ಮೈಸೂರು (ಜೂ.06):  ಮೈಸೂರಿನಲ್ಲಿ ನಡೆದಿರುವ ಭೂ ಹಗರಣದ ತನಿಖೆ ನಡೆಸುವಂತೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಶನಿವಾರ ಪ್ರತಿಭಟಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್‌, ಮೈಸೂರಿನಲ್ಲಿ ಕಳೆದ 25 ವರ್ಷದಿಂದ ಸಾಕಷ್ಟುಭೂ ಹಗರಣ ನಡೆದಿದೆ. ಇದರ ಸಮಗ್ರ ತನಿಖೆಯನ್ನು ಜಿಲ್ಲಾಧಿಕಾರಿ ಮಾಡಬೇಕು. 25 ವರ್ಷದ ಕಡತಗಳನ್ನು ಪರಿಶೀಲಿಸಬೇಕು. ಇದರ ಸಮಗ್ರ ತನಿಖೆಯಾಗುವವರೆಗೂ ನಾನು ಹೋರಾಟ ಮಾಡುತ್ತೇನೆ ಎಂದು ಆಗ್ರಹಿಸಿದರು.

ಡಿಸಿ ವರ್ಗ ಬೇಡ:  ಮೈಸೂರಿನ ಇಬ್ಬರು ಐಎಎಸ್‌ ಅಧಿಕಾರಿಗಳ ಜಟಾಪಟಿ ಸಂಬಂಧ ಡಿಸಿ ರೋಹಿಣಿ ಸಿಂಧೂರಿ ಅವರನ್ನು ಸಮರ್ಥಿಸಿಕೊಂಡ ವಾಟಾಳ್‌, ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿ. ಅವರನ್ನು ವರ್ಗಾವಣೆ ಮಾಡಬಾರದು. ಅವರ ವರ್ಗಾವಣೆ ದೊಡ್ಡ ಪಿತೂರಿಯಾಗುತ್ತಿದೆ. ನನಗೂ ಯಡಿಯೂರಪ್ಪರಿಗೂ ಆಗಲ್ಲ, ಆದರು ಅವರಿಗೆ ನಾನು ಹೇಳುತ್ತೇನೆ ಅವರನ್ನ ವರ್ಗಾವಣೆ ಮಾಡಬಾರದು ಎಂದರು. ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿಯಾಗಿದ್ದಾರೆ. ಯಾರು ಪಿತೂರಿ ಮಾಡುತ್ತಿದ್ದಾರೆ ಎಂಬುದನ್ನು ನಾನು ಹೇಳುವುದಿಲ್ಲ. ಕೆಲವರ ಬಂಡವಾಳ ಬಯಲಾಗುತ್ತದೆ ಎಂದು ಪಿತೂರಿ ನಡೆದಿದೆ ಎಂದು ವಾಟಾಳ್‌ ನಾಗರಾಜ್‌ ತಿಳಿಸಿದರು.

ರೋಹಿಣಿ, ಶಿಲ್ಪಾನಾಗ್‌ ಇಬ್ಬರೂ ಎತ್ತಂಗಡಿ! ...

ಇನ್ನು ದ್ವಿತೀಯ ಪಿಯುಸಿ ಪರೀಕ್ಷೆ ಯಾವ ರೀತಿ ರದ್ದು ಮಾಡಿದ್ದಾರೆ. ಅಂತೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಪಡಿಸಿ ಎಲ್ಲರನ್ನೂ ಪಾಸ್‌ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಚಳವಳಿಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಇದ್ದರು.