Asianet Suvarna News Asianet Suvarna News

ವಾಟಾಳ್‌ ನಾಗರಾಜ್‌ ದಿಢೀರ್ ನಾಮಪತ್ರ ಸಲ್ಲಿಕೆ

ಚುನಾವಣಾ ಕ್ಷೇತ್ರದಲ್ಲಿ ವಾಟಾಳ್ ನಾಗರಾಜ್ ದಿಢೀರ್ ಪ್ರತ್ಯಕ್ಷವಾಗಿದ್ದಾರೆ. ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ

Vatala Nagaraj Files Nomination For Teacher Constituency Election snr
Author
Bengaluru, First Published Oct 9, 2020, 7:52 AM IST
  • Facebook
  • Twitter
  • Whatsapp

 ಕಲಬುರಗಿ (ಅ.09): ಇದೇ ತಿಂಗಳು 28ರಂದು ನಡೆಯುವ ವಿಧಾನ ಪರಿಷತ್‌ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ವಾಟಾಳ್‌ ನಾಗರಾಜ ಏಕಾಏಕಿ ಪ್ರತ್ಯಕ್ಷರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ  8ರ ಗುರುವಾರ ಕಲಬುರಗಿಗೆ ಆಗಮಿಸಿ ವಾಟಾಳ್‌ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚುನಾವಣಾಧಿಕಾರಿ ಎನ್‌.ವಿ. ಪ್ರಸಾದ ಅವರಿಗೆ ವಾಟಾಳ ನಾಗರಾಜ್‌ ಕನ್ನಡ ಚಳುವಳಿ ವಾಟಾಳ್‌ ಪಕ್ಷದಿಂದ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಇತ್ತ ಬೈ ಎಲೆಕ್ಷನ್‌ನಲ್ಲಿ ಗೆಲುವು ನಮ್ಮದೇ ಅಂತ ಸಿಟಿ ರವಿ ಹೇಳ್ತಿದ್ರೆ, ಅತ್ತ ಮುನಿರತ್ನಗೆ ಟೆನ್ಷನ್.!

ಪ್ರಾಣ ವಿದ್ಯೆಗಿಂತ ಮುಖ್ಯ:

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್‌ ಸದ್ಯಕ್ಕೆ ಶಾಲಾ ಕಾಲೇಜು ಆರಂಭ ಬೇಡ ಬೇಡ ಎಂದ ಅವರು, ಕೋವಿಡ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಕ್ಕಳಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ವಿದ್ಯೆ ಬೇಕು, ಆದ್ರೆ ಪ್ರಾಣ ಅದಕ್ಕಿಂತ ಮುಖ್ಯ. ಪ್ರಾಣ ಇದ್ದರೆ ವಿದ್ಯೆ. ಪ್ರಾಣವೇ ಇಲ್ಲಂದ್ರೆ ವಿದ್ಯೆ ಎಲ್ಲಿಂದ ಎಂದು ಖಾರವಾಗಿ ಪ್ರಶ್ನಿಸಿದರು. ಸಚಿವ ಸುರೇಶ್‌ ಕುಮಾರ ಮಕ್ಕಳ ಪ್ರಾಣದ ಜೊತೆ ಆಟ ಆಡಬಾರದು. ಸಚಿವರು ಗಂಭೀರವಾಗಿ ಚಿಂತಿಸಿ ಶಾಲಾ ಕಾಲೇಜು ಮುಂದೂಡಬೇಕು. ಯಾವುದೇ ಕಾರಣಕ್ಕೂ ಸದ್ಯಕ್ಕೆ ತೆಗೆಯಬಾರದು ಎಂದರು.

Follow Us:
Download App:
  • android
  • ios