿಬ್ಬಂದಿ, ವೈರಸ್‌ನ ಲಕ್ಷಣ ಇದೆ ಎಂದು ಅವರನ್ನು ಆ್ಯಂಬುಲೆನ್ಸ್‌ ಮೂಲಕ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅವರಲ್ಲಿದ್ದ ಲಗೇಜ್‌ ಸಹಿತ ಎಲ್ಲ ದಾಖಲೆಗಳನ್ನೂ ಅವರೇ ಕೊಂಡೊಯ್ದಿದ್ದರು. ಅಲ್ಲಿ ವಿವಿಧ ಪರೀಕ್ಷೆಗೆ ಒಳಪಡಿಸಿದ ಬಳಿಕ ಅಲ್ಲಿನ ವೈದ್ಯರೇ ನೀವಿನ್ನು ಹೊರಡಿ ಎಂದು ಕಳುಹಿಸಿಕೊಟ್ಟಿದ್ದಾರೆ. ಅದರಂತೆ ಅವರು ವಿಟ್ಲದ ಅತ್ತೆ ಮನೆಗೆ ಬಂದಿದ್ದಾರೆ ಎಂದವರು ವಿವರಿಸಿದರು.

ಆದರೆ ಬೆಳಗ್ಗೆಯಾಗುತ್ತಲೇ ಅವರನ್ನು ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಲಾಯ್ತು. ಅವರ ಮನೆಗೆ ಬಂದ ಪೊಲೀಸರು, ಆರೋಗ್ಯ ಇಲಾಖೆಯ ಅಧಿಕಾರಿಗಳು ನನ್ನ ಮನೆಯವರ ಜೊತೆ ಮಾತನಾಡಿದ ರೀತಿ, ನಡೆದುಕೊಂಡ ರೀತಿ ನಿಜಕ್ಕೂ ಭಯಾನಕವಾಗಿತ್ತು. ಬಳಿಕ ಬಂಟ್ವಾಳ ಆಸ್ಪತ್ರೆಗೆ ಅವರನ್ನು ಕರೆದುಕೊಂಡುಹೋದರು. ಅಲ್ಲಿನ ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಿಸಿದರು. ಅಲ್ಲಿ ಅವರು ಕಳೆದಿರುವ ಎರಡು ದಿನಗಳ ಬಗ್ಗೆ ಹೇಳುವಾಗ ನಮಗೇ ಬೇಸರವಾಗುತ್ತಿದೆ ಎನ್ನುತ್ತಾರೆ ಅಶ್ರಫ್‌.

ಆಸ್ಪತ್ರೆಯಲ್ಲಿ ಹೊತ್ತು ಹೊತ್ತಿಗೆ ಊಟ ತರುತ್ತಿದ್ದರು. ಆದರೆ ದೂರದಲ್ಲಿ ಇಡುತ್ತಿದ್ದರಂತೆ. ಅಲ್ಲಿ ಎಲ್ಲರೂ ಇದ್ದು ಅವರಿಗೆ ಒಬ್ಬಂಟಿಯಾಗಿದ್ದ ಅನುಭವವಾಗಿತ್ತಂತೆ ಎನ್ನುವ ಅವರ ಧ್ವನಿಯಲ್ಲಿ ನೋವಿದೆ ಎಂದು ಅಶ್ರಫ್‌ ವಿವರಿಸುತ್ತಾರೆ.

ಗುರುವಾರ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾಜ್‌ರ್‍ ಮಾಡಲಾಗಿದೆ. ಸಂಜೆ 7.30ರ ಹೊತ್ತಿಗೆ ಆಸ್ಪತ್ರೆ ವಾಹನದಲ್ಲೇ ಮನೆಗೆ ತಲುಪಿಸಿದ್ದಾರೆ. 15 ದಿನ ಮನೆಯಿಂದ ಹೊರಗೆ ಹೋಗಬಾರದು, ಹೋದರೆ ಮತ್ತೆ ಆಸ್ಪತ್ರೆಗೆ ದಾಖಲಿಸುವುದಾಗಿ ದಿಗ್ಭಂಧನ ವಿಧಿಸಿದ್ದಾರೆ. ಯಾರಿಗೂ ಕೊರೊನಾ ವೈರಸ್‌ ಬಾಧಿಸದಿರಲಿ ಎನ್ನುವುದು ಅಶ್ರಫ್‌ ಅವರ ಒತ್ತಾಸೆ.

Latest Videos
Follow Us:
Download App:
  • android
  • ios