ನವದೆಹಲಿ(ಫೆ.02): ಪರಂಪರಾಗತವಾಗಿ ಸ್ಥಾಪಿತವಾಗಿರುವ ಉದ್ಯಮ ಮಾದರಿಗೆ ಹೊರತಾದ, ನಾವೀನ್ಯತೆ ಆಧರಿತ ಉದ್ಯಮಗಳೇ ಹೊಸ ಆರ್ಥಿಕತೆಯ ಮೂಲ ಎಂದು ಸಾರಿರುವ ಕೇಂದ್ರ ಸರ್ಕಾರ ಈ ವಲಯಗಳ ಸಮಗ್ರ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದೆ.

ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ), ೩ಡಿ ಪ್ರಿಂಟಿಂಗ್, ಡಿಎನ್‌ಎ ದತ್ತಾಂಶ ಸಂಗ್ರಹ, ಕ್ವಾಂಟಮ್ ಕಂಪ್ಯೂಟಿಂಗ್ ಮೊದಲಾದ ವಿಷಯಗಳು ಜಾಗತಿಕ ಆರ್ಥಿಕತೆಗೆ ಹೊಸ ರೂಪ ನೀಡಿವೆ. ಭಾರತ ಕೂಡಾ ಸಾಂಪ್ರದಾಯಿಕ ಉದ್ಯಮ ಮಾದರಿಗೆ ಹೊರತಾದ ಹೊಸ ಉದ್ಯಮ ಮಾದರಿಗಳಾದ ಅಗ್ರಿಗೇಟರ್ ಫ್ಲಾಟ್ ಫಾರ್ಮ್ಸ್‌ಗಳನ್ನು ಅಪ್ಪಿಕೊಂಡಿದೆ.

ಚೀನಾದಿಂದ 324 ಭಾರತೀಯರ ಏರ್‌ಲಿಫ್ಟ್‌!

ಜೊತೆಗೆ ಸರ್ಕಾರ ಕೂಡಾ ಹೊಸ ತಂತ್ರಜ್ಞಾನದ ಮೂಲಕ ಜನರಿಗೆ ನೇರವಾಗಿ ಲಾಭ ವರ್ಗಾವಣೆ ಮತ್ತು ಹಿಂದೆಂದೂ ಕಂಡುಕೇಳರಿದ ರೀತಿಯಲ್ಲಿ ಹಣಕಾಸು ಒಳಗೊಳ್ಳುವಿಕೆಯನ್ನು ಜಾರಿಗೊಳಿಸಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ‘ಡಾಟಾ ಈಸ್ ನ್ಯೂ ಆಯಿಲ್’ ಎನ್ನುವ ಮಾತು ಬಹುಷಃ ಇದೀಗ ಕ್ಷೀಷೆಯಾದೀತು. ದತ್ತಾಂಶ ವಿಶ್ಲೇಷಣೆ, ಫಿನ್‌ಟೆಕ್ ಮತ್ತು ಇಂಟರ್‌ನೆಟ್ ಆಫ್ ಥಿಂಗ್ಸ್ ನಾವು ನಮ್ಮ ಜೀವನವನ್ನು ನಡೆಸುವ ರೀತಿಯನ್ನೇ ಬದಲಾಯಿಸಿವೆ. ಈ ವಲಯದಲ್ಲಿ ಮುಂಚೂಣಿ ದೇಶವಾಗಿ ಹೊರಹೊಮ್ಮುವ ಅವಕಾಶವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ಸಚಿವೆ ನಿರ್ಮಲಾ ಪ್ರಕಟಿಸಿದ್ದಾರೆ.

ದತ್ತಾಂಶ ಕೇಂದ್ರ ದೇಶಾದ್ಯಂತ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಖಾಸಗಿ ವಲಯದ ಮೂಲಕ ನಿರ್ವಹಣೆ ಮಾಡಲ್ಪಡುವ ಇಂಥ ಕೇಂದ್ರಗಳ ಸ್ಥಾಪನೆಗೆ ಅನುವಾಗುವಂತೆ ಸರ್ಕಾರ ಶೀಘ್ರವೇ ಹೊಸ ನೀತಿ ಜಾರಿಗೊಳಿಸಲಿದೆ.

ಬಜೆಟ್‌ ಬಂಪರ್‌: ಬೆಂಗಳೂರಿನಿಂದ ಚೆನ್ನೈಗೆ ರೈಲು ಪ್ರಯಾಣ 2 ವರೆ ತಾಸು ಇಳಿಕೆ 

ಕ್ವಾಂಟಮ್ ತಂತ್ರಜ್ಞಾನ ಕ್ವಾಂಟಮ್ ತಂತ್ರಜ್ಞಾನವು, ಕಂಪ್ಯೂಟಿಂಗ್, ಸಂಪರ್ಕ, ಸಂವಹನ, ಸೈಬರ್ ಭದ್ರತೆ ವಿಷಯದಲ್ಲಿ ಹೊಸ ಹೊಸ ಅನ್ವಯಿಸುವಿಕೆಗೆ ಅವಕಾಶ ಮಾಡಿಕೊಡುತ್ತದೆ. ಈ ವಲಯದಲ್ಲಿನ ಸೈದ್ದಾಂತಿಕ ರಚನೆಗಳು ಸಾಕಷ್ಟು ವಾಣಿಜ್ಯ ಅಪ್ಲಿಕೇಷನ್ಸ್‌ಗಳ ಉಗಮಕ್ಕೆ ಕಾರಣವಾಗುವ ವಿಶ್ವಾಸವಿದೆ. ಹೀಗಾಗಿ 5 ವರ್ಷಗಳಲ್ಲಿ ಈ ಕುರಿತ ರಾಷ್ಟ್ರೀಯ ಯೋಜನೆಗೆ 8000 ಕೋಟಿ ನೀಡಲಾಗಿದೆ.

ಗ್ರಾಮಗಳ ಡಿಜಿಟಲೀಕರಣ ಗ್ರಾಮ ಪಂಚಾಯತ್ ಮಟ್ಟದಲ್ಲಿನ ಎಲ್ಲಾ ಸರ್ಕಾರಿ ಸಂಸ್ಥೆಗಳು, ಅಂದರೆ ಅಂಗನವಾಡಿ ಕೇಂದ್ರಗಳು, ಆರೋಗ್ಯ ಕೇಂದ್ರಗಳು, ಸರ್ಕಾರಿ ಶಾಲೆಗಳು, ಪಡಿತರ ವಿತರಣೆ ಕೇಂದ್ರಗಳು, ಅಂಚೆ ಕಚೇರಿಗಳು ಮತ್ತು ಪೊಲೀಸ್ ಠಾಣೆಗಳನ್ನು ಸಂಪೂರ್ಣ ಡಿಜಿಟಲೀಕರಣ ಗೊಳಿಸು ವುದು ಸರ್ಕಾರದ ಗುರಿ. ಇದಕ್ಕಾಗಿಯೇ ಭಾರತ್ ನೆಟ್ ಯೋಜನೆ ಭಾಗವಾಗಿ ಫೈಬರ್ ಟು ಹೋಮ್ ಜಾಲದ ಮೂಲಕ ದೇಶಾದ್ಯಂತ ಇರುವ 1 ಲಕ್ಷ ಗ್ರಾಮ ಪಂಚಾಯತ್ ಗಳನ್ನು ಈ ವರ್ಷ ತಲುಪುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಇದಕ್ಕಾಗಿ ಪ್ರಸಕ್ತ ಬಜೆಟ್‌ನಲ್ಲಿ 6000 ಕೋಟಿ ರು. ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ನಿಮ್ಹಾನ್ಸ್‌ಗೆ 39 ಕೋಟಿ ಅನುದಾನ, ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬೇರೇನೇನು ಸಿಕ್ತು...?

ಬೌದ್ಧಿಕ ಆಸ್ತಿ ರಕ್ಷಣೆಗೆ ಕ್ರಮ ಬೌದ್ಧಿಕ ಆಸ್ತಿ ಕಾಪಾಡಲು ಡಿಜಿಟಲ್ ವೇದಿಕೆಯೊಂ ದನ್ನು ಉತ್ತೇಜಿಸಲು ಸರ್ಕಾರ ನಿರ್ಧರಿಸಿದೆ. ಇದಲ್ಲದೆ ಬೌದ್ಧಿಕ ಆಸ್ತಿ ವಲಯದಲ್ಲಿನ ಕ್ಷಿಷ್ಟ ವಿಷಯಗಳ ನಿರ್ವಹಣೆ ಮತ್ತು ನಾವೀನ್ಯತೆಗಾಗಿ ಶ್ರೇಷ್ಠತಾ ಸಂಸ್ಥೆಯೊಂದನ್ನು ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ನಾಲೆಡ್ಜ್ ಕ್ಲಸ್ಟರ್ ಇದೇ ವೇಳೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಹೊಸ ಮತ್ತು ಉದಯೋನ್ಮಕ ವಲಯಗಳಲ್ಲಿ ನಾಲೆಡ್ಜ್ ಟ್ರಾನ್ಸ್‌ಲೇಷನ್ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿದೆ.

ವಿಜ್ಞಾನ ಯೋಜನೆ ಹೊಸ ಜನಾಂಗದ ಔಷಧ, ಕೃಷಿ ಮತ್ತು ಜೀವವೈವಿಧ್ಯ ನಿರ್ವಹಣೆಯ ನಿಟ್ಟಿನಲ್ಲಿ ಜನಸಂಖ್ಯೆ ಮತ್ತು ಪ್ರದೇಶವಾರು ಭೌಗೋಳಿಕ ಮಾದರಿ ಅರ್ಥ ಮಾಡಿಕೊಳ್ಳುವುದು ಅನಿವಾರ್ಯ. ಹೀಗಾಗಿಯೇ ಈ ವಿಷಯಕ್ಕೆ ಬೆಂಬಲ ನೀಡುವು ಸಲುವಾಗಿ ರಾಷ್ಟ್ರೀಯ ಮಟ್ಟದಲ್ಲಿ ಎರಡು ವಿಜ್ಞಾನ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಬಜೆಟ್‌ನಲ್ಲಿ ಸಾಮಾಜಿಕ ಕಳಕಳಿಗೆ ಆದ್ಯತೆ: ಮಹಿಳೆಯ ವಿವಾಹ ವಯೋಮಿತಿ ಬದಲು..?

ಸ್ಟಾರ್ಟಪ್ ಹೊಸ ಚಿಂತನೆಗಳನ್ನು ಒಳಗೊಂಡ ಉದ್ಯಮಗಳನ್ನು ಆರಂಭಿಕ ಹಂತದಲ್ಲೇ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದಿಂದಲೇ ಹಣಕಾಸಿನ ನೆರವು ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.

ಜಿಡಿಪಿ ಬೆಳವಣಿಗೆ ದರ 10% ಏರಿಕೆ 2020-21ನೇ ಸಾಲಿನಲ್ಲಿ ದೇಶದ ಜಿಡಿಪಿ (ಆರ್ಥಿಕಾಭಿವೃದ್ಧಿ)ದರ ಶೇ.10ರಷ್ಟು ಏರಿಕೆ ಕಾಣಲಿದೆ ಎಂದು ಕೇಂದ್ರ ಸರ್ಕಾರ ಸರ್ಕಾರ ಬಜೆಟ್‌ನಲ್ಲಿ ತಿಳಿಸಿದೆ. ನಿರ್ಮಲಾ ಮಂಡಿಸಿದ ಬಜೆಟ್‌ನಲ್ಲಿ 22.46 ಲಕ್ಷ ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. 30.42 ಲಕ್ಷ ಕೋಟಿ ರು. ವೆಚ್ಚ ಅಂದಾಜಿಸಲಾಗಿದೆ. 2019-20ನೇ ಸಾಲಿನ ಬಜೆಟ್ ಗಾತ್ರ 26.99 ಲಕ್ಷ ಕೋಟಿ ರು. ಇತ್ತು. 19.32 ಲಕ್ಷ ಕೋಟಿ ರು. ಸ್ವೀಕೃತಿ ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯ ಬಜೆಟ್ ಗಾತ್ರ 3.43 ಲಕ್ಷ ಕೋಟಿ ರು.ನಷ್ಟು ಅಧಿಕವಾಗಿದೆ. 2019-20ನೇ ಸಾಲಿನಲ್ಲಿ 4.99 ಲಕ್ಷ ಕೋಟಿ ರು. ಸಾಲ ಮಾಡಲಾಗಿತ್ತು. ಈ ಬಾರಿ ಅದು 5.36 ಲಕ್ಷ ಕೋಟಿ ರು.ಗೆ ಏರಿಕೆಯಾಗುವ ಅಂದಾಜಿದೆ. ವಿಶ್ವ ಆರ್ಥಿಕತೆಯಲ್ಲಿ ಭಾರತ ೫ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಹೊಂದಿದ್ದ ಒಟ್ಟಾರೆ ಸಾಲದ ಪ್ರಮಾಣ ಇಳಿಕೆಯಾಗಿದೆ. 2014ರ ಮಾರ್ಚ್‌ನಲ್ಲಿ ಜಿಡಿಪಿಯ ಶೇ.52.2ರಷ್ಟಿದ್ದ ಸಾಲ, 2019ರ ಮಾಚ್ ನರ್ಲ್ಲಿ ಜಿಡಿಪಿಯ ಶೇ.48.7ಕ್ಕೆ ಇಳಿಕೆಯಾಗಿದೆ.