ಪಾಲಿಸ್ಟರ್ ಧ್ವಜ: ಕೇಂದ್ರದಿಂದ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ, ಖಾದರ್‌

ಘೋಷಣೆ ಮತ್ತು ಪ್ರಚಾರದ ಮೊದಲು ಸಮರ್ಪಕ ಅನುಷ್ಠಾನ ಆಗಲಿ. ಇನ್ನೂ ಹಲವರಿಗೆ ಮನೆಯೇ ಇಲ್ಲ, ಬಾವುಟ ಹಾರಿಸೋದು ಎಲ್ಲಿ?: ಖಾದರ್‌

UT Khader Slams to Central Government grg

ಮಂಗಳೂರು(ಆ.09):  ಭಾರತದ ರಾಷ್ಟ್ರಧ್ವಜಕ್ಕೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಬಳಕೆ ನಿರ್ಧರಿಸಲಾಗಿದೆ.  ಕೇಂದ್ರ ಸರ್ಕಾರದ ಈ ನಡೆ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನವಾಗಿದೆ. ರಾಷ್ಟ್ರಧ್ವಜ ಖಾಲಿ ಬಟ್ಟೆಯಲ್ಲ, ಖಾದಿ ಈ ದೇಶದ ತಾಯಿ ಬೇರು. ವಿದೇಶದಿಂದ ಪಾಲಿಸ್ಟರ್ ತಂದು ಗುಡ್ಡೆ ಹಾಕುವುದು ಸರಿಯಲ್ಲ ಅಂತ ಕೇಂದ್ರದ ವಿರುದ್ಧ ವಿಪಕ್ಷ ನಾಯಕ ಯು.ಟಿ.ಖಾದರ್ ಹರಿಹಾಯ್ದಿದ್ದಾರೆ

ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾದಿ ನೇಯುವ ಚರಕ ಖಾಲಿ ಚಿಹ್ನೆಯಲ್ಲ, ಅದು ರಾಜಾಡಳಿತ ಕಿತ್ತೆಸೆದ ಸಂಕೇತ. ಈ ದೇಶದಲ್ಲಿ ಯಾವುದೇ ಸರ್ಕಾರ ಬಂದರೂ ಖಾದಿಗೆ ಪ್ರೋತ್ಸಾಹ ಕೂಡುವ ಪದ್ದತಿ ಇತ್ತು. ಖಾದಿ ತೊಡುವ ಸಂದೇಶವನ್ನ ಕೇಂದ್ರ ಸರ್ಕಾರ ಇಡೀ ವಿಶ್ವಕ್ಕೆ ಕೊಡಬೇಕಿತ್ತು. ಖಾದಿಯಲ್ಲಿ ಈ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸಂಕೇತವಿದೆ. ನಾವು ಮಾತಿನಲ್ಲಿ ಸ್ವದೇಶಿ, ಕೆಲಸದ ಅನುಷ್ಠಾನದಲ್ಲಿ ವಿದೇಶಿ ತಂತ್ರವಿದೆ. ಪಾಲಿಸ್ಟರ್ ವಿದೇಶದಿಂದ ಅಮದಿಗೆ ಅವಕಾಶ ಕೊಡಲಾಗಿದೆ, ಇದರಿಂದ ಚೀನಾಗೆ ಲಾಭ. ಇದು ದೊಡ್ಡ ವ್ಯಾಪಾರಿಗಳು ಮತ್ತು ಗಾರ್ಮೆಂಟ್ ಬ್ಯುಸಿನೆಸ್‌ಗೆ ಲಾಭ. ಸ್ಪಷ್ಟತೆ ಇಲ್ಲದ ಈ ನಿರ್ಧಾರ ಇಡೀ ದೇಶಕ್ಕೆ ಅವಮಾನ. ಕೇಂದ್ರ ಇದನ್ನ ಪುನರ್ ಪರಿಶೀಲಿಸಿ ಖಾದಿಗೆ ಮಹತ್ವ ಕೊಡಲಿ ಅಂತ ಹೇಳಿದ್ದಾರೆ. 

ಮಂಗಳೂರು: 5 ದಶಕದಲ್ಲಿ ದಕ್ಷಿಣ ಕನ್ನಡದಲ್ಲಿ 40ಕ್ಕೂ ಹೆಚ್ಚು ಕೋಮು ಹತ್ಯೆ

ಸ್ವಾತಂತ್ರ್ಯದ 75ನೇ ವರ್ಷದ ಹೆಸರಲ್ಲಿ ಹರ್ ಘರ್ ತಿರಂಗ ಅಭಿಯಾನ ತೀರ್ಮಾನ ಆಗಿದೆ. ಆದರೆ ಈ ಬಗ್ಗೆ ಸ್ಪಷ್ಟತೆಯ ಒಂದು ಗೈಡ್ ಲೈನ್ ಕೊಡಬೇಕಿದೆ. ಈಗ ಬಂದಿರೋ ಪ್ಲಾಗ್‌ಗಳಲ್ಲೂ ಹಲವಾರು ಸಮಸ್ಯೆ ಇದೆ. ಜೊತೆಗೆ ಹಲವು ರೇಟ್‌ಗಳಲ್ಲಿ ಪ್ಲಾಗ್ ಮಾರಾಟ ಆಗ್ತಿದೆ. ಘೋಷಣೆ ಮತ್ತು ಪ್ರಚಾರದ ಮೊದಲು ಸಮರ್ಪಕ ಅನುಷ್ಠಾನ ಆಗಲಿ. ಇನ್ನೂ ಹಲವರಿಗೆ ಮನೆಯೇ ಇಲ್ಲ, ಬಾವುಟ ಹಾರಿಸೋದು ಎಲ್ಲಿ? ಹಾಗಾದ್ರೆ ಮನೆ ಇಲ್ಲದವರು ಇದನ್ನ ಆಚರಣೆ ಮಾಡೋದು ಬೇಡವಾ? ಅಂತ ಕೇಂದ್ರ ಸರ್ಕಾರಕ್ಕೆ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
 

Latest Videos
Follow Us:
Download App:
  • android
  • ios