ಉಡುಪಿ: 100 ಪುಸ್ತಕ ಪ್ರಕಟಿಸಿದರೂ ಪ್ರಕಾಶಕ್ಕೆ ಬರದ ಸಾಹಿತಿ ಈ ಹಿರಿಯಜ್ಜಿ

ಉಡುಪಿಯ ಅತ್ರಾಡಿಯ ಇಂದಿರಾ ಹಾಲಂಬಿ ಎಂಬವರು ಕಳೆದ 4 ದಶಗಳಿಂದ 28 ಮಕ್ಕಳ ಸಾಹಿತ್ಯ, 36 ನಾಟಕ, 15 ಕಥಾ ಸಂಕಲನ, 8 ಕಾದಂಬರಿ,10 ಪ್ರವಾಸ ಸಾಹಿತ್ಯ, 6 ಹಾಸ್ಯ ಸಾಹಿತ್ಯ 4 ವೈಚಾರಿಕ ಸಾಹಿತ್ಯದ  ಪ್ರಕಟಿಸಿದ್ದಾರೆ. ಆದರೆ ಪ್ರಚಾರವಾಗಿಲ್ಲ.

Udupi writer Indira halambi who has not been published book gow

ಉಡುಪಿ (ಮಾ.9): ಒಂದು ಪುಸ್ತಕ ಪ್ರಕಟಿಸಿದರೂ ಸಾಕು, ಅವರ ಸಾಹಿತ್ಯ ಸೇವೆಯನ್ನು ಕೊಂಡಾಡುವ ವಿದ್ಯಮಾನ ಮಾಮೂಲಾಗಿ ಕಾಣುತ್ರೇವೆ ಆದರೆ ಯಾವುದೇ ಪ್ರಚಾರದ ಭರಾಟೆಯಿಲ್ಲದೆ ಸಾಧನೆ ಮಾಡಿದ ಮಹಿಳೆಯರು ಎಲೆಮರೆ ಕಾಯಿಯಂತಿದ್ದಾರೆ. ಉಡುಪಿಯ ಅತ್ರಾಡಿ ಎಂಬ ಪುಟ್ಟ ಊರಲ್ಲಿರುವ ಇಂದಿರಾ ಹಾಲಂಬಿ ಅಂಥವರಲ್ಲೊಬ್ಬರು. ವಯಸ್ಸು 86, ಕನಸುಗಳು ನೂರಾರು, ಸ್ಪಷ್ಟ ಮಾತು, ನೇರ ನುಡಿ, ಮಾತೃ ಹೃದಯ. ಅಪಾರ ಲವಲವಿಕೆ. ಈ ಜ್ಞಾನವೃದ್ದೆಯ ಹೆಸರು ಇಂದಿರಾ ಹಾಲಂಬಿ. ಉಡುಪಿಯ ಅತ್ರಾಡಿ ಎಂಬ ಪುಟ್ಟ ಊರಲ್ಲಿ ಸಾರ್ಥಕ ವಾಸ. ಇವರ ಮನೆಯೊಳಗೆ ಕಾಲಿಟ್ಟರೆ ಪುಸ್ತಕಗಳದ್ದೇ ರಾಶಿ ,ಮಕ್ಕಳ ಸಾಹಿತ್ಯ, ನಾಟಕ,ಕತೆ ,ಕಾದಂಬರಿ ,ಕವನ ಇದು ಯಾರದ್ದೋ ಪುಸ್ತಕದ ಸಂಗ್ರಹ ಅಂದುಕೋಬೇಡಿ ,ಇವೆಲ್ಲ ಇವರೇ ಬರೆದದ್ದು! 

ನೀವು ನಂಬಲಿಕ್ಕಿಲ್ಲ, ಕಳೆದ 4 ದಶಗಳಿಂದ 28 ಮಕ್ಕಳ ಸಾಹಿತ್ಯ, 36 ನಾಟಕ, 15 ಕಥಾ ಸಂಕಲನ, 8 ಕಾದಂಬರಿ,10 ಪ್ರವಾಸ ಸಾಹಿತ್ಯ, 6 ಹಾಸ್ಯ ಸಾಹಿತ್ಯ 4 ವೈಚಾರಿಕ ಸಾಹಿತ್ಯದ ಪುಸ್ತಕಗಳು ಇವರಿಂದ ರಚಿತಗೊಂಡಿವೆ.ಇವಿಷ್ಟೇ ಅಲ್ಲ, ಬೇರೆಯವರ ನೂರಕ್ಕೂ ಹೆಚ್ಚು  ಪುಸ್ತಕಗಳನ್ನು ಪ್ರಕಟಿಸಿದ್ದಾರೆ!

ಬಾಲ್ಯದಲ್ಲಿ ಪತ್ರಿಕೆಗಳಲ್ಲಿ ಬರೆಯುವ ಹವ್ಯಾಸ ಇವರಿಗಿತ್ತು. ಪ್ರಕಟಿತ ಬರಹಗಳಿಗೆ ಕೃತಿ ರೂಪ ನೀಡಲು ಪ್ರಕಾಶಕರು ಹಿಂದೇಟು ಹಾಕಿದ್ದನ್ನೇ ಸವಾಲಾಗಿ ಸ್ವೀಕರಿಸಿ, ತನ್ನದೇ "ಸಂದೀಪ"ಎಂಬ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸ್ವಂತ ಕೃತಿಗಳ ಸೆಂಚುರಿ ಬಾರಿಸಿದ್ದಾರೆ.

ಕರ್ನಾಟಕದಲ್ಲಿ 140ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಜಯ: ಬಿ.ಎಸ್‌.ಯಡಿಯೂರಪ್ಪ

ಇತ್ತೀಚೆಗೆ ಇಂದಿರಾ ಅವರ ಸಂದೀಪ  ಪ್ರಕಾಶನದಡಿ 137ನೇ ಕೃತಿ "ಅಂತರಂಗ ಚಿಂತನ" ಲೋಕಾರ್ಪಣೆಯಾಗಿದೆ. ಬಾಲ್ಯದಲ್ಲೇ ಓದು, ಬರಹದ ಆಸಕ್ತಿಗೆ ಶಿಕ್ಷಕರು, ತಂದೆ ಪ್ರೇರಣೆಯಾದರು. 18ನೇ ವಯಸ್ಸಿಗೆ ಬರೆದ ಕಥೆ ಪತ್ರಿಕೆಯಲ್ಲಿ ಪ್ರಕಟವಾಯಿತು. ನಂತರ ಹಿಂದಿರುಗಿ ನೋಡಲೇ ಇಲ್ಲ. ಸಾಹಿತ್ಯಾಸಕ್ತಿ, ಬರಹಗಳು ಶಿಕ್ಷಕ ವೃತ್ತಿಗೂ ಪೂರಕ ವಾಯಿತು. ಎಸ್ಸೆಸ್ಸೆಲ್ಸಿ ಬಳಿಕ ಟಿಸಿಎಚ್ ಪೂರೈಸಿ ಖಾಸಗಿ ಸಹಿತ ಮೂರ್ನಾಲ್ಕು ಸರಕಾರಿ ಶಾಲೆಗಳಲ್ಲಿ ಕನ್ನಡ, ಹಿಂದಿ, ಸಮಾಜ ಶಿಕ್ಷಕಿಯಾಗಿ 40 ವರ್ಷಗಳ ಸೇವೆ ಬಳಿಕ 1992ರಲ್ಲಿ ನಿವೃತ್ತಿಯಾದರು. 86 ರ ಹರೆಯದಲ್ಲೂ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಿಗೆ ಹೋಗುತ್ತಾರೆ.

ಒನ್‌ ಡೇ ಸಿಇಓ‌ಗಳಾದ ಕೊಪ್ಪಳದ ಗ್ರಾಮೀಣ ವಿದ್ಯಾರ್ಥಿಗಳು

ಸದ್ಯ ಇಂದಿರಾ ಅಜ್ಜಿ ,ಮಗ ಮತ್ತು ಮೊಮ್ಮಗನ ಜೊತೆ ಹಳೆಕಾಲದ ಮನೆಯಲ್ಲಿ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ. ಯಾವುದೇ ಸದ್ದು ಗದ್ದಲ ಪ್ರಚಾರದ ಭರಾಟೆ ಇಲ್ಲದೆ ಅಪರೂಪದ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios