ಕಾರವಾರ ನೌಕಾನೆಲೆ ಕಾಮಗಾರಿಯಿಂದ ಗುಡ್ಡ ಕುಸಿತವಾಗಿ ಜನರಿಗೆ ತೊಂದರೆಯಾಗುತ್ತಿರುವ ಬೈತ್‌ಕೋಲಾ, ಪೋಸ್ಟ್ ಚೆಂಡಿಯಾ ಹಾಗೂ ಈಡೂರಿಗೆ ಭೇಟಿ ನೀಡಿದ ಶಾಸಕ ಸತೀಶ್ ಸೈಲ್ ನೌಕಾನೆಲೆಯ ಅಧಿಕಾರಿಗಳ ಜತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರದಿ: ಭರತ್ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್ 

ಕಾರವಾರ (ಜು.7): ಉತ್ತರಕನ್ನಡ‌ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಲಾವೃತವಾಗಿದ್ದ ಕಾರವಾರದ ಹಲವು ಪ್ರದೇಶಗಳಿಗೆ ಕಾರವಾರ- ಅಂಕೋಲಾ ಶಾಸಕ ಸತೀಶ್ ಸೈಲ್ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌‌‌. ಅಲ್ಲದೇ, ಗುಡ್ಡ ಕುಸಿತವಾದ ಬೈತ್‌ಕೋಲಾ, ಪೋಸ್ಟ್ ಚೆಂಡಿಯಾ, ಈಡೂರು ಭಾಗಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. 

ಕಳೆದೆರಡು ದಿನಗಳಿಂದ ಜಿಲ್ಲೆಯ ಕರಾವಳಿ ಭಾಗದಲ್ಲಿ ಸುರಿದ ರಣಭೀಕರ ಮಳೆಯಿಂದಾಗಿ ಕಾರವಾರದ ಬಿಣಗಾ, ಅರಗಾದ ಹಲವು ಪ್ರದೇಶಗಳು ಜಲಾವೃತವಾಗಿತ್ತು. ಈ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಸತೀಶ್ ಸೈಲ್ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಿಕೊಡುವಂತೆ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳಿಗೆ ಸೂಚನೆ ನೀಡಿದರು.

South Western Railway: ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಶಾಶ್ವತ

ಇನ್ನು ನೌಕಾನೆಲೆ ಕಾಮಗಾರಿಯಿಂದ ಗುಡ್ಡ ಕುಸಿತವಾಗಿ ಜನರಿಗೆ ತೊಂದರೆಯಾಗುತ್ತಿರುವ ಬೈತ್‌ಕೋಲಾ, ಪೋಸ್ಟ್ ಚೆಂಡಿಯಾ ಹಾಗೂ ಈಡೂರಿಗೆ ಭೇಟಿ ನೀಡಿದ ಶಾಸಕರು, ನೌಕಾನೆಲೆಯ ಅಧಿಕಾರಿಗಳ ಜತೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ಈ ಬಗ್ಗೆ ಸಭೆ ನಡೆಸುವ ಮೂಲಕ ನೌಕಾನೆಲೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.

ಧರೆಗೆ ಉರುಳಿದ ಹಾವೇರಿಯ ಐತಿಹಾಸಿಕ ದೊಡ್ಡ ಹುಣಸೆ ಮರ!

ನೌಕಾನೆಲೆಯವರು ತಮ್ಮ ಜಾಗದಲ್ಲಿ ಬೇಲಿ ಹಾಗೂ ಕಂಪೌಂಡ್ ಕಟ್ಟಿರುವುದರಿಂದ ನೀರು ಸರಾಗವಾಗಿ ಹರಿಯಲಾಗದೇ ಪ್ರತೀ ವರ್ಷ ಅಲ್ಲಲ್ಲಿ ನೆರೆ ಕಾಟ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಬೈತ್‌ಕೋಲಾದಿಂದ ಬಿಣಗಾ ಮಾರ್ಗವಾಗಿ ಗುಡ್ಡದ ಮೇಲೆ ನೌಕಾನೆಲೆಯವರು ರಸ್ತೆ ನಿರ್ಮಾಣ‌ ಮಾಡುತ್ತಿದ್ದು, ಇದರಿಂದ ಗುಡ್ಡ ಕುಸಿತದ ಭೀತಿ ಉಂಟಾಗಿ ತಳಭಾಗದ ನಿವಾಸಿ ಮೀನುಗಾರರು ಆತಂಕದಲ್ಲಿದ್ದಾರೆ. ಜನರ ಜೀವಕ್ಕೆ ತೊಂದರೆಯಾದರೆ ಯಾರು ಹೊಣೆ..? ಈ ಹಿನ್ನೆಲೆಯಲ್ಲಿ ನೌಕಾನೆಲೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು ತಿಳಿಸಿದ್ದಾರೆ.