ಮೈಸೂರು(ಜ.03): ದಸರಾ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ಮೊತ್ತವನ್ನು ಇನ್ನೂ ನೀಡದಿರುವ ಬಗ್ಗೆ ಸಚಿವ ವಿ. ಸೋಮಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇವನು ಎಲ್ಲವನ್ನು ತಿಂದು ತೇಗಿದ್ದಾನೆ. ಏ... ಎಕೌಂಟ್ ಬುಕ್ ತಗೊಂಡ್‌ ಬಾ ಎಂದು ಅಧಿಕಾರಿಯ ಬೆವರಿಳಿಸಿದ್ದಾರೆ.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನು ಹಣ ನೀಡದ ಅಧಿಕಾರಿ ವಿರುದ್ಧ ಗರಂ ಆದ ಮೈಸೂರು ಉಸ್ತುವಾರಿ ಸಚಿವ ಸೋಮಣ್ಣ ಅಧಿಕಾರಿಗೆ ವೇದಿಕೆಯಲ್ಲೇ ಬೆವರಿಳಿಸಿದ್ದಾರೆ.

ಎಂಜಿ ರೋಡ್‌ ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌..?

ಯುವಜನ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸುರೇಶ್‌ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸೋಮಣ್ಣ, ಇವನು ಎಲ್ಲವನ್ನು ತಿಂದು ತೇಗಿದ್ದಾನೆ. ಹಿ ಈಸ್‌ ಎ ಬಾಸ್ಟೆರ್ಡ್. ಮಕ್ಕಳಿಗೆ ಕೊಡೋ ಹಣನಾದ್ರು ಕೊಡಬೇಕಲ್ವ.? ಅದನ್ನು ಕೂಡ ತಿಂದು ತೇಗಿದ್ದಾನೆ ಎಂದು ಗರಂ ಆಗಿದ್ದಾರೆ.

ಈ ಸ್ಪೋರ್ಟ್ಸ್‌ಗಾಗಿ 7ಕೋಟಿ ಕೊಟ್ಟಿರೋದು ನಾವು. ಅದನ್ನು ತಿಂದು ತಿಂದು ತೇಗಿದ್ದಾನೆ. ಲೆಟ್ ಹಿಮ್ ಸಸ್ಪೆಂಡ್ ನೌ. ಹೋಗ್ತಾ ಇರು ಇಲ್ಲಿಂದ ಜಾಗ ಖಾಲಿ ಮಾಡು. ನಾನು ಕ್ಯಾಬಿನೆಟ್‌ನಲ್ಲಿ ಅಪ್ರೋವ್ ಮಾಡ್ತೀನಿ ಎಂದಿದ್ದಾರೆ.

'ಪುಣ್ಯಾತ್ಮ ಜಿಟಿಡಿ ಅನುದಾನ ತಂದರು, ನಿಮ್ದೇನೂ ಕೊಡುಗೆ ಇಲ್ಲ', ವಿಶ್ವನಾಥ್‌ ವಿರುದ್ಧ ತೀವ್ರ ವಾಗ್ದಾಳಿ

ಮೊದಲು ಅವನ ರಿಪೋರ್ಟ್ ನನಗೆ ಕಳುಹಿಸಿಕೊಡಿ ಎಂದು ಹಿರಿಯ ಅಧಿಕಾರಿಗೆ ಸೂಚನೆ ನೀಡಿದ ಸಚಿವರು ನಾನು ಈವರೆಗೂ ಇಲ್ಲಿ ಒಂದು ಕಾಫಿಯನ್ನೂ ಕುಡಿದಿಲ್ಲ ಎಂದ ಸಚಿವರು ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.