Shivamogga: ವಿದ್ಯುತ್ ತಂತಿ ಕಟ್ಟಿದ ಪರಿಣಾಮ ಆಹಾರ ಅರಸಿ ಬಂದು ಬಲಿಯಾದ ಕಾಡಾನೆಗಳು

ಶಿವಮೊಗ್ಗ ತಾಲೂಕಿನ ಶೆಟ್ಟಿಹಳ್ಳಿ ಆಭಯಾರಣ್ಯದಲ್ಲಿ ಎರಡು ಕಾಡಾನೆಗಳು ಆಹಾರ ಅರಸಿ ಬಂದು ಬಲಿಯಾಗಿವೆ. ಶಿವಮೊಗ್ಗ ತಾಲೂಕಿನ ಆಯನೂರು ಹೋಬಳಿಯ ಚೆನ್ನಹಳ್ಳಿಯ ಗ್ರಾಮದ ಆನೆಸರ ಬಳಿ ವಿದ್ಯುತ್ ಸ್ಪರ್ಶ ಗೊಂಡು ಎರಡು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. 

two wild elephants died in shivamogga after Touch  of electric wire gow

ಶಿವಮೊಗ್ಗ(ಸೆ.25): ಮಾನವ ಮತ್ತು ಪ್ರಾಣಿಗಳ ಸಂಘರ್ಷಕ್ಕೆ ಮೂಕ ಜೀವಿಗಳು ಬಲಿಯಾಗಿದೆ. ಮಾನವನ ಅತಿಯಾದ ಭೂ ಕಬಳಿಕೆಯ ದಾಹಕ್ಕೆ ಅರಣ್ಯ ನಾಶವಾಗುತ್ತಿರುವ ಬೆನ್ನಲ್ಲೇ ಅರಣ್ಯ ಪ್ರದೇಶದಲ್ಲಿ ಬಗರ್ ಹುಕುಂ ಸಾಗುವಳಿ ಮಾಡಲಾಗುತ್ತದೆ. ಇದರಿಂದಾಗಿ ಸ್ವಚ್ಚಂಧವಾಗಿ ಅರಣ್ಯದಲ್ಲಿ ಸಂಚರಿಸಿ ಆಹಾರ ಅರಸುತ್ತಿದ್ದ ಪ್ರಾಣಿಗಳನ್ನು ನಾಡಿಗೆ ಬರುವಂತೆ ಮಾಡುವ ಅನಾಹುತಕಾರಿ ಕಾರ್ಯ ನಡೆಯುತ್ತಿದೆ. ಅಂತೆಯೇ ಶಿವಮೊಗ್ಗ ತಾಲೂಕಿನ ಶೆಟ್ಟಿಹಳ್ಳಿ ಆಭಯಾರಣ್ಯದಲ್ಲಿ ಎರಡು ಕಾಡಾನೆಗಳು ಆಹಾರ ಅರಸಿ ಬಂದು ಬಲಿಯಾಗಿವೆ. ಶಿವಮೊಗ್ಗ ತಾಲೂಕಿನ ಆಯನೂರು ಹೋಬಳಿಯ ಚೆನ್ನಹಳ್ಳಿಯ ಗ್ರಾಮದ ಆನೆಸರ ಬಳಿ ವಿದ್ಯುತ್ ಸ್ಪರ್ಶ ಗೊಂಡು ಎರಡು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾಡು ಹಂದಿಗಳ ಹಾವಳಿಯನ್ನ ತಪ್ಪಿಸಲು ವಿದ್ಯುತ್ ತಂತಿ ಕಟ್ಟಿದ ಪರಿಣಾಮ ರಾತ್ರಿ ವೇಳೆಯಲ್ಲಿ ಬಂದ ಕಾಡಾನೆಗಳು ಸಾವನ್ನಪ್ಪಿದೆ. ಸುಮಾರು 28 ವರ್ಷದ ಒಂದು ಗಂಡಾನೆ ಮತ್ತೊಂದು 20 ವರ್ಷದ ಗಂಡಾನೆ ಸತ್ತಿದೆ. ಅರಣ್ಯ ಇಲಾಖೆ ಎಸಿಎಫ್ ಸುರೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಚೆನ್ನಹಳ್ಳಿಯ ಚಂದ್ರನಾಯ್ಕ ಎಂಬುವರಿಗೆ ಸೇರಿದ ಹೊಲದಲ್ಲಿ ಮೆಕ್ಕೆಜೋಳ ಬೆಳೆಯಲಾಗಿತ್ತು. ಕಾಡಾನೆಗಳು ರಾತ್ರಿಯ ವೇಳೆಯಲ್ಲಿ ಬಂದು ಹಾವಳಿ ಮಾಡಲು ಯತ್ನಿಸಿವೆ.ವಿದ್ಯುತ್ ಸ್ಪರ್ಶ ದಿಂದ ಎರಡು ಕಾಡಾನೆ ಸತ್ತಿದೆ ಎಂದು ಅರಣ್ಯ ಇಲಾಖೆಯವರು ಸ್ಪಷ್ಟಪಡಿಸಿದ್ದಾರೆ. ಇದೀಗ ಆನೆಗಳ ಶವ ಪರೀಕ್ಷೆ ನಡೆಸಿ ವಿದ್ಯುತ್ ಶಾಕ್ ನಿಂದ ಸತ್ತಿದ್ದು ದೃಡ ಪಟ್ಟಲ್ಲಿ ಭೂ ಮಾಲೀಕನ ವಿರುದ್ಧ ಕೇಸ್ ದಾಖಲಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಅಂತರವಳ್ಳಿ ಕೆರೆಯಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಕಾಡಾನೆಗಳು
ಹಲಗೂರು: ಬಸವನ ಬೆಟ್ಟಕ್ಕೆ ಓಡಿಸಿದ್ದ ಐದು ಕಾಡಾನೆಗಳು ಮತ್ತೆ ಅಂತರವಳ್ಳಿ ಕೆರೆಯಲ್ಲಿ ಪ್ರತ್ಯಕ್ಷಗೊಂಡು ಜನರಲ್ಲಿ ಆತಂಕ ಮೂಡಿಸಿದವು. ಕಳೆದ ಸೋಮವಾರ ಭೀಮನಕಿಂಡಿ ಅರಣ್ಯ ಪ್ರದೇಶದಿಂದ ಆಗಮಿಸಿದ್ದ ಐದು ಕಾಡಾನೆಗಳು ಬಾಳೆಹೊನ್ನಿಗ, ಗುಂಡಾಪುರ, ಎಚ್‌.ಬಸಾಪುರ ಮಾರ್ಗವಾಗಿ ಬಸವನಬೆಟ್ಟಅರಣ್ಯ ಪ್ರದೇಶದ ಕಡೆಗೆ ಓಡಿಸಲಾಗಿತ್ತು.

ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಂದಿಗೆ ಆನೆಯ ಆಟ: ನೋಡುಗರಿಗೆ ಪುಳಕ,ಕಾರು ಓನರ್‌ಗೆ ನಡುಕ

ಮತ್ತೆ ಭೀಮನಕಿಂಡಿ ಅರಣ್ಯ ಪ್ರದೇಶಕ್ಕೆ ಹೋಗುವುದಕ್ಕಾಗಿ ಅದೇ ಐದು ಕಾಡಾನೆಗಳು ಮತ್ತೆ ಬಾಣಸಮುದ್ರ ಮಾರ್ಗವಾಗಿ ಯತ್ತಂಬಾಡಿ, ಹೊಸಪುರ ಮತ್ತು ಇತರ ಗ್ರಾಮಗಳಲ್ಲಿ ಸಂಚರಿಸಿ ಅಂತರವಳ್ಳಿ ಕೆರೆಯಲ್ಲಿ ಬಿಡು ಬಿಟ್ಟಿದ್ದವು. ನಂತರ ಅರಣ್ಯಾಧಿಕಾರಿಗಳು ದಡಮಹಳ್ಳಿ ಮಾರ್ಗವಾಗಿ ಶಿಂಷಾ ನದಿ ದಾಟಿಸಿ ದಾರಿ ತಪ್ಪಿದ ಐದು ಕಾಡಾನೆಗಳು ಮತ್ತೆ ಅರಣ್ಯ ಪ್ರದೇಶದ ಕಡೆ ಓಡಿಸಲಾಯಿತು.

ಕಳೆದೋದ ಕಂದನ ಹುಡುಕಿಕೊಟ್ಟ ಅರಣ್ಯ ಸಿಬ್ಬಂದಿ: ಥ್ಯಾಂಕ್ಸ್ ಹೇಳಿದ ಅಮ್ಮ

ತೊರೆಕಾಡನಹಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಒಂದು ಆನೆ ದಾಟಿ ಹೋಗಿದ್ದು, ಮಿಕ್ಕ ನಾಲ್ಕು ಆನೆಗಳು ಸಹ ಮತ್ತೆ ಕಾಡಿಗೆ ಹೊರಟು ಹೋಗುತ್ತದೆ. ನಾವು ಇನ್ನೂ ಕಾರ್ಯಚರಣೆಯಲ್ಲಿ ಇರುವುದಾಗಿ ಮಹಾದೇವ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ 50 ಕ್ಕೂ ಸಿಬ್ಬಂದಿಯವರು ಕಾರ್ಯನಿರ್ವಹಿಸಿದರು. ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಮಹದೇವು, ದೇವರಾಜು, ಶಿವರಾಜು, ಪೊಲೀಸ್‌ ಸಬ… ಇನ್ಸ್‌ಪೆಕ್ಟರ್‌ ಡಿ.ರವಿಕುಮಾರ್‌ ಮತ್ತು ಸಿಬ್ಬಂದಿ ಇದ್ದರು.

Latest Videos
Follow Us:
Download App:
  • android
  • ios