ಬೆಂಗಳೂರಲ್ಲಿ ಮನೆ ಭೋಗ್ಯಕ್ಕೆ ಪಡೆಯೋ ಮುನ್ನ ಎಚ್ಚರ: ಮಾಲೀಕರ ವಂಚನೆ ಕೇಳಿ ಸಿಎಂ ಸಿದ್ದರಾಮಯ್ಯ ತಬ್ಬಿಬ್ಬು!

ಬೆಂಗಳೂರಿನಲ್ಲಿ ಲಕ್ಷಾಂತರ ರೂ. ಕೊಟ್ಟು ಮನೆ ಭೋಗ್ಯಕ್ಕೆ ಪಡೆದಿದ್ದರೂ, ಮಾಲೀಕನ ಸಾಲಕ್ಕೆ ಬ್ಯಾಂಕ್ ಸಿಬ್ಬಂದಿ ಮನೆ ಜಪ್ತಿಗೆ ಬಂದಿದ್ದಾರೆ. ಈಗ ಭೋಗ್ಯಕ್ಕೆ ಬಂದ ಕುಟುಂಬ ಬೀದಿಗೆ ಬೀಳುವ ಆತಂಕದಲ್ಲಿದೆ. 

Bengaluru house lease case CM Siddaramaiah is shocked after hearing owner fraud sat

ಬೆಂಗಳೂರು (ನ.27): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನೆಯ ಮೇಲೆ ಲಕ್ಷಾಂತರ ರೂ. ಬ್ಯಾಂಕ್‌ ಸಾಲ ಮಾಡಿದ ಮಾಲೀಕನೊಬ್ಬ ತನ್ನ ಮನೆಯನ್ನು ಮತ್ತೊಬ್ಬರಿಗೆ ಲಕ್ಷಾಂತರ ರೂಪಾಯಿಗೆ ಭೋಗ್ಯಕ್ಕೆ ಕೊಟ್ಟು ವಂಚನೆ ಮಾಡಿದ್ದಾನೆ. ಮನೆಯ ಮೇಲಿನ ಸಾಲಕ್ಕೆ ಬ್ಯಾಂಕ್‌ನವರು ಮನೆಯನ್ನು ಸೀಜ್ ಮಾಡಲು ಬಂದಿದ್ದಾರೆ. ಆದರೆ, ಭೋಗ್ಯಕ್ಕೆ ಕೊಟ್ಟ ಲಕ್ಷಾಂತರ ರೂ. ಹಣವೂ ಇಲ್ಲದೇ ಇತ್ತ ವಾಸಕ್ಕೆ ಮನೆಯೂ ಇಲ್ಲದೇ ಪರದಾಡುತ್ತಿದ್ದೇವೆ ಎಂದು ಬ್ಯಾಟರಾಯನಪುರ ನಿವಾಸಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಅಳಲು ತೋಡಿಕೊಂಡಿದ್ದಾರೆ. 

ಹೈಟೆಕ್‌ ಸಿಟಿ, ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದು ಪ್ರಸಿದ್ಧವಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನೆಯನ್ನು ಬಾಡಿಗೆ ಅಥವಾ ಭೋಗ್ಯಕ್ಕೆ ಪಡೆಯುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ನೀವು ಕಷ್ಟಪಟ್ಟು ದುಡಿದ ಹಣ ವನ್ನು ವಂಚಕರ ಕೈಗೆ ಕೊಟ್ಟು ಕಷ್ಟಕ್ಕೆ ಸಿಲುಕುವುದು ಗ್ಯಾರಂಟಿಯಾಗಲಿದೆ. ಇಲ್ಲೊಬ್ಬ ವ್ಯಕ್ತಿಗೆ ಮನೆ ಮಾಲೀಕನೇ ವಂಚನೆ ಮಾಡಿರುವ ಘಟನೆ ನಡೆದಿದೆ. ಮನೆ ಮಾಲೀಕನೊಬ್ಬ ತಮ್ಮ ಮನೆಯ ಮೇಲೆ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಮಡಿದ್ದಾನೆ. ಇದರ ಜೊತೆಗೆ, ಮನೆಯನ್ನು ಲಕ್ಷಾಂತರ ರೂ. ಹಣವನ್ನು ಪಡೆದು ಬೇರೊಬ್ಬ ವ್ಯಕ್ತಿಗೆ ಭೋಗ್ಯಕ್ಕೆ ನೀಡಿದ್ದಾರೆ. ಈಗ ಮನೆಯಲ್ಲಿ ಒಂದಷ್ಟು ವರ್ಷಗಳು ನೆಮ್ಮದಿಯಿಂದ ಇರಬಹುದು ಎಂದುಕೊಂಡ ಕುಟುಂಬಕ್ಕೆ ಈಗ ಬರಸಿಡಿಲು ಬಡಿದಂತಾಗಿದೆ.

ಜನತಾದರ್ಶನ ಅರ್ಜಿಗಳ ವಿಲೇವಾರಿಗೆ ಕೇವಲ 15 ದಿನ ಕಾಲಾವಕಾಶ: ಸಿಎಂ ಸಿದ್ದರಾಮಯ್ಯ ತಾಕೀತು

ಲಕ್ಷಾಂತರ ರೂಪಾಯಿ ಹಣವನನು ಕೊಟ್ಟು ಮನೆಯನ್ನು ಭೋಗ್ಯಕ್ಕೆ ಪಡೆದು ವಾಸವಿದ್ದ ಕುಟುಂಬಕ್ಕೆ ಬ್ಯಾಂಕ್ ಸಿಬ್ಬಂದಿ ಶಾಕ್ ಕೊಟ್ಟಿದ್ದಾರೆ. ಈ ಮನೆಯ ಮೇಲೆ ಸಾಲವಿದ್ದು, ಮನೆಯನ್ನು ಜಪ್ತಿ ಮಾಡಲಾಗುತ್ತಿದೆ. ನೀವು ಮನೆಯನ್ನು ಖಾಲಿ ಮಾಡಿ ಎಂದು ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ನಮ್ಮ ಹಣವನ್ನು ಕೊಟ್ಟುಬಿಡಿ ನಾವು ಮನೆ ಖಾಲಿ ಮಾಡುತ್ತೇವೆ ಎಂದು ಕೇಳಲು ಮನೆ ಮಾಲೀಕನೂ ಕೈಗೆ ಸಿಗುತತಿಲ್ಲ. ಮತ್ತೊಂದೆಡೆ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ಭೋಗ್ಯಕ್ಕೆ ಕೊಟ್ಟು ಪಡೆದಿಕೊಂಡ ಮನೆಯೂ ವಾಸಕ್ಕೆ ಇಲ್ಲದಂತಾಗುತ್ತಿದೆ. ಇದರಿಂದ ನಮ್ಮ ಕುಟುಂಬಕ್ಕೆ ಭಾರಿ ಅನ್ಯಾಯವಾಗಿದ್ದು, ನೀವೇ ನಮಗೆ ನ್ಯಾಯ ಕೊಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ವಂಚನೆಗೊಳಗಾದ ವ್ಯಕ್ತಿ ಅಳಲು ತೊಡಿಕೊಂಡಿದ್ದಾನೆ.

ಮೈಸೂರು ರಸ್ತೆಯ ಬ್ಯಾಟರಾಯನಪುರದ 3 ನೇ ಅಡ್ಡ ರಸ್ತೆಯಲ್ಲಿ ರಾಜೇಶ್ವರಿ ಮಲ್ಲೇಶ್ ಎಂಬುವರ ಮನೆಯಲ್ಲಿ ಭೋಗ್ಯಕ್ಕೆ ನೆಲೆಸಿರುವ ನಿವಾಸಿಗಳು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮನೆ ಮಾಲೀಕರು ನಾಪತ್ತೆಯಾಗಿದ್ದು, ಬ್ಯಾಂಕ್ ನವರು ಮನೆ ಜಪ್ತಿಗೆ ಬಂದಿದ್ದಾರೆ. ನಾವು ಈ ಮನೆಗೆ ಲೀಸ್ ಗೆ ಬಂದಿದ್ದೇವೆ. ಆದರೆ ಮನೆ ಮಾಲೀಕರು ಮನೆಯ ಮೇಲೆ ಸಾಲ ಪಡೆದು ಅದನ್ನು ಕಟ್ಟದೆ ಪರಾರಿ ಆಗಿದ್ದಾರೆ. ಈಗ ಬ್ಯಾಂಕಿನವರು ಮನೆ ಜಪ್ತಿಗೆ ಬಂದಿದ್ದಾರೆ.‌ ನಮ್ಮ ಲೀಸ್ ಹಣವೂ ಹೋಗುತ್ತದೆ ಎಂದು ಗೋಳು ತೋಡಿಕೊಂಡರು.

ಬೆಂಗಳೂರು ಜನರೇ ಎಚ್ಚರ: ಹಸುಗೂಸುಗಳನ್ನು ಮಾರಾಟ ಮಾಡುವ ಗ್ಯಾಂಗ್ ಎಲ್ಲೆಡೆ ಸಂಚಾರ

ತಾವು ಹಾಕಿದ ಹಣ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ಮಕ್ಕಳೊಂದಿಗೆ ಬೀದಿಗೆ ಬರುವ ಸ್ಥಿತಿ ಇದೆ. ನೀವೇ ನಮಗೆ ನೆರವು ನೀಡಿ  ಎಂದು  ಮನವಿ ಮಾಡಿದರು.ತಕ್ಷಣ ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಕರೆದ ಮುಖ್ಯಮಂತ್ರಿಗಳು ಪ್ರಕರಣ ಪರಿಶೀಲಿಸುವಂತೆ ಸೂಚಿಸಿದರು. ಪೊಲೀಸ್ ಆಯುಕ್ತ ದಯಾನಂದ್ ಅವರು ಸಮಗ್ರವಾಗಿ ಸಮಸ್ಯೆ ಕೇಳಿಸಿಕೊಂಡು ಪರಿಹಾರಕ್ಕೆ ಡಿಸಿಪಿ ಅವರಿಗೆ ಸೂಚಿಸಿದರು.

Latest Videos
Follow Us:
Download App:
  • android
  • ios