Asianet Suvarna News Asianet Suvarna News

ಕಲಬುರಗಿ: ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ಇಬ್ಬರು ಶಿಕ್ಷಕರು ಅಮಾನತು

ಆಳಂದ ಪಟ್ಟಣದ ಸರ್ಕಾರಿ ಆದರ್ಶ ಬಸವರಾಜ ದೊಡ್ಡಮನಿ ಸರ್ಕಾರಿ ಹಿರಿಯ ಪ್ರಾಥಮಿಕ ಪರೀಕ್ಷಾ ಕೇಂದ್ರದಲ್ಲಿ 29 ಏಪ್ರಿಲ್ 2023ನೇ ಸಾಲಿಗೆ ನಡೆದ ಜವಾಹರ ನವೋದಯ ಶಾಲೆಗಳ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ ಖಚಿತ ಆರೋಪದ ಮೇಲೆ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಿ ಹೊರಡಿಸಿದ ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಅಪರ ಆಯುಕ್ತ ಡಾ. ಆಕಾಶ ಎಸ್. 

Two Teachers Suspended Due to Entrance Test Question Paper Leaked in Kalaburagi grg
Author
First Published Feb 2, 2024, 11:00 PM IST

ಆಳಂದ(ಫೆ.02):  ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಇನ್ನೂ ಹಸಿರಿರುವಾಗಲೇ ಶಾಲಾ ಮಕ್ಕಳ ಪ್ರವೇಶ ಪರೀಕ್ಷೆಯಲ್ಲೂ ಸ್ವತಃ ನಿಯೋಜಿತ ಮುಖ್ಯ ಶಿಕ್ಷಕ, ಸಹ ಶಿಕ್ಷಕರಿಬ್ಬರು ಸೇರಿಕೊಂಡು ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ಮೂಲಕ ಪ್ರತಿಭಾವಂತ ಮಕ್ಕಳ ಬದುಕಿಗೆ ಕೊಳ್ಳಿ ಇಡುವ ನೀಚ ಕೆಲಸವನ್ನು ಮಾಡಿರುವ ಮತ್ತೊಂದು ಹಗರಣ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಸರ್ಕಾರಿ ಆದರ್ಶ ಬಸವರಾಜ ದೊಡ್ಡಮನಿ ಸರ್ಕಾರಿ ಹಿರಿಯ ಪ್ರಾಥಮಿಕ ಪರೀಕ್ಷಾ ಕೇಂದ್ರದಲ್ಲಿ 29 ಏಪ್ರಿಲ್ 2023ನೇ ಸಾಲಿಗೆ ನಡೆದ ಜವಾಹರ ನವೋದಯ ಶಾಲೆಗಳ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ ಖಚಿತ ಆರೋಪದ ಮೇಲೆ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕನನ್ನು ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಅಪರ ಆಯುಕ್ತ ಡಾ. ಆಕಾಶ ಎಸ್. ಸೇವೆಯಿಂದ ಅಮಾನತುಗೊಳಿಸಿ ಹೊರಡಿಸಿದ್ದಾರೆ. 

ಮಹಿಳಾ ಸಹದ್ಯೋಗಿ ಮೇಲೆ ಹಲ್ಲೆ; ಕರ್ನಾಟಕದ ಐಪಿಎಸ್ ಅಧಿಕಾರಿ ತಮಿಳನಾಡಲ್ಲಿ ಅರೆಸ್ಟ್!

ಇದರಿಂದಾಗಿ ಸದರಿ ಪರೀಕ್ಷೆಯಲ್ಲಿ ನೊಂದ ಪಾಲಕರು ಮತ್ತು ವಿದ್ಯಾರ್ಥಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ತಾಲೂಕಿನ ಶಿಕ್ಷಣ ಇಲಾಖೆಯ ಹಿಂದಿನ ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾರಿ ಆಗಿದ್ದ ಪಡಸಾವಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ ದೊಡ್ಡಮನಿ, ಹಾಗೂ ಮೋಘಾ ಗ್ರಾಮದ ಶಾಲೆಯ ಸಹ ಶಿಕ್ಷಕ ಪರಮೇಶ್ವರ ದುಲಂಗೆ ಎಂಬುವರೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡಬಂದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಜ.17ರಂದು ಅಪರ ಆಯುಕ್ತರು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ನಿಯಮ-98(ಎ) ಪ್ರಕಾರ, ಜೀವನಾಂಶ ಭತ್ಯೆ ಪಡೆಯಲು, ಸದರಿಯವರುಗಳು ಅರ್ಹರಿರುತ್ತಾರೆ. ಸದರಿಯವರುಗಳು ಅಮಾನತಿನ ಆವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ಆಮಾನತ್ತಿನ ಆದೇಶದಲ್ಲಿ ಸೂಚಿಸಿದ್ದಾರೆ.

ಪ್ರಕರಣ ಬೆನ್ನಟ್ಟಿದ ಪಾಲಕರು: 

ದೇವಿಂದ್ರಪ್ಪ ಎಂ. ಶವರ ಮತ್ತು ಅರ್ಜುನ ಇಂಗಳೆ ಹಾಗೂ ಇತರ ಪಾಲಕರು ಸೇರಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಬಸವರಾಜ ದೊಡ್ಡಮನಿ ಹಾಗೂ ಪರಮೇಶ್ವರ ದುಲಂಗೆ ಅವರ ವಿರುದ್ಧ ಸರಣಿ ನಾಲ್ಕು ಬಾರಿ ಶಿಕ್ಷಣಾಧಿಕಾರಿ, ಡಿಡಿಪಿಐ ನಂತರ ಅಪರ ಆಯುಕ್ತರಿಗೆ ದೂರು ಸಲ್ಲಿಸಿ ಬೆನ್ನು ಬಿದ್ದ ಕಾರಣ ಎಚ್ಚೆತ್ತ ಶಿಕ್ಷಣ ಇಲಾಖೆ ಸಾಕ್ಷಿ ಮತ್ತು ಆರೋಪಿತರ ಹೇಳಿಕೆ ಆಲಿಸಿ ಈ ಕ್ರಮ ಜರುಗಿದೆ.

ಅಮಾನತ್ತಾದ ಬಸವರಾಜ ದೊಡ್ಡಮನಿ ಹಾಗೂ ಪರಮೇಶ್ವರ ದುಲಂಗೆ ಅವರು, ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ ಪರಮೇಶ್ವರ ದುಲಂಗೆ ಶಿಕ್ಷಕ ಪಟ್ಟಣದ ಪ್ರಾರ್ಥನಾ ಹಿರಿಯ ಪ್ರಾಥಮಿಕ ಶಾಲೆಯ ನವೋದಯ ಪರೀಕ್ಷೆಗೆ ಸಂಬಂಧಿತ ಕೋಚಿಂಗ ಸೆಂಟರ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ ಉತ್ತರಗಳನ್ನು ಪೂರೈಸಿ ಸದರಿ ಕೋಚಿಂಗ ಕೇಂದ್ರದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನ ಪಡೆಯುವಂತೆ ಮಾಡಿದ್ದರು. ಎಂಬಂಶ ಹೊರಬಿದ್ದಿದೆ.

ರಾಮನ ಹೆಸರಿನಲ್ಲಿ ‘ಧರ್ಮ’ ರಾಜಕಾರಣ: ಮುಖ್ಯಮಂತ್ರಿ ಚಂದ್ರು

ಈ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಕ್ಷೇತ್ರ ಸಮನ್ವಯಾಧಿಕಾರಿ ಆಗಿದ್ದ ಪಡಸಾವಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ ದೊಡ್ಡಮನಿ ಹಾಗೂ ಮೋಫಾಕೆ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪರಮೇಶ್ವರ ದುಲಂಗೆ ಸೇರಿಕೊಂಡು ಪರೀಕ್ಷಾ ನಿಯಮಬಾಹಿರವಾಗಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆಗಳನ್ನು ಮಾಡಿದ್ದಾರೆ. ಅಲ್ಲದೆ, ಪ್ರಾರ್ಥನಾ ಕೋಚಿಂಗ ಕೇಂದ್ರವೊಂದರಲ್ಲೇ 20 ವಿದ್ಯಾರ್ಥಿಗಳು ಹೆಚ್ಚಿನ ಅಂಕಪಡೆದು ಪಾಸಾಗಿದ್ದಾರೆ ಎಂದು ನೊಂದಪಾಲಕ ದೇವಿಂದ್ರಪ್ಪ ಎಂ. ಶವರೆ ಮತ್ತು ಅರ್ಜುನ ಇಂಗಳ ಹಾಗೂ ಇತರ ಪಾಲಕರು ದೂರು ಸಲ್ಲಿಸಿದ್ದರು.

ವರದಿಯಲ್ಲಿ ಆರೋಪಗಳು ಸಾಬೀತು:

ಪಾಲಕರಅರ್ಜಿಯ ದೂರಿನಂತೆ ಶಿಕ್ಷಣ ಇಲಾಖೆಯ ಹಂತ ಹಂತದನಿಯೋಜಿತತನಿಖಾಧಿಕಾರಿಗಳು ತಮ್ಮ ಪ್ರಾಥಮಿಕವರದಿಯಲ್ಲಿಉಲ್ಲೇಖಿಸಿದಂತೆ ಪಟ್ಟಣದ ಪ್ರಾರ್ಥನಾ ಕೋಚಿಂಗ ಸೆಂರ್ಟನಲ್ಲಿ ಕೊಂಚಿಂಗ ಪಡೆದ ವಿದ್ಯಾರ್ಥಿಗಳು, ಜವಾಹರ ನವೋದಯ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳು ಪಡೆದಿರುವುದು, ಪ್ರಾಥಮಿಕ ವಿಚಾರಣಾ ವರದಿಗಳಿಂದ ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡುಬಂದಿರುವುದೆ ರಿಂದ ಹಿಂದಿನ ಕ್ಷೇತ್ರ ಸಮನ್ವಯಾಧಿಕಾರಿ ಬಸವರಾಜ ದೊಡ್ಡಮನಿ, ಹಾಗೂ ಪರಮೇಶ್ವರ ದುಲಂಗೆ ಇವರು ಸರ್ಕಾರಿ ನೌಕರರಾಗಿದ್ದು ಕೊಂಡು ಸರ್ಕಾರಿ ನೌಕರರ ನಿಯಮ (1). (11), (111) ಉಲ್ಲಂಘಿಸಿದ್ದಾರೆ ಎಂದು ಉಲ್ಲೇಖಿಸಿದ್ದು, ಅಲ್ಲದೆ, ಶಿಸ್ತು ಕ್ರಮಕ್ಕೆ ಗುರಿಯಾಗಿರುವ ಕುರಿತು ಶಿಕ್ಷಣ ಇಲಾಖೆ ಉಪನಿರ್ದೇಶಕರು, ಹಿಂದಿನ ಕ್ಷೇತ್ರ ಶಿಕ್ಷಣಾಧಿ ಕಾರಿಗಳು, ಕಲಬುರಗಿ ಆರ್‌ಎಂಎಸ್ಎ ಸಹಾಯಕಸಮನ್ವಯಾಧಿಕಾರಿಗಳಪರಿಶೀಲನಾ ವರದಿ ಅನ್ವಯ ಕುರಿತು ಅಮಾನತಾದ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Follow Us:
Download App:
  • android
  • ios