Asianet Suvarna News Asianet Suvarna News

ಬೆಳ್ತಂಗಡಿ: 120 ಕೆರೆ ಹೂಳೆತ್ತಲು ವೀರೇಂದ್ರ ಹೆಗ್ಗಡೆ ಯೋಜನೆ

*  ಧರ್ಮೋತ್ಥಾನ ಟ್ರಸ್ಟ್‌ ಆಶ್ರಯದಲ್ಲಿ 12 ದೇಗುಲಗಳ ಜೀರ್ಣೋದ್ಧಾರ 
*  ಧಾರವಾಡದಲ್ಲಿ ಎಸ್‌ಡಿಎಂ ವೈದ್ಯಕೀಯ ವಿವಿಯಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ ಆರಂಭ
*  ಧರ್ಮಕ್ಕೆ ಹೊಸ ಸ್ವರೂಪ, ವ್ಯಾಖ್ಯಾನ ನೀಡಿದ ಡಾ. ಹೆಗ್ಗಡೆ 

Veerendra Heggade Project for Dredging of 120 Lakes grg
Author
Bengaluru, First Published Oct 25, 2021, 2:50 PM IST

ಬೆಳ್ತಂಗಡಿ(ಅ.25):  ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ 54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಭಾನುವಾರ ಸರಳವಾಗಿ ನೆರವೇರಿತು. ಈ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಈ ವರ್ಷ ಇನ್ನೂ 120 ಕೆರೆಗಳ ಹೂಳೆತ್ತುವ(Dredging), ಧರ್ಮೋತ್ಥಾನ ಟ್ರಸ್ಟ್‌ ಆಶ್ರಯದಲ್ಲಿ 12 ದೇಗುಲಗಳ ಜೀರ್ಣೋದ್ಧಾರ ಸೇರಿ ಡಾ.ಹೆಗ್ಗಡೆ ಅವರ ಹಲವು ನೂತನ ಯೋಚನೆ-ಯೋಜನೆಗಳನ್ನು ಘೋಷಿಸಲಾಯಿತು. 

ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನೆರವಿಗಾಗಿ ಶೌರ್ಯ ಆಪತ್ತು ತಂಡ ರಚನೆ, ಧರ್ಮಸ್ಥಳದಲ್ಲಿ((Dharmasthala) ಅನ್ನಪೂರ್ಣ ಭೋಜನಾಲಯ ವಿಸ್ತರಣೆ. ಊಟ ಮಾಡಲು ಮೇಜು ಕುರ್ಚಿಯ ಅನುಕೂಲತೆ, ಸಕಲ ಸೌಲಭ್ಯ ಹೊಂದಿರುವ ಸರದಿಸಾಲಿನ ಸುಗಮ ವ್ಯವಸ್ಥೆ. ಭಕ್ತರಿಗೆ(Devotees) ಕುಳಿತುಕೊಳ್ಳುವ ವ್ಯವಸ್ಥೆ, ಶೌಚಾಲಯದ(Toilet)ನಿರ್ಮಾಣ ಡಾ.ಹೆಗ್ಗಡೆ ಅವರ ಇತರೆ ನೂತನ ಯೋಚನೆ, ಯೋಜನೆಗಳಾಗಿವೆ.

ಫೆಬ್ರವರಿಯಿಂದ ಧಾರವಾಡದಲ್ಲಿ(Dharwad) ಎಸ್‌ಡಿಎಂ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ(SDM Medical University) ಕ್ಯಾನ್ಸರ್‌ ಚಿಕಿತ್ಸಾ ಘಟಕ(Cancer Treatment Unit) ಆರಂಭ, 6 ಕೋಟಿ ರು. ವೆಚ್ಚದಲ್ಲಿ 4 ಆಸ್ಪತ್ರೆಗಳಿಗೆ(Hospital) ಸಿ.ಟಿ. ಸ್ಕ್ಯಾ‌ನ್‌(C.T. Scan) ಕೊಡುಗೆ, ಮಂಗಳೂರಿನಲ್ಲಿ ವೆನ್ಲಾಕ್‌ ಆಸ್ಪತ್ರೆಯಲ್ಲಿ 2, ಉಜಿರೆಯಲ್ಲಿರುವ ಎಸ್‌ಡಿಎಂ ಆಸ್ಪತ್ರೆಯಲ್ಲಿ(SDM Hospital) 11 ಡಯಾಲಿಸಿಸ್‌(Dialysis) ಘಟಕ ಶೀಘ್ರ ಆರಂಭ, 3 ತಿಂಗಳಲ್ಲಿ ಬೆಂಗಳೂರಿನಲ್ಲಿ(Bengaluru) 300 ಹಾಸಿಗೆ ಸಾಮರ್ಥ್ಯದ ಪ್ರಕೃತಿ ಚಿಕಿತ್ಸಾ ಕೇಂದ್ರ ಪ್ರಾರಂಭ, ವಾತ್ಸಲ್ಯ ಯೋಜನೆಯಡಿ ಅನಾಥ ವೃದ್ಧರಿಗೆ ನೆರವು ನೀಡುವುದಾಗಿ ಪ್ರಕಟಿಸಲಾಯಿತು.

ಧರ್ಮಸ್ಥಳ ಕ್ಷೇತ್ರದಿಂದ ಶ್ರೀರಾಮ ಮಂದಿರಕ್ಕೆ 25 ಲಕ್ಷ ನಿಧಿ: ವೀರೇಂದ್ರ ಹೆಗ್ಗಡೆ

ಮನೆ ನಿರ್ಮಾಣ

ಈ ವೇಳೆ ಶುಭಾಶಂಸನೆಗೈದು ಮಾತನಾಡಿದ ಕರ್ನಾಟಕ(Karnataka) ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್‌, ಮಾನವನ ಸೇವೆಯೇ ಭಗವಂತನ ಸೇವೆ ಎಂಬುದನ್ನು ಅಕ್ಷರಶಃ ನಿರೂಪಿಸಿರುವ ಡಾ. ವಿರೇಂದ್ರ ಹೆಗ್ಗಡೆ ಭಾರತ ರತ್ನಕ್ಕೆ(Bharat Ratna) ಅರ್ಹರು ಎಂದರು.

ಧರ್ಮಕ್ಕೆ(Religion) ಹೊಸ ಸ್ವರೂಪ, ವ್ಯಾಖ್ಯಾನವನ್ನು ಡಾ. ಹೆಗ್ಗಡೆ ನೀಡಿದ್ದಾರೆ. ಪಟ್ಟಾಧಿಕಾರವನ್ನು ಅಧಿಕಾರ ಎಂದು ಭಾವಿಸದೆ ಸೇವಾದೀಕ್ಷೆಯಾಗಿ ಸ್ವೀಕರಿಸಿ ಕ್ಷೇತ್ರವನ್ನು ವಿಸ್ತಾರವಾಗಿ ವೈಶಾಲ್ಯದಿಂದ ನಡೆಸಿಕೊಂಡು ಬಂದಿದ್ದಾರೆ. ಅನ್ನ, ಆಶ್ರಯ, ಅಭಯ, ಆರೋಗ್ಯಗಳಿಗೆ(Health) ಸಂಬಂಧಿಸಿದಂತೆ 60ಕ್ಕೂ ಹೆಚ್ಚು ಸಂಸ್ಥೆ ಮುನ್ನಡೆಸುತ್ತಿರುವುದು ಅಧ್ಯಯನಕ್ಕೆ ಅರ್ಹವಾದುದು ಎಂದು ಅಭಿಪ್ರಾಯಪಟ್ಟರು.

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ(Veerendra Heggade) ಮಾತನಾಡಿ, ತೃಪ್ತ ಜೀವನ ಅತ್ಯಂತ ಮುಖ್ಯವಾದದ್ದು. ಇನ್ನೊಬ್ಬರನ್ನು ಸಂತೋಷ ಪಡಿಸುವ ಸಂದರ್ಭವನ್ನು ನಾನು ಸ್ವಾಗತಿಸುತ್ತೇನೆ. ಜನಹಿತದಲ್ಲಿನ ಸಂತೋಷ ಬೇರೆ ಎಲ್ಲೂ ಇಲ್ಲ ಎಂಬುದನ್ನು ನಾನು ನಂಬಿಕೊಂಡು ಬಂದಿದ್ದೇನೆ. ಬತ್ತದ ಉತ್ಸಾಹ ಎಲ್ಲರಲ್ಲೂ ಸದಾ ಇರಬೇಕು. ಕ್ಷೇತ್ರದಲ್ಲಿ ಆದ ಇದುವರೆಗಿನ ಎಲ್ಲಾ ಸಾಧನೆಗಳು ನಮ್ಮ ಹಿರಿಯರ ಆಶೀರ್ವಾದ ಫಲವೇ ಆಗಿದೆ. ಅವರು ಹಾಕಿಕೊಟ್ಟ ಪರಂಪರೆ ಮುಂದುವರಿಸಿಕೊಂಡು ಬಂದಿದ್ದೇನೆ ಎಂದರು.
 

Follow Us:
Download App:
  • android
  • ios