ಕುಂದಾಪುರ ಮೂಲದ ನಡು ವಯಸ್ಸಿನ ಮಹಿಳೆಯೊಬ್ಬರು ಅತ್ಯಂತ ಎತ್ತರದ ಪರ್ವತಾರೋಹಣ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಕುಂದಾಪುರ ಮೂಲದ 54 ವರ್ಷ ಪ್ರಾಯದ ಮಹಿಳೆ ವಿಲ್ಮಾ ಕ್ರಾಸ್ಟೊ ಕರ್ವಾಲೊ ಹೊಸ ಸಾಧನೆ ಮಾಡಿದ್ದಾರೆ.

ಉಡುಪಿ (ಸೆ.4): ಸಾಧನೆಗೆ ವಯಸ್ಸಿನ ಹಂಗಿಲ್ಲ ಅನ್ನೋ ಮಾತಿದೆ . ಪದೇ ಪದೇ ಅದನ್ನು ಸಾಬೀತು ಮಾಡುವ ಅನೇಕ ವಿದ್ಯಮಾನಗಳು ನಮ್ಮ ಸುತ್ತಮುತ್ತಲೇ ಜರುಗುತ್ತವೆ . ಪರ್ವತಾರೋಹಣ ಸುಲಭದ ಮಾತಲ್ಲ , ಪರ್ವತಗಳನ್ನು ಏರುವವರಿಗೆ ಉತ್ಸಾಹ ಇದ್ದರೆ ಸಾಲದು , ದೈಹಿಕ ಕ್ಷಮತೆಯು ಅಗತ್ಯ . ಕುಂದಾಪುರ ಮೂಲದ ನಡು ವಯಸ್ಸಿನ ಮಹಿಳೆಯೊಬ್ಬರು ಅತ್ಯಂತ ಎತ್ತರದ ಪರ್ವತಾರೋಹಣ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಕುಂದಾಪುರ ಮೂಲದ 54 ವರ್ಷ ಪ್ರಾಯದ ಮಹಿಳೆ ವಿಲ್ಮಾ ಕ್ರಾಸ್ಟೊ ಕರ್ವಾಲೊ ಹೊಸ ಸಾಧನೆ ಮಾಡಿದ್ದಾರೆ. ವಿಶ್ವದ 2ನೇ ಎತ್ತರದ ಮೋಟಾರು ಮಾರ್ಗವಾದ ಲಡಾಖ್‌ನ 17,982 ಅಡಿ ಎತ್ತರದ ಖರ್ದುಂಗ್ಲಾ ಪಾಸ್‌ನ ತುತ್ತತುದಿಗೆ ಬೈಕ್‌ನಲ್ಲಿ ತಲುಪುವ ಮೂಲಕ ಹೊಸ ಸಾಧನೆಗೈದಿದ್ದಾರೆ. ಈ ಮೂಲಕ , ಈ ಹಿಂದೆ ಅರ್ಧಕ್ಕೆ ಕೈ ಬಿಟ್ಟಿದ್ದ ಪ್ರಯತ್ನವನ್ನು ಮುಂದುವರಿಸಿ ಯಶಸ್ವಿಯಾಗಿದ್ದಾರೆ.ಕುಂದಾಪುರದ ರಾಜಕೀಯ ಮುತ್ಸದ್ಧಿ ದಿ| ಎಡ್ವಿನ್‌ ಕ್ರಾಸ್ಟೊ ಹಾಗೂ ಪುರಸಭಾ ಮಾಜಿ ಉಪಾಧ್ಯಕ್ಷೆ ಲಿಯೋನೆಲ್ಲಾ ಕ್ರಾಸ್ಟೊ ಅವರ ಪುತ್ರಿಯಾಗಿರುವ ವಿಲ್ಮಾ, ಲೆಸ್ಲಿ ಕರ್ವಾಲೊ ಅವರ ಧರ್ಮಪತ್ನಿ. ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಪೊರೇಟ್‌ ತರಬೇತುದಾರಾಗಿದ್ದಾರೆ. ಪರ್ವತಾರೋಹಣ ಮತ್ತು ಬೈಕಿಂಗ್ ಇವರ ಹವ್ಯಾಸವಾಗಿದ್ದು, ಇದೀಗ ಅಪ್ರತಿಮ ಸಾಹಸ ಮರೆದಿದ್ದಾರೆ. 54 ವರ್ಷದ ವಿಲ್ಮಾ ಲೇಹ್‌ನಿಂದ ಪುತ್ರಿ ಚೆರಿಶ್‌ ಕರ್ವಾಲೊ ಜತೆ ಬೈಕ್‌ನಲ್ಲಿ ಹೊರಟಿದ್ದರು.

ಲಡಾಖ್ ಅಮೃತ ಯಾತ್ರೆ–2022 ಭಾಗ-4: ಥ್ಯಾಂಕ್ಯೂ ಬ್ರೋ ಥ್ಯಾಂಕ್ಯೂ!

ತಮ್ಮ ಸುಧೀರ್ಘ ಪ್ರಯಾಣದಲ್ಲಿ ಒಟ್ಟು 900 ಕಿ.ಮೀ. ಪ್ರಯಾಣಿಸಿದ್ದು, ಈ ಪೈಕಿ ಸುಮಾರು 500 ಕಿ.ಮೀ. ವರೆಗೆ ವಿಲ್ಮಾ ಅವರೇ ಬೈಕ್‌ ಚಲಾಯಿಸಿದ್ದರು. ದುರ್ಗಮ ಹಾದಿ ಹಾಗೂ ಹೊಂದಿಕೆಯಾಗಲು ಕಷ್ಟವಾಗುವ ವಾತಾವರಣದ ನಡುವೆಯೂ ಪ್ರಯಾಣ ನಡೆಸಿದವರೆಗೆ. ಕಳೆದ ಬಾರಿ ಖರ್ದುಂಗ್ಲಾ ಪಾಸ್‌ ರಸ್ತೆಯ ತುತ್ತ ತುದಿಗೆ ತಲುಪಲು ಹೊರಟಾಗ ಬೈಕ್‌ ಹಾಳಾಗಿ ಹಿಂದಿರುಗುವಂತಾಗಿತ್ತು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶ ಸುತ್ತಿದ್ದ ಬೈಕರ್ ಕನ್ನಡತಿ ಅಮೃತಾಗೆ ಅದ್ಧೂರಿ ಸ್ವಾಗತ

ಸುಮಾರು 40 ಡಿಗ್ರಿ ಸೆಲ್ಸಿಯಸ್‌ ನಲ್ಲಿ, ಅತಿ ಕಡಿಮೆ ಆಮ್ಲಜನಕದ ಲಭ್ಯತೆಯ ನಡುವೆ ವಿಲ್ಮಾ ಅವರು ಖರ್ದುಂಗ್ಲಾ ಪಾಸ್‌ ಹಾದಿಯಲ್ಲಿ ಪ್ರಯಾಣಿಸಿದ್ದಾರೆ. ಇವರ ತಂಡದಲ್ಲಿ ಬಹುತೇಕ ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದು, 56 ವರ್ಷದ ವಿಲ್ಮಾ ಮಹಿಳೆಯಾಗಿ ಅಸಾಧಾರಣ ಈ ಸಾಧನೆ ಮಾಡಿದ್ದಾರೆ.