* ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ* ಲಾಕ್‌ಡೌನ್‌ ರಾಜ್ಯ, ದೇಶದಲ್ಲಿ ಯಶಸ್ವಿ* ಜನ ಇನ್ನೊಂದು ವಾರ ಮನೆಯಲ್ಲಿದ್ದರೆ ಕೊರೋನಾ ಇನ್ನಷ್ಟು ನಿಯಂತ್ರಣಕ್ಕೆ 

ಹುಬ್ಬಳ್ಳಿ(ಜೂ.06): ಕೇಂದ್ರ ಸರ್ಕಾರ 400 ಗಿಗಾ ವ್ಯಾಟ್‌ ಸೌರಶಕ್ತಿ ಮೂಲಕ ವಿದ್ಯುತ್‌ ಉತ್ಪಾದನೆ ಮಾಡುವ ತೀರ್ಮಾನ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. 

ಇಲ್ಲಿನ ತಮ್ಮ ನಿವಾಸದ ಎದುರು ಪರಿಸರ ದಿನದ ಅಂಗವಾಗಿ ಸಸಿ ನೆಟ್ಟು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗುವುದು ಅತ್ಯಗತ್ಯ. ಹೀಗಾಗಿ, ಕೇಂದ್ರ ಸರ್ಕಾರ ಪರಿಸರ ರಕ್ಷಣೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇದರಲ್ಲಿ ಸೌರಶಕ್ತಿಯೂ ಒಂದು. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟಹೆಜ್ಜೆ ಇಟ್ಟಿದೆ.

ಕೊರೋನಾ ಪ್ರಕರಣ ಇಳಿಕೆ: ಲಾಕ್‌ಡೌನ್‌ಗೆ ವಿನಾಯ್ತಿ
ಲಾಕ್‌ಡೌನ್‌:

ಲಾಕ್‌ಡೌನ್‌ ರಾಜ್ಯ, ದೇಶದಲ್ಲಿ ಯಶಸ್ವಿಯಾಗುತ್ತಿದೆ. ಕೋವಿಡ್‌ ಸೋಂಕಿತರ ಪ್ರಮಾಣ ಬಹಳಷ್ಟು ಇಳಿಕೆಯಾಗುತ್ತಿದೆ. ಜಿಲ್ಲೆಯಲ್ಲೂ ಕಳೆದ ಹದಿನೈದು ದಿನಗಳಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರ ಪರಿಣಾಮ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಒಂದು ತಿಂಗಳ ಮುಂಚೆ ಆಕ್ಸಿಜನ್‌, ಬೆಡ್‌ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದರು. ಈಗ ಆ ಪರಿಸ್ಥಿತಿಯಿಲ್ಲ ಎಂದರು.

ಇದೀಗ ಜೂ.7ರಿಂದ ಲಾಕ್‌ಡೌನ್‌ನಲ್ಲಿ ಕೆಲವೊಂದಿಷ್ಟು ವಿನಾಯಿತಿ ನೀಡಲಾಗಿದೆ. ಜನ ಇನ್ನೊಂದು ವಾರ ಮನೆಯಲ್ಲಿದ್ದರೆ ಕೊರೋನಾ ಇನ್ನಷ್ಟು ನಿಯಂತ್ರಣಕ್ಕೆ ಬರುತ್ತದೆ ಎಂದರು. ಕೊರೋನಾದಿಂದ ಸಂಪೂರ್ಣ ಗೆಲುವು ಸಾಧಿಸುತ್ತೇವೆ ಎಂದು ನಾನು ಹೇಳುತ್ತಿಲ್ಲ. ಆದರೆ ನಿಯಂತ್ರಣಕ್ಕೆ ಬರುತ್ತದೆ. ಆದಕಾರಣ ಜನರಾರ‍ಯರು ಅನಗತ್ಯವಾಗಿ ಹೊರಗೆ ಬರುವುದು ಬೇಡ ಎಂದು ನುಡಿದರು. ಈ ವೇಳೆ ಬಿಜೆಪಿ ಮುಖಂಡರಾದ ಲಿಂಗರಾಜ ಪಾಟೀಲ, ಶಿವು ಮೆಣಸಿನಕಾಯಿ ಸೇರಿದಂತೆ ಹಲವರಿದ್ದರು.