ವಾಲ್ಮೀಕಿ ಗುರುಪೀಠದ ಶ್ರೀಗಳನ್ನು 3 ಗಂಟೆ ಕೂಡಿಹಾಕಿದ ಭಕ್ತರು: ತಬ್ಬಿಬ್ಬಾದ ಪ್ರಸನ್ನಾನಂದ ಸ್ವಾಮೀಜಿ
ವಾಲ್ಮೀಕಿ ಜಾತ್ರೆಗೆ ದೇಣಿಗೆ ಸಂಗ್ರಹಿಸಲು ವಿಜಯಪುರದ ಕಣ್ಣೂರಿಗೆ ತೆರಳಿದ್ದ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನು ಭಕ್ತರು 3 ಗಂಟೆ ಮನೆಯಲ್ಲಿ ಕೂಡಿ ಹಾಕಿದ ಘಟನೆ ನಡೆದಿದೆ.
ವಿಜಯಪುರ (ನ.27): ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ಆಚರಣೆಗೆ ದೇಣಿಗೆ ಸಂಗ್ರಹಕ್ಕೆ ತೆರಳಿದ್ದ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನು ಭಕ್ತರೇ ಮನೆಯಲ್ಲಿ 3 ಗಂಟೆಗಳ ಕೂಡಿ ಹಾಕಿದ ಪ್ರಸಂಗ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಯಾವುದೇ ಮಠಗಳ ಸ್ವಾಮೀಜಿಗಳಾದರೂ ಸರಿ, ಅವರು ಭಕ್ತರು ಆಹ್ವಾನಿಸಿದೆಡೆ ಹೋಗಿ ಧಾರ್ಮಿಕ ಪ್ರವಚನ ಹಾಗೂ ಆಶೀರ್ವಚನ ನೀಡುವುದು ಸಾಮಾನ್ಯವಾಗಿರುತ್ತದೆ. ಇನ್ನು ಮಠದ ಅಭಿವೃದ್ಧಿಗೆ ಭಕ್ತರ ಬಳಿಯೇ ದೇಣಿಗೆ ಸಂಗ್ರಹ ಮಾಡುವುದೂ ಪಾರಂಪರಿಕವಾಗಿ ನಡೆಯುತ್ತಾ ಬಂದಿದೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಮಧ್ಯಭಾಗ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಿಶಾಲವಾದ ಪ್ರದೇಶದಲ್ಲಿ ವಾಲ್ಮೀಕಿ ಗುರುಪೀಠವನ್ನು ಸ್ಥಾಪನೆ ಮಾಡಲಾಗಿದ್ದು, ಅದಕ್ಕೆ ಪೀಠಾಧ್ಯಕ್ಷರನ್ನೂ ನೇಮಕ ಮಾಡಲಾಗಿದೆ. ಇಲ್ಲಿ ಕೆಲ ವರ್ಷಗಳಿಂದ ವಾಲ್ಮೀಕಿ ಜಾತ್ರೆಯನ್ನು ಮಾಡಲಾಗುತ್ತಿದ್ದು, ಇಡೀ ವಾಲ್ಮೀಕಿ ಸಮುದಾಯದ ಪ್ರತೀಕವೆಂಬಂತೆ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ಜಾತ್ರೆಗೂ ಮುನ್ನ ಗುರುಪೀಠದ ಸ್ವಾಮೀಜಿ ರಾಜ್ಯಾದ್ಯಂತ ಸುತ್ತಾಡಿ ಭಕ್ತರಿಂದ ಹಾಗೂ ವಾಲ್ಮೀಕಿ ಸಮುದಾಯದ ಕೆಲವು ಸಂಘಟನೆಗಳಿಂದ ದೇಣಿಗೆ ಸಂಗ್ರಹಿಸಿ ಜಾತ್ರೆಗೆ ಖರ್ಚು ಮಾಡುತ್ತಾರೆ. ಹೀಗೆ, ದೇಣಿಗೆ ಸಂಗ್ರಹಕ್ಕಾಗಿ ತೆರಳಿದ್ದ ಸ್ವಾಮೀಜಿಯನ್ನು 3 ಗಂಟೆಗಳ ದಿಗ್ಬಂಧನ ಮಾಡಿರುವ ಘಟನೆ ನಡೆದಿದೆ.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಎಲ್. ನಾರಾಯಣಸ್ವಾಮಿ ನೇಮಕ
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕೊಣ್ಣೂರ ಗ್ರಾಮದ ಭಕ್ತರ ಮನೆಯೊಂದರಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನು ದಿಗ್ಬಂಧನ ಮಾಡಿರುವ ಘಟನೆ ನಡೆದಿದೆ. ಅಖಿಲ ಭಾರತ ವಾಲ್ಮೀಕಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ದಿಗ್ಬಂಧನ ಮಾಡಲಾಗಿದೆ. ಈ ವರ್ಷ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಹರಿಹರದ ರಾಜನಹಳ್ಳಿ ಗುರುಪೀಠದಲ್ಲಿ ನಡೆಸಲಾಗುವ ವಾಲ್ಮೀಕಿ ಜಾತ್ರೆಯನ್ನು ಮಾಡಬಾರದು ಎಂದು ಸಂಘದ ವತಿಯಿಂದ ಆಗ್ರಹ ಮಾಡಲಾಗಿದೆ.
ಇನ್ನು ಪ್ರತಿ ವರ್ಷದಂತೆ ವಾಲ್ಮೀಕಿ ಗುರುಪೀಠದಲ್ಲಿ ಮಾಡಲಾಗುವ ವಾಲ್ಮೀಕಿ ಜಾತ್ರೆಗೆ ದೇಣಿಗೆ ಸಂಗ್ರಹಣೆಗೆ ಪ್ರಸನ್ನಾನಂದಪುರಿ ಸ್ವಾಮೀಜಿ ತೆರಳಿದ್ದಾಗ ಭಕ್ತರಿಂದ ದಿಗ್ಬಂಧನ ಮಾಡಲಾಗಿದ್ದು, ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಅಖಿಲ ಭಾರತ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ನೇತೃತ್ವದಲ್ಲಿ ದಿಗ್ಬಂಧನ ಮಾಡಲಾಗಿದ್ದು, 3 ಗಂಟೆಗಳ ಕಾಲ ಸ್ವಾಮೀಜಿ ಅವರನ್ನು ಮನೆಯಿಂದ ಹೊರಗೆ ಕಳಿಸದೇ ಕೂಡಿ ಹಾಕಿದ್ದಾರೆ. ಇನ್ನು ಒಂದು ಸಮುದಾಯದ ಸ್ವಾಮೀಜಿಗೆ ಹೀಗೆ ಮಾಡಿರುವುದಕ್ಕೆ ಭಕ್ತರಿಂದ ಪರ-ವಿರೋಧ ಚರ್ಚೆ ಮಾಡಲಾಗುತ್ತದೆ.
ಬೆಂಗಳೂರಲ್ಲಿ ಮನೆ ಭೋಗ್ಯಕ್ಕೆ ಪಡೆಯೋ ಮುನ್ನ ಎಚ್ಚರ: ಮಾಲೀಕರ ವಂಚನೆ ಕೇಳಿ ಸಿಎಂ ಸಿದ್ದರಾಮಯ್ಯ ತಬ್ಬಿಬ್ಬು!