Asianet Suvarna News Asianet Suvarna News

ಉತ್ತರ ಪ್ರದೇಶದ ಹುಡುಗಿಗೆ ಒಲಿದ ಉತ್ತರ ಕನ್ನಡ ಯುವಕ

ಉತ್ತರ ಕನ್ನಡದ ಯುವಕನೋರ್ವ ಉತ್ತರ ಪ್ರದೇಶದ ಯುವತಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ. ಇಲ್ಲಿನ ಸ್ವರ್ಣವಲ್ಲೀ ಸಂಸ್ಥಾನದ ಸಪ್ತಪದಿ ಸಂಸ್ಥೆಯ ಮಾರ್ಗದರ್ಶ ನದಲ್ಲಿ ಕಾರ್ಯ ನೆರವೇರಿದೆ. 

Uttara Kannada Youth Tie Knot With Uttar Pradesh Girl
Author
Bengaluru, First Published Mar 7, 2020, 1:07 PM IST

ಯಲ್ಲಾಪುರ [ಮಾ.07]:  ಸ್ವರ್ಣವಲ್ಲೀ ಸಂಸ್ಥಾನದ ಸಪ್ತಪದಿ ಸಂಸ್ಥೆಯ ಮಾರ್ಗದರ್ಶ ನದಲ್ಲಿ, ದೇಶದ ದಕ್ಷಿಣೋತ್ತರ ಬ್ರಾಹ್ಮಣರ ಸಂಘಟನೆ ಬೆಳೆಸುವ, ವೈವಾಹಿಕ ಸಂಬಂಧ ಬೆಸೆಯುವ ಕಾರ್ಯ ನಿರ್ವ ಹಿಸುತ್ತಿರುವ ಸಪ್ತಪದಿ ಸಂಸ್ಥೆಯ ಮುಂದಾಳತ್ವದಲ್ಲಿ ಅರಬೈಲ್ ಗ್ರಾಮದ ಕೆಳಾಸೆಯಲ್ಲಿ 24 ನೇ ವಿವಾಹ ಸಮಾರಂಭ ಗುರುವಾರ ನಡೆಯಿತು.

ಶ್ರೀ ಮಠದ ಸಪ್ತಪದಿ ಸಂಸ್ಥೆಯ ಸಂಚಾಲಕ ವೆಂಕಟರಮಣ ಬೆಳ್ಳಿ ಮಾತನಾಡಿ, ಇಂತಹ ಸ್ನೇಹ- ಸಂಬಂಧ, ಬಾಂಧವ್ಯ ಹೆಚ್ಚು ಬೆಳೆಯಲು ಸ್ವರ್ಣವಲ್ಲೀ ಪೂಜ್ಯರ ಸಂಕಲ್ಪವೇ ಕಾರಣವಾಗಿದೆ. ಈವರೆಗೆ 24 ವಿವಾಹ ಸಂಬಂಧ ಜರುಗುವುದಕ್ಕೆ ನಾವ್ಯಾರೂ ಕಾರಣರಲ್ಲ. ಪೂಜ್ಯರ ತಪಸ್ಸಿನ ಸಂಕಲ್ಪವೇ ಕಾರಣವೆಂದು ಹೇಳಿದರು.

ಅರಬೈಲ್ ಗ್ರಾಮದ ಕೆಳಾಸೆಯ ಅತ್ತಿಸವಲಿನ ಕಾವೇರಿ ಮತ್ತು ಗಣಪತಿ ಭಟ್ಟರ ಮನೆಯಲ್ಲಿ ಪುತ್ರ ಸುಬ್ರಹ್ಮಣ್ಯ ಮತ್ತು ಉತ್ತರಪ್ರದೇಶದ ಬಲರಾಮಪುರದ ಪಚ್ಚಪೇಡಾವದ ಶಕುಂತಲಾ ಮತ್ತು ಲಲನ್‌ಪ್ರಸಾದ ಪಾಂಡೆಯವರ ಪುತ್ರಿ ಛಾಯಾ ಇವರ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆಯಿತು.

ಇನ್ನೂ 3 ವಿವಾಹ ಸಂಬಂಧ ಕೂಡಿಬಂದಿದೆ. ಹಳ್ಳಿಗಳಲ್ಲಿ ವಾಸಿಸುವ ಹವ್ಯಕ ಯುವಕರಿಗೆ ವಿಶೇಷ ಆದ್ಯತೆಯ ಮೇಲೆ ಸಪ್ತಪದಿ ಸಂಸ್ಥೆ ಮಾರ್ಗದರ್ಶನ ಮಾಡುತ್ತಿದೆ. ಅನೇಕ ವಿವಾಹ ಗಳನ್ನು ನಾವು ವಿಶೇಷವಾಗಿ ಭಾಗವಹಿಸಿ, ಮಾರ್ಗದರ್ಶನ ನೀಡಿದ್ದರೂ, ಇತ್ತೀಚಿಗೆ ವಿವಾಹ ಇಚ್ಛಿತ ವರನೇ ಆರೆಂಟು ಬಾರಿ ವಧುವಿನ ಕುಟುಂಬದವರನ್ನು ಸಂಪರ್ಕಿಸಿ, ಪ್ರಯತ್ನಿಸಿರುವುದರಿಂದಲೇ ಹೆಚ್ಚು ವಿವಾಹಗಳಾಗುತ್ತಿವೆ. 

ನಮ್ಮ ಸಪ್ತಪದಿ ಸಂಸ್ಥೆ ವಿಶೇಷವಾಗಿ ಕೆಲಸ ಮಾಡಲಾಗದಿದ್ದರೂ, ಮಾರ್ಗದರ್ಶನ ನೀಡುತ್ತಿದೆ. ಜಿಲ್ಲೆಯ ಹೆಚ್ಚಿನ ಇಚ್ಛಿತ ವರರಿಗೆ ವಿವಾಹವಾಗಬೇಕಿದೆ. ಅಂಥವರು ಸ್ವತಃ ವಧುವಿನ ಪ್ರದೇಶಗಳಿಗೆ ಹೋಗಿ, ಅವರ ಮನವೊಲಿಸಿ, ವಿವಾಹ ಸಂಬಂಧವನ್ನು ಬೆಳೆಸುವ ಕಾರ್ಯಕ್ಕೆ ಮುಂದಾದಾಗ ಮಾತ್ರ ವಿವಾಹ ಸಂಬಂಧ ಬೆಳೆಯಲು ಸಾಧ್ಯ. 

‘ಭತ್ತದ ಬೆಳೆ ಈಗ ಹೆಚ್ಚು ಲಾಭದಾಯ’...

ನಮ್ಮ ಹವ್ಯಕ ಪರಂಪರೆಯಂತೆ ವಿವಾಹವನ್ನು ಮಾಡಲಾಗಿದೆ. ಆದಿಶಂಕರಾಚಾರ್ಯರು ವೈದಿಕ ಧರ್ಮವನ್ನು ಪುನರ್ ಸ್ಥಾಪಿಸಿ, ಮಠಗಳನ್ನು ಸ್ಥಾಪಿಸಿದ್ದಾರೆ. ಆ ಪರಂಪರೆಯಿಂದ ಬಂದ ನಮ್ಮ ಪೂಜ್ಯರ ತಪಸ್ಸಿನ ಪ್ರಭಾವದ ಸಂಕಲ್ಪಶಕ್ತಿಯೇ ಇಷ್ಟೊಂದು ವಿವಾಹಗಳು ನಡೆಯಲು ಕಾರಣವಾಗಿದೆ ಎಂದರು.

‘ಬಯಲು ಸೀಮೆ ಅನಾಥ ಚೆಲುವೆ’ಯರ ಕೈಹಿಡಿದ ‘ಘಟ್ಟದ ವರ’ರು!...

ಹರೀಶ ಹೆಗಡೆ ಕಣ್ಣೀಪಾಲ ವಿವಾಹ ಕುರಿತು ಮಾತನಾಡಿ, ವಿವಾಹದ ವೈಭವವೆನ್ನುವುದು ಅವರ ಮುಂದಿನ ಜೀವನದ ಬದುಕನ್ನು ಆಧರಿಸಿರುತ್ತದೆ. ನಮ್ಮ ದೋಷವನ್ನು ನಾವೇ ಪರಿಹರಿಸಿಕೊಳ್ಳಬೇಕು. ನಮ್ಮ ಕರ್ತವ್ಯದ ಕುರಿತು ಮತ್ತು ಪೂಜ್ಯರ ಮಾರ್ಗದರ್ಶನದಂತೆ ನಾವು ನಡೆಯಬೇಕಾಗುತ್ತದೆ.  ಅದು ನಮ್ಮ ಬದುಕನ್ನು ಹಸನಾಗಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಸಪ್ತಪದಿ ಸಂಸ್ಥೆಯ ಪ್ರಮುಖರಾದ ಶಂಕರ ಭಟ್ಟ ತಾರೀಮಕ್ಕಿ, ಗಣಪತಿ ಬೋಳಗುಡ್ಡೆ, ವಿನಾಯಕ ಭಟ್ಟ ಶಿರಸಿ, ಬಲರಾಮಪುರದ ಕಿರಣ ಉಪಾಧ್ಯಾಯ ಸೇರಿದಂತೆ ಅನೇಕರು ಇದ್ದರು.

Follow Us:
Download App:
  • android
  • ios