ಎಎಂಎಂ ಪ್ರತಿಷ್ಠಾನವು 'ಪ್ರಾಜೆಕ್ಟ್ ನನ್ನೀರ್' ಯೋಜನೆಯಡಿ ಹಳಿಯಾಳದ ಮೂರು ಜಲಮೂಲಗಳನ್ನು ಪುನರುಜ್ಜೀವನಗೊಳಿಸಿದೆ. ಇದರಿಂದಾಗಿ ಮಳೆನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದ್ದು, ಅಂತರ್ಜಲ ಮಟ್ಟ ಸುಧಾರಿಸಿದೆ.

ಕಾರವಾರ: ಜಲಮೂಲಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಎಂಎಂ ಪ್ರತಿಷ್ಠಾನ ತನ್ನ ಪ್ರಾಜೆಕ್ಟ್ ನನ್ನೀರ್ ಯೋಜನೆಯ ಮೂಲಕ ಹಳಿಯಾಳದ ಮೂರು ಜಲಮೂಲಗಳನ್ನು ಪುನರುಜ್ಜೀವನ ಮಾಡಿದೆ.

ಕುಂಬಾರಕೆರೆ, ಅಲ್ಲೋಳಿ ಹೊಂಡ, ಹನುಮಂತ ಹೊಂಡ

ಹಳಿಯಾಳ ತಾಲೂಕಿನ ಮೂರು ಪ್ರಮುಖ ಜಲಮೂಲಗಳಾದ ತೇರಗಾಂವ ಗ್ರಾಮದ ಕುಂಬಾರಕೆರೆ, ಅಲ್ಲೋಳಿ ಹೊಂಡ ಮತ್ತು ಹನುಮಂತ ಹೊಂಡವನ್ನು ಅಭಿವೃದ್ಧಿಪಡಿಸಿ ಜಲ ಭದ್ರತೆಗೆ ಬಲ ತಂದುಕೊಟ್ಟಿದೆ ಹಾಗೂ ಸ್ಥಳೀಯ ಸಮುದಾಯಗಳಿಗೆ ಸುಸ್ಥಿರವಾದ ಜೀವನೋಪಾಯಕ್ಕೆ ನೆರವು ಒದಗಿಸಿದೆ ಎಂದು ಇಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್ ಕಂಪನಿಯ ಸಿಇಒ ಹಾಗೂ ಪ್ರಾಜೆಕ್ಟ್ ನನ್ನೀರ್‌ನ ಅಧ್ಯಕ್ಷ ಮುತ್ತು ಮುರುಗಪ್ಪನ್ ಹೇಳಿದ್ದಾರೆ.

ಅಂದಾಜು 243 ಕುಟುಂಬಗಳಿಗೆ ಪ್ರಯೋಜನ

ನೈಋತ್ಯ ಮುಂಗಾರಿನ ಅವಧಿಯಲ್ಲಿ ವಾರ್ಷಿಕ 1,500 ಮಿಮೀಗಿಂತ ಹೆಚ್ಚು ಮಳೆ ಸುರಿದರೂ ಹಳಿಯಾಳ ತಾಲೂಕು ಆ ನೀರನ್ನು ಉಳಿಸಿಕೊಳ್ಳುವಲ್ಲಿ ಸವಾಲು ಎದುರಿಸುತ್ತಿದೆ. ಸುರಿದ ನೀರು ಅಂತರ್ಜಲ ಸೇರುವಂತೆ ಮಾಡುವಲ್ಲಿನ ಸೀಮಿತ ಸಾಮರ್ಥ್ಯ, ಸುರಿದ ನೀರು ಹರಿದುಹೋಗುವ ಕಾರಣಗಳಿಂದಾಗಿ ಹಳಿಯಾಳವು ಕಾಲಕಾಲಕ್ಕೆ ನೀರಿನ ಕೊರತೆ ಎದುರಿಸುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ರೂಪಿಸಲಾಗಿತ್ತು ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ಇದರಿಂದಾಗಿ ಅಂದಾಜು 243 ಕುಟುಂಬಗಳಿಗೆ ಪ್ರಯೋಜನ ಆಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Chikkaballapura: ರಾಷ್ಟ್ರಮಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಧನೆ; 1,242 ಹಳ್ಳಿಗಳಲ್ಲಿ ಸದ್ದಿಲ್ಲದೆ ನಡೆಯಿತು ಕ್ರಾಂತಿ!

ಒಟ್ಟಾರೆಯಾಗಿ ಈ ಕ್ರಮಗಳಿಂದಾಗಿ ಕೃಷಿ ಉದ್ದೇಶಗಳು ಹಾಗೂ ನಿತ್ಯದ ಅಗತ್ಯಗಳಿಗೆ ನೀರಿನ ಲಭ್ಯತೆ ಸುಧಾರಣೆ ಕಂಡು, 370ಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲ ಆಗಲಿದೆ ಎಂದು ಪಿಶುನಾಥ ದೇವೇಂದ್ರ ಮಿರಾಶಿ ಹಾಗೂ ನಾಗಪ್ಪ ಶಾಂತಪ್ಪ ಕಕ್ಕೇರಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯಲ್ಲಾಪುರದ 5 ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚಲು ಆದೇಶ: ಸ್ಥಳೀಯರಿಂದ ವಿರೋಧ ವ್ಯಕ್ತ