'ಆನೆ ನಡೆದದ್ದೇ ದಾರಿ ಎಂಬಂತೆ ವರ್ತನೆ, ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ'
*ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆ
* ರೋಹಿಣಿ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ
* ರೋಹಿಣಿ ಅವರು ಭೂಮಿಯ ಮೇಲೆ ಹುಟ್ಟಿಲ್ಲ, ಆಕಾಶದಿಂದಲೇ ಇಳಿದು ಬಂದಿದ್ದಾರೆ
ಮಳವಳ್ಳಿ(ಜೂ.06): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅವರು ಆನೆ ನಡೆದದ್ದೇ ದಾರಿ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ, ಅವರ ವಿರುದ್ಧ ಕಾಗದಪತ್ರ, ಲೆಕ್ಕಪತ್ರ ಸಮಿತಿಯಿಂದ ಹಕ್ಕುಚ್ಯುತಿ ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.
ರೋಹಿಣಿ ಅವರು ಭೂಮಿಯ ಮೇಲೆ ಹುಟ್ಟಿಲ್ಲ, ಆಕಾಶದಿಂದಲೇ ಇಳಿದು ಬಂದಿದ್ದಾರೆ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಆನೆ ನಡೆದದ್ದೇ ದಾರಿ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಶಾಸಕ ಡಾ.ಕೆ.ಅನ್ನದಾನಿ ಕಿಡಿ ಕಾರಿದ್ದಾರೆ.
ರೋಹಿಣಿ, ಶಿಲ್ಪಾನಾಗ್ ಇಬ್ಬರೂ ಎತ್ತಂಗಡಿ!
ರೋಹಿಣಿ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಜನಪ್ರತಿನಿಧಿಗಳಿಗೆ ಗೌರವ ಕೊಡಬೇಕು. ಅವರು ಆಕಾಶದಿಂದ ಇಳಿದು ಬಂದಿಲ್ಲ. ಸಾ.ರಾ.ಮಹೇಶ ಅಧ್ಯಕ್ಷರಾಗಿರುವ ಕಾಗದಪತ್ರ, ಲೆಕ್ಕಪತ್ರ ಸಮಿತಿಯಲ್ಲಿ ತಾನೂ ಸದಸ್ಯನಾಗಿದ್ದು, ನಮಗೆ ಗೌರವವನ್ನೇ ನೀಡುತ್ತಿರಲಿಲ್ಲ. ಹೀಗಾಗಿ ಅವರ ವಿರುದ್ಧ ಸಮಿತಿಯಿಂದ ಹಕ್ಕುಚ್ಯುತಿ ಮಂಡಿಸಿದ್ದು, ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ.