ಒಡೆಯರ್ ಎಕ್ಸ್‌ಪ್ರೆಸ್ ಟ್ರೇನ್: ಮಹಾನ್ ವ್ಯಕ್ತಿ ಟಿಪ್ಪು ಹೆಸರು ತೆಗೆದು ಮತ್ತೊಂದು ಹೆಸರಿಡುವುದು ಸರಿಯಲ್ಲ, ವಾಟಾಳ್
ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಮುಂದುವರಿಸಲು ಆಗ್ರಹ , ಟಿಪುತ್ರ್ಪ ಹೆಸರನ್ನು ತೆಗೆದು ಇನ್ನೊಂದು ಹೆಸರಿಡುವುದು ಅಗೌರವ ಬೇರೊಂದಿಲ್ಲ: ವಾಟಾಳ್
ಚಾಮರಾಜನಗರ(ಅ.08): ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಮುಂದುವರಿಸಬೇಕು. ಒಬ್ಬ ಮಹಾನ್ ವ್ಯಕ್ತಿಯಾದಂತಹ ಟಿಪ್ಪು ಹೆಸರು ತೆಗೆದು ಮತ್ತೊಂದು ಹೆಸರಿಡುವುದು ಸರಿಯಲ್ಲ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಡೆಯರ ಹೆಸರಿಡಬೇಕು ಎಂದರೆ ಬೇರೆಯವಕ್ಕೆ ಇಟ್ಟುಕೊಳ್ಳಿ ಯಾರು ಬೇಡ ಅಂತಾರೆ. ಟಿಪ್ಪು ಹೆಸರನ್ನು ತೆಗೆದು ಇನ್ನೊಂದು ಹೆಸರಿಡುವುದು ಅಗೌರವ ಬೇರೊಂದಿಲ್ಲ. ರೈಲ್ವೆ ಇಲಾಖೆ ಇದರ ಬಗ್ಗೆ ಯೋಚಿಸಬೇಕು. ಟಿಪ್ಪು ಸುಲ್ತಾನ್ ದೇಶಕ್ಕೆ ಮಾಡಿರುವ ಕೆಲಸವನ್ನು ಯಾರು ಮಾಡಲಿಕ್ಕೆ ಸಾಧ್ಯವಿಲ್ಲ. ನಂಜನಗೂಡು ದೇವಸ್ಥಾನದಲ್ಲಿ ಟಿಪ್ಪು ಕೊಟ್ಟಿರುವ ಪಂಚಲಿಂಗವನ್ನು ಏಕೆ ಇಟ್ಟಿದ್ದೀರಿ ನೀವು? ಟಿಪ್ಪು ಕೊಟ್ಟಿರುವುದನ್ನು ನಂಜುಂಡೇಶ್ವರ ಸನ್ನಿಧಿಯಲ್ಲಿಟ್ಟಿರಬೇಕಾದರೆ ಇನ್ನೇನು ಬೇಕು. ಇದರ ಬಗ್ಗೆ ವಿರೋಧಪಕ್ಷಗಳು ಬೀದಿಗಿಳಿದು ಹೋರಾಟ ಮಾಡಿ, ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಉಳಿಸುವಂತೆ ಹೋರಾಟ ಮಾಡಬೇಕು. ನಾನೂ ಸಹ ಟಿಪುತ್ರ್ಪ ಎಕ್ಸ್ ಪ್ರೆಸ್ ಹೆಸರು ಮುಂದುವರಿಸುವಂತೆ ಒತ್ತಾಯ ಮಾಡುತ್ತೇನೆ ಎಂದರು.
ಟಿಪ್ಪು ಎಕ್ಸ್‌ಪ್ರೆಸ್ ಇನ್ಮುಂದೆ ಒಡೆಯರ್ ಎಕ್ಸ್‌ಪ್ರೆಸ್ ರೈಲು, ಹೆಸರು ಬದಲಿಸಿ ಕೇಂದ್ರದ ಆದೇಶ!
ಗಣಿಗಾರಿಕೆ ತನಿಖೆಗೆ ಆಗ್ರಹ:
ಜಿಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಕುರಿತು ಸರ್ಕಾರ ಉನ್ನತ ಮಟ್ಟದ ತನಖೆ ನಡೆಸಬೇಕು. ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಆಗಿದೆ. ಜಿಲ್ಲೆ ಅಭಿವೃದ್ದಿ ಬಗ್ಗೆ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಯಾರು ಕೂಡ ಚಾಮರಾಜನಗರ ಅಭಿವೃದ್ದಿ ಬಗ್ಗೆ ಗಮನಕೊಡುತ್ತಿಲ್ಲ, ಗಂಭೀರವಾದ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ನೋಡಿದರೆ ಬಹಳ ನೋವಾಗುತ್ತದೆ. ಇದೊಂದು ಲೂಟಿ, ದರೋಡೆಯಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ವಾಟಾಳ್‌ನಾಗರಾಜ್ ಒತ್ತಾಯಿಸಿದರು.
ಚಾಮರಾಜನಗರ ಸುತ್ತಮುತ್ತ ಕ್ವಾರೆಗಳನ್ನು ತೆಗೆದಿದ್ದಾರೆ. ಸುಮಾರು 100ರಿಂದ 300 ಅಡಿ ಅಳ ತೆಗೆದಿದ್ದಾರೆ. ಕ್ವಾರೆ ಪಕ್ಕದಲ್ಲಿ ಎತ್ತರವಾದ ಗುಡ್ಡೆ ನಿರ್ಮಾಣ ಮಾಡಿದ್ದಾರೆ. ಇದನ್ನು ಯಾರು ಕೇಳುವವರಿಲ್ಲ. ಮುನ್ನೆಚ್ಚರಿಕೆ ಇಲ್ಲವೇ ಇಲ್ಲ. ಭೂ ವಿಜ್ಞಾನ ಇಲಾಖೆ ಸತ್ತು ಹೋಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗಮನ ಕೊಡಬೇಕಿದೆ. ಒಂದು ಕಡೆ ಕ್ವಾರೆಗಳು, ಜಲ್ಲಿಕಲ್ಲು ಕ್ರಸರ್ ನಿಂದ ಬೆಳೆ, ರಸ್ತೆಗಳು ಹಾಳಾಗಿದೆ. ಕೆರೆಗಳು ಮಲೀನವಾಗುತ್ತದೆ. ಪ್ರಾಣಿ ಸಂಕುಲ ದಿಕ್ಕೆಟ್ಟು ಗ್ರಾಮಗಳತ್ತ ಬರುತ್ತಿದೆ. ಇದರಿಂದ ಜನತೆಗೆ ತೊಂದರೆಯಾಗಿದೆ. ಜಿಲ್ಲೆ ದಿವಾಳಿಯಾಗಿದೆ. ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಅಜಯ್, ಹುಂಡಿ ಬಸವಣ್ಣ, ಶಿವಲಿಂಗಮೂರ್ತಿ, ಗೋಪಾಲಯ್ಯ, ಕುಮಾರ್, ಬಿ.ವಿ.ರೇವಣ್ಣಸ್ವಾಮಿ, ಚೆನ್ನನಂಜಪ್ಪ, ನಾಗರಾಜು, ಪಾರ್ಥಸಾರಥಿ ಇತರರು ಹಾಜರಿದ್ದರು.