ಮೈಸೂರು(ಜ.03): ಬೆಂಗಳೂರಿನ ಎಂ.ಜಿ. ರೋಡ್‌ ಹೊಸ ವರ್ಷಾಚರಣೆ ಎಲ್ಲ ಕಡೆ ಫೇಮಸ್. ರಾಜ್ಯದಿಂದ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಹೊಸ ವರ್ಷ ಆಚರಿಸಲು ಜನ ಇಲ್ಲಿ ಸೇರುತ್ತಾರೆ. ಆದರೆ ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಆಚರಣೆ ನಡೆಯುವುದಿಲ್ಲ ಎನ್ನಲಾಗುತ್ತಿದೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ಬೆಂಗಳೂರು ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆಯನ್ನು ರದ್ದು ಪಡಿಸಿ ಬೇರೆ ಏನಾದರೂ ಮಾಡೋಣ ಎಂದು ಯೋಚನೆ ಮಾಡಿದ್ದೇವೆ. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇವೆ. ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಚಾಮರಾಜನಗರ: ರೈಲು ಪ್ರಯಾಣಿಕರಿಗೆ ದರ ಹೆಚ್ಚಳದ ಬಿಸಿ

ನಾನು 45 ವರ್ಷದಿಂದ ಬೆಂಗಳೂರಿನಲ್ಲಿ ಇದ್ದೇನೆ. ಅಂದಿನಿಂದ ಅದೊಂದೆ ರಸ್ತೆಯಲ್ಲಿ ಆಚರಿಸಲಾಗುತ್ತಿದೆ. ಇನ್ನಾದರೂ ಆ ರಸ್ತೆಯಲ್ಲಿ ಆಚರಣೆಯನ್ನ ನಿಲ್ಲಿಸಿ ಬೇರೆ ಕಡೆ ಆಚರಿಸಲು ಚಿಂತನೆ ಮಾಡುತ್ತೇವೆ. ಇದಕ್ಕೆ ಎಲ್ಲರ ಸಲಹೆ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ನೆರೆ ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಇನ್ನೆರಡು ದಿನದಲ್ಲಿ ಪ್ರಧಾನಿಯವರು ರಾಜ್ಯಕ್ಕೆ ಒಳ್ಳೆ ಸುದ್ದಿ ಕೊಡುತ್ತಾರೆ ಎಂದಿದ್ದಾರೆ. ಮೋದಿ ಟೀಕಿಸಿದ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿ, ಕಾಂಗ್ರೆಸಿಗರಿಗೆ ಕಾಮಾಲೆ ಕಣ್ಣು ಮತ್ತು ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ. ಹೀಗಾಗಿ ಪ್ರಧಾನಿ ಭಾಷಣ ಟೀಕಿಸುತ್ತಿದ್ದಾರೆ ಎಂದಿದ್ದಾರೆ.

ಇಂಧನ ಬೇಡ, ಕೂಲಿಗಾರರೂ ಬೇಡ; ದಿನಕ್ಕೆ 1 ಎಕರೆ ಕಟಾವು ಮಾಡುತ್ತೆ ಈ ಕೊಯ್ಲುಗತ್ತಿ..!

ಮಾಧ್ಯಮಗಳಲ್ಲಿ ಪ್ರಧಾನಿ ಭಾಷಣಕ್ಕೆ ಸಿಕ್ಕ ಪ್ರಚಾರ ನೋಡಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸಿಗರು ಹಾಗೂ ಕುಮಾರಸ್ವಾಮಿಯವರಿಗೆ ಸುಮ್ಮನೆ ಮೈ ಪರಚಿಕೊಳ್ಳುವ ಅಭ್ಯಾಸ. ಇದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದವರು. ಯಾವುದೋ ವಿಚಾರಕ್ಕೆ ಇನ್ನೇನನ್ನೋ ಸೇರಿಸಿ‌ ಮಾತನಾಡಬಾರದು. ಪ್ರಧಾನ ಮಂತ್ರಿಗಳು ಮಾತನಾಡಿದ್ದರಲ್ಲಿ ತಪ್ಪೇನಿದೆ..? ಎರಡು ಬಾರಿ ಪ್ರಧಾನ ಮಂತ್ರಿಗಳು ಆ ಪುಣ್ಯ ಕ್ಷೇತ್ರಕ್ಕೆ ಬಂದಿರುವುದು ಹೆಮ್ಮೆಯ ವಿಚಾರ. ಇದನ್ನು ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ.

ಸಂಶಯಾಸ್ಪದವಾಗಿ ಮೃತಪಟ್ಟ ನ್ಯೂಸ್‌ ಚಾನೆಲ್‌ ಮಾಲೀಕ 3 ಮದುವೆಯಾಗಿದ್ದ..!