Asianet Suvarna News Asianet Suvarna News

ವರುಣ ಕ್ಷೇತ್ರಕ್ಕೆ ಎರಡು ಸಾವಿರ ಮನೆ : ಯತೀಂದ್ರ ಸಿದ್ದರಾಮಯ್ಯ

ವರುಣ ಕ್ಷೇತ್ರಕ್ಕೆ ಎರಡು ಸಾವಿರ ಮನೆ ಮಂಜೂರಾಗಲಿದ್ದು, ಆಗ ಮನೆ ಇಲ್ಲದವರಿಗೆ ಮನೆಗಳನ್ನು ಕೊಡುವುದಾಗಿ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Two thousand houses for Varuna constituency snr
Author
First Published Dec 14, 2023, 9:14 AM IST

 ನಂಜನಗೂಡು :  ವರುಣ ಕ್ಷೇತ್ರಕ್ಕೆ ಎರಡು ಸಾವಿರ ಮನೆ ಮಂಜೂರಾಗಲಿದ್ದು, ಆಗ ಮನೆ ಇಲ್ಲದವರಿಗೆ ಮನೆಗಳನ್ನು ಕೊಡುವುದಾಗಿ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ವರುಣ ಕ್ಷೇತ್ರದ ಕೊಣನೂರು ಗ್ರಾಪಂ ವ್ಯಾಪ್ತಿಯ ಹನುಮನಪುರ, ವರಳ್ಳಿ, ಚಿಂಚನಹಳ್ಳಿ, ಪಿ. ಮರಳ್ಳಿ, ಮರಳ್ಳಿಪುರ, ಪಾಳ್ಯ, ಕೊಣನಪುರ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಹನುಮನಪುರ ಗ್ರಾಮದಲ್ಲಿ ಮಾತನಾಡಿದ ಅವರು, ವರುಣ ಕ್ಷೇತ್ರಕ್ಕೆ ಈಗಾಗಲೇ 2 ಸಾವಿರ ಮನೆಗಳು ಮಂಜುರಾಗಿದ್ದು, ಇನ್ನೂ ಹೆಚ್ಚುವರಿಯಾಗಿ 2 ಸಾವಿರ ಮನೆಗಳನ್ನು ಕೇಳಿದ್ದೇವೆ. ಅವು ಸದ್ಯದಲ್ಲೇ ಮಂಜುರಾಗಲಿದ್ದು ಆಗ ಅರ್ಜಿ ಕೊಟ್ಟಿರುವ ಎಲ್ಲರಿಗೂ ಮನೆಗಳನ್ನು ನೀಡುತ್ತೇವೆ ಎಂದರು.

ಇದೇ ವೇಳೆ ಹಲವಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.

ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಶಿವಸ್ವಾಮಿ, ಪ್ರದೀಪ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ವರುಣ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ನಾಗೇಶ್, ಪದ್ಮನಾಭ್, ಗಿರೀಶ್, ರಂಗಸ್ವಾಮಿ, ರಾಜಮ್ಮ, ಪುಟ್ಟಮ್ಮ, ತಹಸೀಲ್ದಾರ್ ಶಿವಕುಮಾರ್, ಇಓ ಜೆರಾಲ್ಡ್ ರಾಜೇಶ್, ಸಿಡಿಪಿಒ ಮಂಜುಳಾ, ಬಿಇಒ ಶಿವಲಿಂಗಯ್ಯ, ಸಿಪಿಐ ಗೋವಿಂದಯ್ಯ ಇದ್ದರು.

Follow Us:
Download App:
  • android
  • ios